ಸ್ವಾವಲಂಬಿ, ಸ್ವಾಭಿಮಾನದಿಂದ ಭಾರತದ ಸದೃಢ

| Published : Oct 01 2025, 01:01 AM IST

ಸಾರಾಂಶ

ಭಾರತದ ಗಡಿ ರಕ್ಷಣಾ ವ್ಯವಸ್ಥೆಗೆ ಅಗತ್ಯವಾದ ಶಸ್ತ್ರ, ರಕ್ಷಣಾ ಕವಚ, ಯುದ್ಧ ವಿಮಾನಗಳನ್ನು ಸಹ ಇಲ್ಲಿಯೇ ತಯಾರಿಸಿ ಭಾರತವನ್ನು ಸ್ವಾಭಿಮಾನವನ್ನಾಗಿ ಮಾಡಿದರು

ಕುಕನೂರು: ಸ್ವಾವಲಂಬಿ, ಸ್ವಾಭಿಮಾನದಿಂದ ಭಾರತ ಸದೃಢ ಆಗಿದೆ ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ ಹೇಳಿದರು.

ತಾಲೂಕಿನ ಮಸಬಹಂಚಿನಾಳ ಗ್ರಾಮದ ಬಿಜೆಪಿ ಕಾರ್ಯಾಲಯದಲ್ಲಿ ಆತ್ಮ ನಿರ್ಭರ ಭಾರತ ಸಂಕಲ್ಪ ಅಭಿಯಾನದ ಕಾರ್ಯಾಗಾರ ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಭಾರತವನ್ನು ಸ್ವಾವಲಂಭಿ ಮಾಡುವುದರ ಮೂಲಕ ಸ್ವಾಭಿಮಾನದಲ್ಲಿ ಭಾರತ ವಿಶ್ವಗುರು ಸ್ಥಾನಕ್ಕೆ ಏರಿಸಿದ್ದಾರೆ. ಆತ್ಮನಿರ್ಭರ ಭಾರತ ಮೂಲಕ ಪ್ರಧಾನಿ ನರೇಂದ್ರ ಮೋದಿ ಭಾರತವನ್ನು ಸದೃಢವನ್ನಾಗಿಸಿದ್ದಾರೆ. ಕೊರೋನಾ ವೇಳೆಯಲ್ಲಿ ವಿದೇಶಗಳು ಔಷಧಿಯಿಲ್ಲದೆ ಭಾರತದಲ್ಲಿ ಹೆಣಗಳ ರಾಶಿ ಉರುಳುತ್ತದೆ ಎಂದಿದ್ದರು. ಮೋದಿಯವರು ಭಾರತದಲ್ಲಿಯೇ ಔಷಧಿ ತಯಾರಿಸಿ 144 ಕೋಟಿ ಜನರ ಜೀವ ಉಳಿಸಿದರು.

ಭಾರತದ ಗಡಿ ರಕ್ಷಣಾ ವ್ಯವಸ್ಥೆಗೆ ಅಗತ್ಯವಾದ ಶಸ್ತ್ರ, ರಕ್ಷಣಾ ಕವಚ, ಯುದ್ಧ ವಿಮಾನಗಳನ್ನು ಸಹ ಇಲ್ಲಿಯೇ ತಯಾರಿಸಿ ಭಾರತವನ್ನು ಸ್ವಾಭಿಮಾನವನ್ನಾಗಿ ಮಾಡಿದರು. ಅದಲ್ಲದೆ ಹಲವಾರು ಯೋಜನೆ ಆರಂಭಿಸಿ ಭಾರತೀಯ ಜನರು ಸ್ವಾವಲಂಭಿ ಉದ್ಯೋಗ ಮಾಡಲು ಪ್ರೇರಣೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಆತ್ಮನಿರ್ಭರ ಯೋಜನೆ ಜನರ ಮನೆಗೆ ತಲುಪಿಸಬೇಕು. ಅವರು ಭಾರತೀಯರ ಸದೃಢ, ಭಾರತದ ದೃಢತೆ ಬಗ್ಗೆ ಕೈಗೊಂಡಿರುವ ಯೋಜನೆಗಳ ಮಾಹಿತಿ ಪ್ರತಿಯೊಬ್ಬರಿಗೂ ತಿಳಿಯಬೇಕು ಎಂದರು.

ಬಿಜೆಪಿ ಜಿಲ್ಲಾ ಪದಾಧಿಕಾರಿ ಚಂದ್ರಶೇಖರ ಹಲಗೇರಿ, ಮಹೇಶ, ಯಲಬುರ್ಗಾ ಬಿಜೆಪಿ ಮಂಡಲ ಅಧ್ಯಕ್ಷ ಮಾರುತಿ ಗಾವರಾಳ, ಮಂಜುನಾಥ ನಾಡಗೌಡ್ರು, ವಿಶ್ವನಾಥ ಮರಿಬಸಪ್ಪನವರ್, ಕಲ್ಲಪ್ಪ ಕರಮುಡಿ, ಅಂಬರೀಶ ಹುಬ್ಬಳ್ಳಿ, ಹಂಚ್ಯಾಳಪ್ಪ ತಳವಾರ, ಅಯ್ಯನಗೌಡ ಕೆಂಚಮ್ಮನವರ್, ಶಂಭು ಜೋಳದ, ಶ್ರೀನಿವಾಸ ತಿಮ್ಮಾಪುರ, ನೇತ್ರಾ ಹಿರೇಮಠ, ಪಾರ್ವತಿ ಹಣಸಿ ಹಾಗೂ ಬಿಜೆಪಿ ಕಾರ್ಯಕರ್ತರಿದ್ದರು.