ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಜ.೨೬ರಂದು ರಾಷ್ಟ್ರ ರಾಜಧಾನಿ ನವದೆಹಲಿಯ ಕೆಂಪು ಕೋಟೆಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪರೇಡ್ ಸಮಾರಂಭದಲ್ಲಿ ಭಾಗವಹಿಸಲು ಈ ಬಾರಿ ಮಂಡ್ಯ ಜಿಲ್ಲೆಯ ಕ್ರಿಯಾಶೀಲವಾಗಿ ಮುನ್ನಡೆಯುತ್ತಿರುವ ಮಂಡ್ಯ ರಾಸಾಯನಿಕ ಮುಕ್ತ ಬೆಲ್ಲ ರೈತ ಉತ್ಪಾದಕ ಕಂಪನಿಯ ಅಧ್ಯಕ್ಷ ಮಹದೇವು ಮತ್ತು ಪದಾಧಿಕಾರಿಗಳಿಗೆ ಆಯ್ಕೆ ಮಾಡಲಾಗಿದೆ ಎಂದು ಸಂಘದ ಸಿಇಒ ಎನ್.ಎಸ್.ಪ್ರದೀಪ್ ಅವರು ತಿಳಿಸಿದ್ದಾರೆ.ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ನೆನಪಿಗಾಗಿ ಪ್ರಧಾನಿ ನರೇಂದ್ರ ಮೋದಿಯವರು ವಿಶೇಷ ಆಸಕ್ತಿಯ ಮೇರೆಗೆ ಕಳೆದ ಸ್ವಾತಂತ್ರ್ಯ ದಿನದಂದು ಆರಂಭವಾದ ರೈತ ಸ್ನೇಹಿ ಕಾರ್ಯಕ್ರಮದ ಮುಂದುವರಿದ ಭಾಗವಾಗಿ ಈ ಬಾರಿ ನಮ್ಮ ಮಂಡ್ಯ ಬೆಲ್ಲ ರೈತ ಉತ್ಪಾದಕರ ಕಂಪನಿಯ ಹಳುವಾಡಿ ಕೃಷ್ಣ, ವೆಂಕಟೇಗೌಡ, ಮಂಗಲ ಪ್ರಕಾಶ್ ಮತ್ತು ಅವರ ಕುಟುಂಬ ವರ್ಗ ಕೂಡ ಭಾಗವಹಿಸುತ್ತಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಬಿವೃದ್ಧಿ ಬ್ಯಾಂಕ್ ಅಧಿಕಾರಿಗಳ ತಂಡ ಪ್ರಧಾನಿ ಕಾರ್ಯಲಯದ ಆದೇಶದ ಮೇರೆಗೆ ಈ ಸಮಾರಂಭಕ್ಕೆ ಆಹ್ವಾನಿಸಿದ್ದು, ನಾಳೆ (ಜ.೨೨)ಈ ತಂಡ ಗಣರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಲು ದೆಹಲಿಗೆ ಪ್ರಯಾಣ ಬೆಳೆಸುತ್ತಿದೆ.ಧರ್ಮದ ಆಧಾರದ ಮೇಲೆ ಚುನಾವಣೆ ನಡೆಸಲು ಒತ್ತಾಯ
ಕನ್ನಡಪ್ರಭ ವಾರ್ತೆ ಮಂಡ್ಯಜಾತಿ ಆಧಾರದಲ್ಲಿ ಚುನಾವಣೆಗೆ ಅವಕಾಶ ನೀಡುವುದನ್ನು ಬಿಟ್ಟು ಧರ್ಮದ ಆಧಾರದ ಮೇಲೆ ಚುನಾವಣೆ ನಡೆಸುವಂತೆ ಹೋರಾಟಗಾರ ಗೋಪಾಲಸ್ವಾಮಿ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದರು.
ಹಿಂದೂ ಧರ್ಮವನ್ನು ಹೊರತು ಪಡಿಸಿ ಇತರೆ ಧರ್ಮಗಳಲ್ಲಿ ಜಾತಿಗಳಿಲ್ಲ. ಅದೇ ರೀತಿ ಹಿಂದೂ ಧರ್ಮದಲ್ಲಿಯೂ ಜಾತಿಯ ನಿರ್ಮೂಲನೆಯಾಗಬೇಕು. ಹಿಂದೂಗಳಲ್ಲಿ ಮಾತ್ರ ಜಾತಿಗಳನ್ನು ವಿಂಗಡಿಸಿ ಸರ್ಕಾರ ಹಿಂದೂ ಧರ್ಮವನ್ನು ತುಳಿಯುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.ಹಿಂದು ಧರ್ಮದಲ್ಲಿ ಜಾತಿ ಪದ್ಧತಿಯನ್ನು ಅಳಿಸಬೇಕಾಗಿದೆ. ಈ ನಿಟ್ಟಿನಲ್ಲಿ ಹೋರಾಡುತ್ತಿದ್ದೇನೆ. ಜಿಲ್ಲಾಧಿಕಾರಿಗಳು ಹಾಲು ಒಕ್ಕೂಟದ ಚುನಾವಣೆಯನ್ನು ಜಾತಿ ಆಧಾರದಲ್ಲಿ ನಡೆಸಲು ಅವಕಾಶ ಕಲ್ಪಿಸಿದ್ದು, ಕೂಡಲೇ ಇದನ್ನು ನಿಲ್ಲಿಸಬೇಕು. ಧರ್ಮದ ಆಧಾರದ ಮೇಲೆ ಚುನಾವಣೆ ನಡೆಸಬೇಕು. ಇಲ್ಲದೇ ಹೋದಲ್ಲಿ ಜಿಲ್ಲಾಧಿಕಾರಿ ವಿರುದ್ಧ ನ್ಯಾಯಾಲಯದ ಮೊರೆ ಹೋಗುತ್ತೇನೆ ಎಂದು ಎಚ್ಚರಿಕೆ ನೀಡಿದರು.