ಸಾರಾಂಶ
ಕನ್ನಡಪ್ರಭ ವಾರ್ತೆ, ಶಿಕಾರಿಪುರ
ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಹಲವು ವರ್ಷಗಳಿಂದ ಜ್ಞಾನ ನೀಡಿ, ಧ್ಯಾನ ಕಲಿಸಿ, ಸಂಸ್ಕಾರ ಪರಿವರ್ತನೆಯಿಂದ ಉತ್ತಮ ವ್ಯಕ್ತಿಗಳಾಗಲು ಮಾರ್ಗದರ್ಶನ ಮಾಡುತ್ತಿದೆ. ನಿಸ್ವಾರ್ಥ ಸೇವೆ ಸಲ್ಲಿಸುವ ಮೂಲಕ ನಿರಂತರ ಸಮಾಜ ಸುಧಾರಣೆ ಕಾರ್ಯವನ್ನು ಮಾಡುತ್ತಿರುವುದು ಎಂದು ಶ್ಲಾಘನೀಯ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.ಶುಕ್ರವಾರ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಮಹಾಶಿವರಾತ್ರಿ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಇಂದು ಅಂತರ ರಾಷ್ಟ್ರೀಯ ಮಹಿಳಾ ದಿನ. ಈ ಶುಭ ಸಂದರ್ಭದಲ್ಲಿ ಮಹಿಳೆಯರು ಎಲ್ಲ ಕ್ಷೇತ್ರದಲ್ಲಿ ಬೆಳೆದು ನಿಂತಿದ್ದಾರೆ. ಶೈಕ್ಷಣಿಕ, ಆಧ್ಯಾತ್ಮಿಕ ಹಾಗೂ ಪ್ರಾಮಾಣಿಕವಾಗಿ ಮಹಿಳೆಯರು ಕಾರ್ಯನಿರ್ವಹಿಸುವ ಜತೆಗೆ ಮಹಿಳೆಯರು ಕುಟುಂಬದ ಸಹಿತ ಸಮಾಜದಲ್ಲಿನ ಆಗುಹೋಗುಗಳಲ್ಲಿ ಪಾಲ್ಗೊಂಡು ಹೆಚ್ಚಿನ ಜವಾಬ್ದಾರಿ ವಹಿಸಿಕೊಳ್ಳುತ್ತಿದ್ದಾರೆ. ಮಹಿಳೆಯರು ನಿರ್ವಹಿಸುವ ಕಾರ್ಯದಲ್ಲಿ ತಪ್ಪು ಅಪರಾಧಗಳ ಪ್ರಮಾಣಕ್ಕೆ ಆಸ್ಪದ ಇರುವುದಿಲ್ಲ ಎಂದು ತಿಳಿಸಿದರು.
ವಿವಿ ಸಂಚಾಲಕರಾದ ಬ್ರಹ್ಮಕುಮಾರಿ ಸ್ನೇಹಕ್ಕ, ಶಿವ ಪರಮಾತ್ಮನ ದಿವ್ಯ ಅವತರಣೆಯ ಸ್ಮರಣೋತ್ಸವವೇ ಸತ್ಯಶಿವರಾತ್ರಿ. ಸ್ವಯಂ ಶಿವಪರಮಾತ್ಮ ಕಲಿಯುಗದ ಅಜ್ಞಾನದ ಅಧರ್ಮದ ಅಂಧಕಾರದಲ್ಲಿ ಅವತರಿಸಿ, ಜ್ಞಾನದ ಬೆಳಕನ್ನು ಭಕ್ತರಿಗೆ ಭಕ್ತಿಯ ಫಲವನ್ನು ನೀಡುತ್ತಿದ್ದಾರೆ ಎಂದು ಹಬ್ಬದ ಮಹತ್ವ ತಿಳಿಸಿದರು.ಕಾರ್ಯಕ್ರಮದಲ್ಲಿ ತಿಪ್ಪಾಯಿಕೊಪ್ಪ- ಸುರಗಿಹಳ್ಳಿ ಮಠದ ಶ್ರೀ ಮಹಾಂತ ಸ್ವಾಮಿಗಳು ಸಾನ್ನಿಧ್ಯ ವಹಿಸಿ, ಆಶೀರ್ವಚನ ನೀಡಿದರು. ಹಿರಿಯ ನ್ಯಾಯವಾದಿ ವಸಂತ್ ಮಾಧವ್, ಈರೇಶ್, ಕಾಂಚನ ಕುಮಾರ್, ರೂಪಾ ಹಾಲೇಶ್, ವಿಜಯಕುಮಾರ್, ರುದ್ರಮನಿ, ಜಗದೀಶ್, ಎಸ್.ಎಸ್. ರಾಘವೇಂದ್ರ, ಕೆ.ಎಚ್. ಲಕ್ಷ್ಮಣ್ ಮತ್ತಿತರರಿದ್ದರು.
- - - -8ಕೆಎಸ್.ಕೆಪಿ1:ಶಿಕಾರಿಪುರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಶುಕ್ರವಾರ ಮಹಾಶಿವರಾತ್ರಿ ಮಹೋತ್ಸವ ಕಾರ್ಯಕ್ರಮಕ್ಕೆ ಸಂಸದ ರಾಘವೇಂದ್ರ ಚಾಲನೆ ನೀಡಿದರು.