ಸಾರಾಂಶ
ಸೌಜನ್ಯ ನೇಕಾರರ ಬಡಾವಣೆಯಲ್ಲಿ ರಾಜೀವ ಗಾಂಧಿ ವಸತಿ ನಿಗಮದ ಮೂಲಭೂತ ಸೌಕರ್ಯ ಕಲ್ಪಿಸುವ ಅನುದಾನದಡಿ ₹79.50 ಲಕ್ಷ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಪಡಿಸುವ ಕಾಮಗಾರಿಗೆ ಭೂಮಿಪೂಜೆ
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಬಡ ನೇಕಾರರ ಬಹುದಿನಗಳ ಕನಸಿನ ಬಡಾವಣೆಯ ಕಾಮಗಾರಿ ಉತ್ತಮ ಗುಣಮಟ್ಟದ್ದಿರಲಿ ಮತ್ತು ನೇಕಾರರು ಉತ್ತಮ ಮನೆ ನಿರ್ಮಿಸಿಕೊಂಡು ಸ್ವಾವಲಂಬನೆಯ ಬದುಕು ಕಟ್ಟಿಕೊಳ್ಳುವಂತಹ ಬಡಾವಣೆ ನಿರ್ಮಾಣವಾಗಬೇಕೆಂದು ಶಾಸಕ ಸಿದ್ದು ಸವದಿ ಹೇಳಿದರು.ಸ್ಥಳೀಯ ಸೌಜನ್ಯ ನೇಕಾರರ ಬಡಾವಣೆಯಲ್ಲಿ ರಾಜೀವ ಗಾಂಧಿ ವಸತಿ ನಿಗಮದ ಮೂಲಭೂತ ಸೌಕರ್ಯ ಕಲ್ಪಿಸುವ ಅನುದಾನದಡಿ ₹79.50 ಲಕ್ಷ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಪಡಿಸುವ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು. ನಂತರ ಸಾಂಕೇತಿಕವಾಗಿ ನಾಲ್ವರು ಫಲಾನುಭವಿಗಳಿಗೆ ಮನೆ ಮಂಜೂರಾತಿ ಮತ್ತು ಕಾಮಗಾರಿ ಆದೇಶ ಪತ್ರ ವಿತರಿಸಿದರು.
ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ, ಉಪಾಧ್ಯಕ್ಷೆ ಶೀಲಾ ಭಾವಿಕಟ್ಟಿ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಸನಗೌಡ ಪಾಟೀಲ, ಜಿಪಂ ಮಾಜಿ ಅಧ್ಯಕ್ಷ ಮಹಾಂತೇಶ ಹಿಟ್ಟಿನಮಠ, ಭಾಜಪ ಗ್ರಾಮೀಣ ಘಟಕದ ಅಧ್ಯಕ್ಷ ಸುರೇಶ ಅಕ್ಕಿವಾಟ, ಪ್ರಧಾನ ಕಾರ್ಯದರ್ಶಿ ಮಹಾಲಿಂಗಪ್ಪ ಕುಳ್ಳೊಳ್ಳಿ, ಪುರಸಭಾ ಸದಸ್ಯರಾದ ಶೇಖರ ಅಂಗಡಿ, ಮುಸ್ತಾಕ ಚಿಕ್ಕೋಡಿ, ಚನ್ನಬಸು ಯರಗಟ್ಟಿ, ತಿಪ್ಪಣ್ಣ ಬಂಡಿವಡ್ಡರ, ಮುಖಂಡರಾದ ಜಿ.ಎಸ್.ಗೊಂಬಿ, ಲಕ್ಕಪ್ಪ ಪಾಟೀಲ, ಸುನೀಲಗೌಡ ಪಾಟೀಲ, ಶಿವಲಿಂಗ ಘಂಟಿ, ಶಂಕರಗೌಡ ಪಾಟೀಲ, ವಿಷ್ಣುಗೌಡ ಪಾಟೀಲ, ಮಹೇಶ ಮುಕುಂದ, ಅರ್ಜುನ ಮೋಪಗಾರ, ಹರೀಶ ನಾಯಕ, ಪ್ರಶಾಂತ ಮುಕ್ಕೆನ್ನವರ,ರವಿ ಗಿರಿಸಾಗರ, ಮಹೇಶ ಜಿಡ್ಡಿಮನಿ, ಶ್ರೀಶೈಲ ಕಾರಜೋಳ, ಬಸವರಾಜ ನಾಗನೂರ, ಮಹಾಲಿಂಗ ಹುಲ್ಯಾಳ, ಮಹಾಲಿಂಗ ಶಿವಣಗಿ, ಬಸವರಾಜ ಮಡಿವಾಳ, ಆರ್.ಎಂ.ಸಂತಿ, ಅಮಿತ ಮದ್ದಿನಮಠ ಇದ್ದರು.