ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರು ವಿವಿ ಯುವರಾಜ ಕಾಲೇಜು ಒಳಾಂಗಣ ಮತ್ತು ದೈಹಿಕ ಶಿಕ್ಷಣ ವಿಭಾಗದ ಕ್ರೀಡಾಂಗಣದಲ್ಲಿ ಹಾಗೂ ವಿಶ್ವವಿದ್ಯಾನಿಲಯ ಈಜುಕೊಳದಲ್ಲಿ ನಡೆದ ಮೈಸೂರು ವಿವಿ ಅಂತರ ಕಾಲೇಜುಗಳ ಮಹಿಳೆಯರ ಸ್ಪರ್ಧೆ ಮತ್ತು ವಿವಿ ತಂಡಗಳ ಆಯ್ಕೆ ಪ್ರಕ್ರಿಯೆಯಲ್ಲಿ ಮೈಸೂರಿನ ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಕ್ರೀಡಾಪಟುಗಳು ಅತ್ಯುತ್ತಮ ಸಾಧನೆಗೈದಿದ್ದಾರೆ.ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಜಿಮ್ನಾಸ್ಟಿಕ್ ನಲ್ಲಿ ಸಮಗ್ರ ತಂಡ ಪ್ರಶಸ್ತಿ ಪಡೆದಿದ್ದಾರೆ. ಅಲ್ಲದೆ ಕರಾಟೆ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿಯೂ ಪ್ರಥಮ ಸ್ಥಾನದೊಂದಿಗೆ ಸಮಗ್ರ ತಂಡ ಪ್ರಶಸ್ತಿಯನ್ನು ಸತತ ಎರಡು ವರ್ಷಗಳಿಂದ ಮುಡಿಗೇರಿಸಿಕೊಂಡಿದ್ದಾರೆ. ಮೂರು ದಿನ ನಡೆದ ವಿಶ್ವವಿದ್ಯಾನಿಲಯ ಸ್ಪರ್ಧೆಯಲ್ಲಿ ಒಟ್ಟು 29 ಪದಕಗಳನ್ನು ಪಡೆಯುವುದರೊಂದಿಗೆ ಮಹಿಳೆಯರ ವಿಭಾಗದಲ್ಲಿ ಕಾಲೇಜು ಅತ್ಯುತ್ತಮ ಸಾಧನೆ ಮಾಡಿದೆ.
ಕಿಕ್ ಬಾಕ್ಸಿಂಗ್- ತೃತೀಯ ಬಿಎ ಎಚ್.ಎನ್. ಪುಷ್ಪಲತಾ 70 ಕೆಜಿ ವಿಭಾಗದಲ್ಲಿ ಒಂದು ಚಿನ್ನ, ತೇಜಶ್ರೀ ಬೋಜೇಗೌಡ 75 ಕೆಜಿ ವಿಭಾಗದಲ್ಲಿ ಚಿನ್ನದ ಪದಕ , ಬಿಂದುಶ್ರೀ 75 ಕೆಜಿ ಮೇಲ್ಪಟ್ಟ ವಿಭಾಗದಲ್ಲಿ ಚಿನ್ನದ ಪದಕ, ಕೆ. ರೇಖಾ 55 ಕೆಜಿ ವಿಭಾಗದಲ್ಲಿ ಚಿನ್ನದ ಪದಕ, ವಿ. ಲಕ್ಷ್ಮಿ 45 ಕೆಜಿ ವಿಭಾಗದಲ್ಲಿ ಚಿನ್ನದ ಪದಕ, ಐಮಾನ್ ಪ್ರಥಮ ಬಿಎ 60 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ, ಪ್ರತಿಭಾ ಪ್ರಥಮ ಬಿಎ 45 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ.ಕರಾಟೆ ಪಲಿತಾಂಶ- ತೇಜಶ್ರೀ ಬೋಜೇಗೌಡ ಚಿನ್ನದ ಪದಕ, ಎಚ್.ಎನ್. ಪುಷ್ಪಲತಾ ಬೆಳ್ಳಿ ಪದಕ.
ಜಿಮ್ನಾಸ್ಟಿಕ್ ಫಲಿತಾಂಶ- ಎಚ್.ಪಿ. ಸಿಂಚನ ಒಂದು ಚಿನ್ನ, ಎರಡು ಬೆಳ್ಳಿ, ಬಿ.ಆರ್. ಶ್ರೀರಕ್ಷಾ ಒಂದು ಚಿನ್ನ, ಒಂದು ಬೆಳ್ಳಿ, ಸಿ. ಪುಷ್ಪಾ ಒಂದು ಕಂಚಿನ ಪದಕ ಪಡೆದಿದ್ದು ಸಮಗ್ರ ತಂಡ ಪ್ರಶಸ್ತಿ ಪಡೆದಿದ್ದಾರೆ.ಕುಸ್ತಿ ಫಲಿತಾಂಶ- ಸಿ. ಪುಷ್ಪಾ 59 ಕೆಜಿ ವಿಭಾಗದಲ್ಲಿ ಬೆಳ್ಳಿ, ಎಂ.ಟಿ. ಪ್ರಣತಿ 67 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ.
ಈಜು ಸ್ಪರ್ಧೆ ಫಲಿತಾಂಶ- ಎಂ.ಎಸ್. ಅನಿತಾ ದ್ವಿತೀಯ ಬಿಎ ಎರಡು ಬೆಳ್ಳಿ, ಎರಡು ಕಂಚು, ಸಿ. ಶ್ರೀರಕ್ಷ 2 ಬೆಳ್ಳಿ ಒಂದು ಕಂಚು ಪದಕ ಪಡೆದಿದ್ದಾರೆ.ವೇಯಿಟ್ ಲಿಫ್ಟಿಂಗ್- ಸಿಂಧು 65 ಕೆಜಿ ವಿಭಾಗ ಬೆಳ್ಳಿ ಪದಕ, ಬಿಂದುಶ್ರೀ 80 ಕೆಜಿ ಮೇಲ್ಪಟ್ಟ ವಿಭಾಗ ಬೆಳ್ಳಿ ಪದಕ, ಸಿ. ರಕ್ಷಿತಾ 59 ಕೆಜಿ ವಿಭಾಗ ಕಂಚಿನ ಪದಕ, ಪಿ. ರಂಜಿತಾ 50 ಕೆಜಿ ವಿಭಾಗದಲ್ಲಿ ಕಂಚಿನ ಪದಕ, ಶ್ರೀರಕ್ಷ 55 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದು ವಿಶ್ವವಿದ್ಯಾನಿಲಯದಲ್ಲಿ ಮಟ್ಟದ ಸ್ಪರ್ಧೆಯಲ್ಲಿ ಮಹಾರಾಣಿ ಮಹಿಳಾ ಕಲಾ ಕಾಲೇಜು ಅಮೋಘ ಸಾಧನೆ ಮಾಡಿದೆ.
ಈ ಕ್ರೀಡಾಪಟುಗಳ ಸಾಧನೆಯನ್ನು ಕಾಲೇಜಿನ ಪ್ರಾಂಶುಪಾಲೆ ಡಾ.ಎಂ. ವಿಜಯಮ್ಮ, ದೈಹಿಕ ಶಿಕ್ಷಣ ನಿರ್ದೇಶಕ ಡಾ.ಕೆ.ಎಸ್. ಭಾಸ್ಕರ್, ಸಿ.ಎಸ್. ಮೋಹನ್ ಕುಮಾರ್ ಮತ್ತು ಕಾಲೇಜಿನ ಎಲ್ಲಾ ಅಧ್ಯಾಪಕ ಅಧ್ಯಾಪಕಿತರ ಸಿಬ್ಬಂದಿ ಅಭಿನಂದಿಸಿದ್ದಾರೆ.