ಸಾರಾಂಶ
ಸಾಮೂಹಿಕ ವಿವಾಹ । ಅಭಿಮತ । ನವ ವಧು ವರರಿಗೆ ಶುಭ ಹಾರೈಕೆ । ದಾಂಪತ್ಯಕ್ಕೆ 34 ಜೋಡಿ
ಕನ್ನಡಪ್ರಭ ವಾರ್ತೆ ದಾವಣಗೆರೆಪತಿ, ಪತ್ನಿಯರಲ್ಲಿ ಆತ್ಮಗೌರವ ಇರಬೇಕು ಎಂದು ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
ತಾಲೂಕಿನ ಅರಸೀಕೆರೆ ಗ್ರಾಮದ ಕೋಲಶಾಂತೇಶ್ವರ ಮಠದಲ್ಲಿ ಆಯೋಜಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ವಧು ವರರಿಗೆ ಶುಭಕೋರಿ ಮಾತನಾಡಿದರು.ಗಂಡ ಹೆಂಡತಿಯರಲ್ಲಿ ಪ್ರೀತಿ, ಪ್ರೇಮ,ನಂಬಿಕೆ,ವಿಶ್ವಾಸವಿರಬೇಕು, ಪರಸ್ಪರ ಇಬ್ಬರಲ್ಲಿ ಆತ್ಮಗೌರವವಿರಬೇಕು, ಸಂಬಂಧಿಕರಿಗೆ ಗೌರವವನ್ನು ನೀಡಿದರೆ ನಿಮ್ಮನ್ನು ಅವರು ಗೌರವಿಸುತ್ತಾರೆ ಎಂದು ಹೇಳಿದರು.
ನವಜೋಡಿಗಳು ತಂದೆ, ತಾಯಂದಿರಿಗೆ, ಸಂಬಂಧಿಕರಿಗೆ, ಬಂಧು ಬಳಗಕ್ಕೆ ಪರಸ್ಪರ ಗೌರವಿಸಬೇಕು ಎಂದು ಅವರು ತಿಳಿಸಿದರು.ಇಲ್ಲಿಯ ಸ್ವಾಮೀಜಿ ಶಾಂತಲಿಂಗ ದೇಶೀಕೇಂದ್ರ ಶ್ರೀಗಳು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದ್ದು, ಕ್ರಿಯಾಶೀಲರಾಗಿ ಬಸವಣ್ಣನವರಂತೆ ಕಾಯಕಯೋಗಿ ಯಾಗಿ ಕೆಲಸದಲ್ಲಿ ತೊಡಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಮ್ಮ ಎಸ್‌ಎಸ್ ಕೇರ್ ಟ್ರಸ್ಟ್ ವತಿಯಿಂದ ಮೂರು ಸೇವೆಗಳನ್ನು ಉಚಿತವಾಗಿ ಅಂದರೆ, ಕಿಡ್ನಿ ಸಮಸ್ಯೆಗೆ ಚಿಕಿತ್ಸೆ, ಗರ್ಭಿಣಿಯರಿಗೆ ತಪಾಸಣೆ ಹಾಗೂ ಕಣ್ಣಿನ ತಪಾಸಣೆಯನ್ನು ನೀಡುತ್ತಿದ್ದೇವೆ ಎಂದು ಹೇಳಿದರು.ಮಠದ ವತಿಯಿಂದ ವೈದ್ಯಕೀಯ ಸೇವೆಯನ್ನು ಗುರುತಿಸಿ ಡಾ.ಎಸ್.ಎಂ.ಮಹೇಶ್‌ರವರಿಗೆ ಬಸವ ಗುರುಕಿರಣ ಪ್ರಶಸ್ತಿ, ವೃತ್ತಿರಂಗಭೂಮಿ ಸೇವೆಯನ್ನು ಗುರುತಿಸಿ ಡಾ.ಕೆ.ನಾಗರತ್ನಮ್ಮಗೆ ಕೋಲಶಾಂತೇಶ್ವರ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಎಸ್.ಎಂ.ಮಹೇಶ್, ನಾನು ವೈದ್ಯಕೀಯ ಕ್ಷೇತ್ರಕ್ಕೆ ಗಣನೀಯವಾಗಿ ಸೇವೆ ಸಲ್ಲಿಸಿದಕ್ಕೆ ಕೋಲಶಾಂತೇಶ್ವರ ಮಠದ ಶ್ರೀ ಗುರುಗಳು ಬಸವ ಗುರುಕಿರಣ ಪ್ರಶಸ್ತಿ ನೀಡಿ ಸನ್ಮಾನಿಸಿದ್ದಾರೆ. ನನಗೆ ಬಹಳ ಸಂತಸವಾಗಿದೆ ನಾನು ಈ ಮಠಕ್ಕೆ ಚಿರಋಣಿಯಾಗಿರುತ್ತೇನೆ ಎಂದರು.ಶಾಂತಲಿಂಗ ದೇಶೀಕೇಂದ್ರ ಸ್ವಾಮೀಜಿ, ನಮ್ಮ ಅರಸೀಕೆರೆ ಜನತೆಯ ಸಹಕಾರದಿಂದ ಕಳೆದ 41 ವರ್ಷಗಳಿಂದ ಉಚಿತ ಸಾಮೂಹಿಕ ವಿವಾಹ ಮಾಡಿಕೊಳ್ಳುತ್ತ ಬರುತ್ತಿದ್ದೇವೆ, ಎಲ್ಲಾ ಸಮುದಾಯದವರ ಬೆಂಬಲದಿಂದ ಈ ಸಾಮೂಹಿಕ ಕಲ್ಯಾಣ ಮಹೋತ್ಸವ ನಡೆದಿದೆ, ಇಲ್ಲಿಯವರೆಗೆ ಒಟ್ಟು 3046 ವಧು ವರರು ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ ಎಂದು ಹೇಳಿದರು. ಇಂದಿನ ವಿವಾಹ ಮಹೋತ್ಸವದಲ್ಲಿ 34 ಜೋಡಿ ದಾಂಪತ್ಯಕ್ಕೆ ಕಾಲಿಟ್ಚರು.
ಕೂಡ್ಲಿಗಿ ಹಿರೇಮಠ ಸಂಸ್ಥಾನ ಮಠದ ಪ್ರಶಾಂತ ಸಾಗರ ಶಿವಾಚಾರ್ಯ ಮಹಾಸ್ವಾಮಿಗಳು, ಬಾಚಗೊಂಡನಹಳ್ಳಿ ತೊಂಟದಾರ್ಯ ಮಠದ ಶಿವಮಹಾಂತ ಸ್ವಾಮಿಗಳು, ಮುಖಂಡರಾದ ವೈ.ಡಿ. ಅಣ್ಣಪ್ಪ, ಪ್ರಶಾಂತ್ ಪಾಟೀಲ್.ನಿವೃತ್ತ ಶಿಕ್ಷಕಿ ಲಲಿತಮ್ಮ, ಶಿವಕುಮಾರ್ ಸ್ವಾಮಿ, ವಕೀಲ ಕೆರೆಗುಡಿಹಳ್ಳಿ ಪ್ರಶಾಂತ್ ಪಾಟೀಲ್, ನಿವೃತ್ತ ಇಒ ಕೊಟ್ರಯ್ಯ, ನಿಚ್ಚವ್ವನಹಳ್ಳಿ ಭೀಮಪ್ಪ,ಗುರುಪ್ರಸಾದ್, ವೈ, ಡಿ.ಲಕ್ಷೀದೇವಿ ಅಣ್ಣಪ್ಪ, ಬಸಾಪುರ ಮಂಜುನಾಥ್, ಸಲಾಂ ಸಾಹೇಬ್, ಕೆ.ಮಹಾಂತೇಶ್, ಇಟಗಳ್ಳಿ ಬಸವರಾಜ್, ಗ್ರಾಮದ ಮುಖಂಡರು, ವಧು ವರರು ಇದ್ದರು.