ನಂದಿನಿ ಉತ್ಪನ್ನಗಳನ್ನು ಹೆಚ್ಚು ಮಾರಾಟ ಮಾಡಿ: ಕೃಷ್ಣೇಗೌಡ

| Published : Sep 28 2025, 02:00 AM IST

ನಂದಿನಿ ಉತ್ಪನ್ನಗಳನ್ನು ಹೆಚ್ಚು ಮಾರಾಟ ಮಾಡಿ: ಕೃಷ್ಣೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ರೈತರು ಹೆಚ್ಚು ಹಸುಗಳನ್ನು ಸಾಕುವ ಮೂಲಕ ಹಾಗೂ ಅವುಗಳಿಗೆ ಪೌಷ್ಟಿಕವಾದ ಆಹಾರಗಳನ್ನು ನೀಡಿದರೆ ಅವು ಗುಣಮಟ್ಟದ ಹಾಲುನ್ನು ನೀಡುತ್ತದೆ. ಮುಂದಿನ ದಿನಗಳಲ್ಲಿ ಅವುಗಳಿಗೆ ಯಾವುದಾದರೂ ತೊಂದರೆಯಾದರೆ ಇಲಾಖೆಯಲ್ಲಿ ವಿಮೆ ಯೋಜನೆಗಳು ಇದ್ದು ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಹಲಗೂರು

ರಾಷ್ಟ್ರೀಯ ಹೆದ್ದಾರಿಗಳಲ್ಲಿ ನಂದಿನಿ ಪಾರ್ಲರ್ ಪ್ರಾರಂಭಿಸಿ ನಮ್ಮಲ್ಲಿನ ಉತ್ಪನ್ನಗಳು, ರುಚಿಕರ ತಿನಿಸುಗಳನ್ನು ಮಾರಾಟ ಮಾಡಿ ಹಾಲು ಒಕ್ಕೂಟ ಬೆಳೆಯಲು ಸಹಕರಿಸಬೇಕು ಎಂದು ಮನ್ಮು ಲ್ ನಿರ್ದೇಶಕ ಕೃಷ್ಣೇಗೌಡ ಕರೆ ನೀಡಿದರು.

ದಳವಾಯಿ ಕೋಡಿಹಳ್ಳಿಯ ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಒಕ್ಕೂಟದಿಂದ ರೈತರಿಗೆ ಅನುಕೂಲವಾಗಲಿ ಎಂದು ಹಾಲು ಕರೆಯುವ ಯಂತ್ರಗಳನ್ನು ಸಬ್ಸಿಡಿ ದರ ಹಾಗೂ ಅಗತ್ಯ ಇರುವ ಪದಾರ್ಥಗಳನ್ನು ನೀಡಲಾಗುತ್ತದೆ. ಅವುಗಳನ್ನು ತೆಗೆದುಕೊಂಡು ನೀವು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ರೈತರು ಹೆಚ್ಚು ಹಸುಗಳನ್ನು ಸಾಕುವ ಮೂಲಕ ಹಾಗೂ ಅವುಗಳಿಗೆ ಪೌಷ್ಟಿಕವಾದ ಆಹಾರಗಳನ್ನು ನೀಡಿದರೆ ಅವು ಗುಣಮಟ್ಟದ ಹಾಲುನ್ನು ನೀಡುತ್ತದೆ. ಮುಂದಿನ ದಿನಗಳಲ್ಲಿ ಅವುಗಳಿಗೆ ಯಾವುದಾದರೂ ತೊಂದರೆಯಾದರೆ ಇಲಾಖೆಯಲ್ಲಿ ವಿಮೆ ಯೋಜನೆಗಳು ಇದ್ದು ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಸಿಇಒ ಡಿ.ವೈ.ನಾಗರಾಜು ಮಾತನಾಡಿ, 391 ಸದಸ್ಯರನ್ನು ಒಳಗೊಂಡ ಸಂಘವು ದಿನನಿತ್ಯ 5 ಸಾವಿರ ಲೀಟರ್ ಹಾಲು ಸರಬರಾಜು ಅಗುತ್ತಿದೆ. ಎ ಶ್ರೇಣಿಯಲ್ಲಿ ಸಂಘ ಕೆಲಸ ಮಾಡುತ್ತಿದೆ. ಕಳೆದ ಸಾಲಿನಲ್ಲಿ 24 ಲಕ್ಷ ರು. ನಿವ್ವಳ ಲಾಭ ಬಂದಿದೆ ಎಂದರು.

ಇದೇ ವೇಳೆ ಕೃಷ್ಣೇಗೌಡರಿಗೆ ಸಂಘದಿಂದ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು. ಸಂಘದ ಆಡಳಿತ ಅಧಿಕಾರಿ ಎಂ.ಕೆ.ತ್ಯಾಗರಾಜ್ ಪ್ರಸಾದ್, ಮನ್ಮುಲ್ ವ್ಯವಸ್ಥಾಪಕ ನಿರ್ದೇಶಕ ಡಾ.ಸದಾಶಿವ, ಮನ್ಮುಲ್ ವಿಸ್ತರಣಾಧಿಕಾರಿ ಎ.ಎನ್.ರವೀಶ್ ಗುಮಾಸ್ತ ಡಿ.ಎಸ್.ಪುರುಷೋತ್ತಮ, ಹಾಲು ಪರೀಕ್ಷಕ ಎಚ್.ಸುರೇಶ್, ಬಿ.ಎಂ.ಸಿ ಸಹಾಯಕ ಕೆ.ಅರ್. ಚಂದ್ರಶೇಖರಮೂರ್ತಿ, ಸಹಾಯಕ ಹಾಲು ಪರೀಕ್ಷಕ ರಾಜು ಸೇರಿದಂತೆ ಸಂಘದ ಸದಸ್ಯರು ಭಾಗವಹಿಸಿದ್ದರು.