ಗೃಹ ರಕ್ಷಕರಿಂದ ನಿಸ್ವಾರ್ಥ ಸೇವೆ: ಹರೀಶ್

| Published : Jul 15 2024, 01:52 AM IST

ಸಾರಾಂಶ

ಗೃಹ ರಕ್ಷಕದಳದ ಸಿಬ್ಬಂದಿ ಪ್ರತಿಫಲಾಪೇಕ್ಷೆಯಿಲ್ಲದೇ ಸ್ವಇಚ್ಛೆ, ಪ್ರಾಮಾಣಿಕತೆಯಿಂದ ಸಮಾಜಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಜಿಲ್ಲಾ ಸಮಾದೇಷ್ಟ ಡಾ.ಸಚೇತ್ ಕುಮಾರ್ ಹರಿಹರದಲ್ಲಿ ಹೇಳಿದ್ದಾರೆ.

- ನಿವೃತ್ತ ಅಧಿಕಾರಿ ವೈ.ಆರ್. ಗುರುನಾಥ್ ಸನ್ಮಾನ- ಬೀಳ್ಕೊಡುಗೆ - - - ಹರಿಹರ: ಗೃಹ ರಕ್ಷಕದಳದ ಸಿಬ್ಬಂದಿ ಪ್ರತಿಫಲಾಪೇಕ್ಷೆಯಿಲ್ಲದೇ ಸ್ವಇಚ್ಛೆ, ಪ್ರಾಮಾಣಿಕತೆಯಿಂದ ಸಮಾಜಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಜಿಲ್ಲಾ ಸಮಾದೇಷ್ಟ ಡಾ.ಸಚೇತ್ ಕುಮಾರ್ ಹೇಳಿದರು. ಹರಿಹರ ಗೃಹ ರಕ್ಷಕದಳದ ಘಟಕದಿಂದ ಭಾನುವಾರ ಗಿರಿಯಮ್ಮ ಶಾಲೆಯಲ್ಲಿ ಘಟಕ ಅಧಿಕಾರಿ ವೈ.ಆರ್. ಗುರುನಾಥ್ ನಿವೃತ್ತಿ ಹಿನ್ನೆಲೆ ಸನ್ಮಾನ ಮತ್ತು ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಗೃಹ ರಕ್ಷಕ ದಳದ ಸಿಬ್ಬಂದಿ ಪೊಲೀಸ್ ಇಲಾಖೆ, ಅಗ್ನಿಶಾಮಕ ದಳ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ನಿಯಮಗಳಿಗೆ ಬದ್ಧವಾಗಿ ಕೆಲಸಗಳಲ್ಲಿ ನೈಪುಣ್ಯತೆ ತೋರುತ್ತಿದ್ದಾರೆ. ತುರ್ತು ಸಂದರ್ಭಗಳಲ್ಲಿ ರಕ್ಷಣೆಗೆ ಕರೆ ಬಂದಾಗಲೂ ಪ್ರಾಣದ ಹಂಗು ತೊರೆದು, ಜನರ ರಕ್ಷಣೆ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.

ವೈ.ಆರ್. ಗುರುನಾಥ್ ಹರಿಹರ ಗೃಹರಕ್ಷಕ ದಳದಲ್ಲಿ ಹಲವಾರು ವರ್ಷಗಳ ಸೇವೆ ಸಲ್ಲಿಸಿ, ನಂತರ ಘಟಕ ಅಧಿಕಾರಿಯಾಗಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದರು.

ನಿವೃತ್ತ ಘಟಕ ಅಧಿಕಾರಿ ವೈ.ಆರ್. ಗುರುನಾಥ್ ಮಾತನಾಡಿ, ಗೃಹರಕ್ಷಕ ದಳ ಕಾಯಂ ವೃತ್ತಿಯಲ್ಲ. ಇದೊಂದು ಸಮಾಜ ಸೇವೆ. ಈ ಸಮಾಜ ಸೇವೆಯಲ್ಲಿ ಹಲವು ವರ್ಷಗಳ ಕಾಲ ನನ್ನನ್ನು ನಾನು ತೊಡಗಿಸಿಕೊಂಡು, ಕೈಲಾದಷ್ಟು ಸೇವೆ ಸಲ್ಲಿಸಿದ ತೃಪ್ತಿಯಿದೆ ಎಂದರು.

ಮುಂದೆಯೂ ಈ ಘಟಕದ ಸಿಬ್ಬಂದಿಗೆ ಸಲಹೆ- ಸಹಕಾರ ನೀಡುತ್ತೇನೆ. ನನ್ನ ಘಟಕ ಅಧಿಕಾರಿ ಅವಧಿಯಲ್ಲಿ ಸಹಕಾರಿ ನೀಡಿದ ಪೊಲೀಸ್ ಇಲಾಖೆ, ಅಗ್ನಿಶಾಮಕ ದಳ ಸೇರಿದಂತೆ ಇತರ ಇಲಾಖೆಗಳು ಮತ್ತು ಹರಿಹರ ಘಟಕದ ಎಲ್ಲ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿದರು.

ದಾವಣಗೆರೆ ಜಿಲ್ಲಾ ಘಟಕ ಅಧಿಕಾರಿ ಕೆ.ಎಸ್. ಅಮರೇಶ್, ಸೀನಿಯರ್ ಕಮಾಂಡೆಡ್ ಯಲ್ಲಪ್ಪ, ಹರಿಹರ ಪ್ರಭಾರ ಘಟಕ ಅಧಿಕಾರಿ ಕೆ.ಎಚ್. ಪ್ರಕಾಶ್, ಹರಪನಹಳ್ಳಿ ಘಟಕ ಅಧಿಕಾರಿ ನಾಗರಾಜ್ ಕೆ., ನ್ಯಾಮತಿ ಘಟಕ ಅಧಿಕಾರಿ ರಾಘವೇಂದ್ರ ,ಕಲಾವತಿ ಗುರುನಾಥ್, ಜಿ.ನಂದಿನಿ, ತೇಜಸ್ವಿನಿ ಮನೋಜ್, ಸುದೀಪ್ ಜಿ., ರಾಮಣ್ಣ ಬುಟ್ಟ, ನಾಗಣ್ಣ ಬುಟ್ಟ, ರಾಧಾ ಹನುಮಂತಪ್ಪ, ಗೋವಿಂದ ಗಡ್ಡದ, ಹನುಮಂತಪ್ಪ, ಗೃಹರಕ್ಷಕ ದಳದ ಎಸ್. ಕೇಶವ್, ನಾಗರಾಜಪ್ಪ ಗಾಳೇರ್, ಎಂ.ಎಚ್. ಗಣೇಶ್, ಎಚ್. ಬಸವನಗೌಡ, ಲಲಿತಾಂಬಿಕ, ಎಚ್.ರಾಧ, ಎ.ಎಚ್. ಮಂಜುಳಾ, ಕೆ.ಪ್ರಭು, ರೇಣುಕಾ ಲೋಹಿತ್, ಟಿಸಿ ನೀಲಮ್ಮ, ಎಸ್‌. ಗೀತ, ಯೋಗೇಶ್ ಸಂಗಪ್ಪ ತಿಪ್ಪೇಶ್, ಶಿಕ್ಷಕರಾದ ಈಶಪ್ಪ ಬೂದಿಹಾಳ ಬಿ.ಎಂ. ಚಂದ್ರಶೇಖರ್, ಘಟಕದ ಸದಸ್ಯರು ಇದ್ದರು.

- - - -೧೪ಕೆಎಚ್‌ಆರ್‌ಎಚ್‌೩:

ಹರಿಹರ ಗೃಹ ರಕ್ಷಕ ದಳ ಘಟಕದಿಂದ ನಿವೃತ್ತ ಘಟಕ ಅಧಿಕಾರಿ ವೈ.ಆರ್. ಗುರುನಾಥ್ ಅವರನ್ನು ಸನ್ಮಾನಿಸಿ ಬೀಳ್ಕೊಡುಗೆ ನೀಡಲಾಯಿತು.