ಸ್ವಾವಲಂಬನೆ, ಸೇವೆ ಇನ್ನರ್ ವೀಲ್‌ ಗುರಿ: ಪೂರ್ಣಿಮಾ ರವಿ

| Published : May 27 2024, 01:04 AM IST

ಸ್ವಾವಲಂಬನೆ, ಸೇವೆ ಇನ್ನರ್ ವೀಲ್‌ ಗುರಿ: ಪೂರ್ಣಿಮಾ ರವಿ
Share this Article
  • FB
  • TW
  • Linkdin
  • Email

ಸಾರಾಂಶ

ಕೊಪ್ಪ, ಮಹಿಳೆಯರಲ್ಲಿ ಪರಸ್ಪರ ಮೈತ್ರಿ, ಸ್ವಾವಲಂಬನೆ, ನಾಯಕತ್ವಗುಣ, ಸೇವಾ ಮನೋಭಾವನೆ ಮತ್ತು ತಿಳುವಳಿಕೆ ಮೂಡಿಸುವುದು ಅಂತಾರಾಷ್ಟ್ರೀಯ ಮಹಿಳಾ ಸಂಘಟನೆಯಾಗಿರುವ ಇನ್ನರ್ ವೀಲ್ ಕ್ಲಬ್‌ನ ಉದ್ದೇಶವಾಗಿದೆ ಎಂದು ಕ್ಲಬ್‌ನ ೩೧೮ನೇ ಜಿಲ್ಲಾಧ್ಯಕ್ಷೆ ಪೂರ್ಣಿಮಾ ರವಿ ತಿಳಿಸಿದರು.

ಕನ್ನಡಪ್ರಭ ವಾರ್ತೆ, ಕೊಪ್ಪ

ಮಹಿಳೆಯರಲ್ಲಿ ಪರಸ್ಪರ ಮೈತ್ರಿ, ಸ್ವಾವಲಂಬನೆ, ನಾಯಕತ್ವಗುಣ, ಸೇವಾ ಮನೋಭಾವನೆ ಮತ್ತು ತಿಳುವಳಿಕೆ ಮೂಡಿಸುವುದು ಅಂತಾರಾಷ್ಟ್ರೀಯ ಮಹಿಳಾ ಸಂಘಟನೆಯಾಗಿರುವ ಇನ್ನರ್ ವೀಲ್ ಕ್ಲಬ್‌ನ ಉದ್ದೇಶವಾಗಿದೆ ಎಂದು ಕ್ಲಬ್‌ನ ೩೧೮ನೇ ಜಿಲ್ಲಾಧ್ಯಕ್ಷೆ ಪೂರ್ಣಿಮಾ ರವಿ ತಿಳಿಸಿದರು.

ಭಾನುವಾರ ಪಟ್ಟಣದ ಪುರಭವನದಲ್ಲಿ ‘ಇನ್ನರ್ ವೀಲ್ ಕ್ಲಬ್ ಕೊಪ್ಪ-ಸೆಂಚುರಿ’ ನೂತನ ಘಟಕ ಉದ್ಘಾಟಿಸಿ ಮಾತನಾಡಿದ ಅವರು, ೧೯೨೪ರಲ್ಲಿ ಇಂಗ್ಲೆಂಡಿನ ಮಾಂಚೆಸ್ಟರ್‌ನಲ್ಲಿ ಸ್ಥಾಪನೆಯಾಗಿರುವ ಇನ್ನರ್ ವೀಲ್‌ಕ್ಲಬ್ ಇಂದು ಶತಮಾನೋತ್ಸವ ಸಂಭ್ರಮದಲ್ಲಿದೆ. ಈ ಸುಸಂದರ್ಭ ತೀರ್ಥಹಳ್ಳಿ ಇನ್ನರ್ ವೀಲ್‌ಕ್ಲಬ್‌ನ ಮಾರ್ಗದರ್ಶನದಲ್ಲಿ ಸ್ಥಾಪನೆಗೊಳ್ಳುತ್ತಿರುವ ‘ಇನ್ನರ್ ವೀಲ್‌ಕ್ಲಬ್ ಕೊಪ್ಪ-ಸೆಂಚುರಿ’ಯು ‘ಶಶಮಾನೋತ್ಸವದ ಕ್ಲಬ್’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ನಿಟ್ಟಿನಲ್ಲಿ ಕ್ಲಬ್‌ನ ಪದಾಧಿಕಾರಿಗಳು ಮತ್ತು ಸದಸ್ಯರು ಹೆಚ್ಚಿನ ಜವಾಬ್ದಾರಿಯಿಂದ ಪ್ರತೀ ತಿಂಗಳು ಸಭೆ ನಡೆಸಿ ಉತ್ತಮ ಸೇವಾ ಚಟುವಟಿಕೆ ಗಳ ಮೂಲಕ ಈ ಕ್ಲಬ್‌ನ್ನು ಮಾದರಿ ಸಂಸ್ಥೆಯಾಗಿ ಮುನ್ನಡೆಸಬೇಕಿದೆ ಎಂದು ಕರೆ ನೀಡಿದರು. ಜಿಲ್ಲೆ ೩೧೮ರ ಇಎಸ್‌ಒ ವಾರಿಜಾ ಜಗದೀಶ್ ಮಾತನಾಡಿ ಇನ್ನರ್‌ವೀಲ್ ಕ್ಲಬ್‌ನ ೩೧೮ನೇ ಜಿಲ್ಲೆ ಚಿಕ್ಕಮಗಳೂರು ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ, ಕೊಡಗು, ಹಾಸನ ಮತ್ತು ಮೈಸೂರು ಸೇರಿದಂತೆ ಕರ್ನಾಟಕದ ಎಂಟು ಕಂದಾಯ ಜಿಲ್ಲೆಗಳಲ್ಲಿ ವ್ಯಾಪಿಸಿದ್ದು, ವಿಭಿನ್ನ ಸಂಸ್ಕೃತಿ ಮಹಿಳೆಯರು ಒಟ್ಟಾಗಿ ಸೇರಿ ಪರಸ್ಪರ ಅರಿತುಕೊಂಡು, ಮಹಿಳಾ ಸಬಲೀಕರಣದ ಜೊತೆಗೆ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು. ಮಾತೃ ಸಂಸ್ಥೆ ತೀರ್ಥಹಳ್ಳಿ ಇನ್ನರ್ ವೀಲ್‌ಕ್ಲಬ್‌ನ ಅಧ್ಯಕ್ಷೆ ವಾಣಿ ಗಣೇಶ್ ಮಾತನಾಡಿ, ಕೊಪ್ಪ ಇನ್ನರ್ ವೀಲ್‌ಕ್ಲಬ್‌ಗೆ ನಮ್ಮಿಂದ ಎಲ್ಲ ರೀತಿ ಸಹಕಾರ ನೀಡಲಾಗುವುದು ಈ ಸಂಸ್ಥೆ ಯಶಸ್ವಿಯಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು. ‘ಇನ್ನರ್ ವೀಲ್‌ಕ್ಲಬ್ ಕೊಪ್ಪ-ಸೆಂಚುರಿ’ಯ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಲಕ್ಷ್ಮಿ ಆನಂದ್ ಮಾತನಾಡಿ, ‘ನನಗೆ ವಹಿಸಿರುವ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಲು ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರ ಸಹಕಾರ ಕೋರುತ್ತೇನೆ. ನಮ್ಮಿಂದ ಸಾಧ್ಯವಾದಷ್ಟು ಸಮಾಜ ಸೇವಾ ಕಾರ್ಯ ನಡೆಸಿ, ಕ್ಷಬ್‌ಗೆ ಉತ್ತಮ ಹೆಸರು ಬರಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇವೆ’ ಎಂದರು. ಕೊಪ್ಪ ಇನ್ನರ್ ವೀಲ್‌ಕ್ಲಬ್‌ನ ಪೂರ್ಣಿಮಾ ಉಮೇಶ್ ಕ್ಲಬ್‌ನ ಧ್ಯೇಯಗೀತೆ ಹಾಡಿದರು. ಪದ್ಮಾವತಿ ರಮೇಶ್ ಜಿಲ್ಲಾಧ್ಯಕ್ಷರನ್ನು ಪರಿಚಯಿಸಿದರು. ಜಿಲ್ಲೆ ೩೧೮ರ ಕಾರ್ಯದರ್ಶಿ ಶಬರಿ ಕಡಿದಾಳ್, ತೀರ್ಥಹಳ್ಳಿ ಇನ್ನರ್ ವೀಲ್‌ಕ್ಲಬ್ ಕಾರ್ಯದರ್ಶಿ ಮೋಹಿನಿ ಹರೀಶ್, ಕೊಪ್ಪ ಇನ್ನರ್ ವೀಲ್‌ಕ್ಲಬ್ ಉಪಾಧ್ಯಕ್ಷೆ ಅನುಸೂಯ ಕೃಷ್ಣಮೂರ್ತಿ, ಕಾರ್ಯದರ್ಶಿ ಮೈತ್ರಾಗಣೇಶ್ ಖಜಾಂಚಿ ಅರ್ಚನಾ ಜಿನೇಶ್, ಐಎಸ್‌ಒ ಕವಿತಾಬಿ.ಇ, ಸಹಕಾರ್ಯದರ್ಶಿ ತೀರ್ಥ ಹೇಮಂತ್, ತೀರ್ಥಹಳ್ಳಿ ಕ್ಲಬ್‌ನ ಸ್ವಪ್ನ ಸತೀಶ್ ಮುಂತಾದವರಿದ್ದರು. ಕ್ಲಬ್‌ನ ಸೇವಾ ಚಟುವಟಿಕೆ ಭಾಗವಾಗಿ ಇಬ್ಬರು ಪೌರಕಾರ್ಮಿಕರ ಮಕ್ಕಳಿಗೆ ಶಾಲಾ ಬ್ಯಾಗ್ ಹಾಗೂ ಪಠ್ಯ ಸಾಮಗ್ರಿಗಳನ್ನ್ರು ವಿತರಿಸಲಾಯಿತು. ಕಾರ್ಯಕ್ರಮದ ನಂತರ ಕ್ಲಬ್‌ನ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.