ಹೊಲಿಗೆ ಯಂತ್ರ ಮೂಲಕ ಮಹಿಳಾ ಸ್ವಾವಲಂಬಿ: ಕಾಮತ್‌

| Published : Jul 08 2024, 12:32 AM IST

ಸಾರಾಂಶ

ಡಾ. ಶ್ಯಾಮ್ ಪ್ರಸಾದ್ ಮುಖರ್ಜಿಯವರ ಜನ್ಮದಿನ ಹಾಗೂ ಪುಣ್ಯಸ್ಮರಣೆಯ ಸೇವಾ ಪಾಕ್ಷಿಕ ಅಭಿಯಾನದ ಅಂಗವಾಗಿ ಮಹಿಳೆಯರ ಸ್ವಾವಲಂಬಿ ಬದುಕಿಗೆ ನೆರವಾಗುವ ದೃಷ್ಟಿಯಿಂದ ಹೊಲಿಗೆ ಯಂತ್ರವನ್ನು ವಿತರಿಸಲಾಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲದ ಮಹಿಳಾ ಮೋರ್ಚಾ ವತಿಯಿಂದ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿಯವರ ಜನ್ಮದಿನ ಹಾಗೂ ಪುಣ್ಯಸ್ಮರಣೆಯ ಸೇವಾ ಪಾಕ್ಷಿಕ ಅಭಿಯಾನದ ಅಂಗವಾಗಿ ಮಹಿಳೆಯರ ಸ್ವಾವಲಂಬಿ ಬದುಕಿಗೆ ನೆರವಾಗುವ ದೃಷ್ಟಿಯಿಂದ ಹೊಲಿಗೆ ಯಂತ್ರವನ್ನು ವಿತರಿಸಲಾಯಿತು.

ನಗರದ ಅಟಲ್ ಸೇವಾ ಕೇಂದ್ರದಲ್ಲಿ ಶುಕ್ರವಾರ ನಡೆದ ಈ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್, ಮಹಿಳಾ ಮೋರ್ಚಾದವರು ದಾನಿಗಳ ಸಹಾಯದಿಂದ ನಡೆಸುತ್ತಿರುವ ಈ ಕಾರ್ಯ ಶ್ಲಾಘನೀಯ. ಮಹಿಳೆಯರು ಆರ್ಥಿಕವಾಗಿ ಸದೃಢಗೊಳ್ಳಲು ಹೊಲಿಗೆ ಯಂತ್ರದ ಕೊಡುಗೆ ಬಹಳ. ಅವರು ತಮ್ಮ ಮನೆಯ ನಿರ್ವಹಣೆ ಜತೆಗೆ ಸ್ವಉದ್ಯೋಗವಾಗಿ ಇದನ್ನು ನಡೆಸಬಹುದು. ಕೋವಿಡ್ ಸಂಕಷ್ಟದ ಸಮಯದಲ್ಲಿ ನಮ್ಮ ಜಿಲ್ಲೆಯ ಇಂತಹದೇ ಮಹಿಳೆಯರು ಮನೆಯಲ್ಲೇ ಕೂತು ಕೋವಿಡ್ ವಾರಿಯರ್‌ಗಳಿಗೆ ಸಾವಿರಾರು ಮಾಸ್ಕ್‌ಗಳನ್ನು ತಯಾರಿಸಿಕೊಟ್ಟಿದ್ದರು. ಅವರ ಈ ಕಾರ್ಯವನ್ನು ಎಂದಿಗೂ ಮರೆಯುವುದಿಲ್ಲ. ಇಂತಹ ಸ್ವಾವಲಂಬಿ ತಾಯಂದಿರ ಸಂಖ್ಯೆ ಹೆಚ್ಚಾಗಲಿ ಎಂದು ಹಾರೈಸಿದರು.ಮುಖಂಡರಾದ ರಮೇಶ್ ಕಂಡೆಟ್ಟು, ಪೂರ್ಣಿಮಾ, ವಿಜಯ್ ಕುಮಾರ್ ಶೆಟ್ಟಿ, ಪೂರ್ಣಿಮಾ ರಾವ್, ರವಿಶಂಕರ್ ಮಿಜಾರ್, ಅಜಯ್ ಕುಲಶೇಖರ, ಹರೀಶ್ ರೈ, ಶಬರಿ, ಕಮಲಾಕ್ಷಿ, ಸಂಧ್ಯಾ ವೆಂಕಟೇಶ್ ಮತ್ತಿತರರಿದ್ದರು.