ಸಾರಾಂಶ
ಮಾನ್ವಿ ಪಟ್ಟಣದ ಕೃಷಿ ಉತ್ಪನ್ನ ಮಾರಾಟ ಸಮಿತಿ ಸಭಾಂಗಣದಲ್ಲಿ ಕೃಷಿ ಇಲಾಖೆಯಿಂದ ನಡೆದ ಮಾನ್ವಿ ಮತ್ತು ಸಿರವಾರ ತಾಲೂಕು ಕೃಷಿ ಪರಿಕರ ಮಾರಾಟಗಾರರ ಸಭೆ ನಡೆಯಿತು.
ಕನ್ನಡಪ್ರಭ ವಾರ್ತೆ ಮಾನ್ವಿ
ಜಿಲ್ಲೆಯಲ್ಲಿ ಮುಂಗಾರು ಹಂಗಾಮು ಆರಂಭ ಪಡೆದುಕೊಂಡಿದ್ದು, ಪರವಾನಿಗೆ ಹೊಂದಿದವರು ರೈತರಿಗೆ ಗುಣಮಟ್ಟದ ಪರಿಕರ ಮಾತ್ರ ಮಾರಾಟ ಮಾಡಬೇಕು ಎಂದು ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕಿ ದೇವಿಕಾ.ಆರ್ ತಿಳಿಸಿದರು.ಪಟ್ಟಣದ ಕೃಷಿ ಉತ್ಪನ್ನ ಮಾರಾಟ ಸಮಿತಿ ಸಭಾಂಗಣದಲ್ಲಿ ಕೃಷಿ ಇಲಾಖೆಯಿಂದ ನಡೆದ ಮಾನ್ವಿ ಮತ್ತು ಸಿರವಾರ ತಾಲೂಕು ಕೃಷಿ ಪರಿಕರಗಳ ಮಾರಾಟಗಾರರ ಸಭೆಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿನ ಪರವಾನಿಗೆ ಹೊಂದಿದ ಕೃಷಿ ಪರಿಕರಗಳ ಮಾರಾಟಗಾರಿಗೆ ವೈಜ್ಞಾನಿಕ ಕಾರ್ಯಕ್ರಮದ ಮೂಲಕ ಕೃಷಿ ಅಗತ್ಯ ಮಾಹಿತಿ ಬಗ್ಗೆ ತರಬೇತಿ ನೀಡಲಾಗಿದ್ದು ರೈತರಿಗೆ ಅಗತ್ಯವಿರುವ ಕೃಷಿ ಪರಿಕರ ಮಾತ್ರ ನೀಡಿ. ಬಿತ್ತನೆ ಬೀಜ, ರಸಗೋಬ್ಬರ, ಕೀಟನಾಶಕ ಸೇರಿ ಗುಣಮಟ್ಟದ ಕೃಷಿ ಪರಿಕರಗಳನ್ನು ನಿಗದಿತ ದರಕ್ಕೆ ಮಾರಾಟ ಮಾಡಬೇಕು ಎಂದರು.
ಜಿಲ್ಲಾ ಕೃಷಿ ಉಪ ನಿರ್ದೆಶಕ ಟಿ.ಸಿ.ಜಯಪ್ರಕಾಶ್, ಸಹಾಯಕ ಕೃಷಿ ನಿರ್ದೇಶಕ ಹುಸೇನ್ ಸಾಹೇಬ್ ಮಾತನಾಡಿದರು. ಸಭೆಯಲ್ಲಿ ಮಾನ್ವಿ ಮತ್ತು ಸಿರವಾರ ತಾಲೂಕು ಕೃಷಿ ಪರಿಕರಗಳ ಮಾರಾಟಗರರು ತಮ್ಮ ಸಮಸ್ಯೆ ಬಗ್ಗೆ ಅಧಿಕಾರಿ ವೊಂದಿಗೆ ಚರ್ಚೆ ನಡೆಸಿ ಪರಿಹಾರ ಕಂಡುಕೊಂಡರು.ಸಭೆಯಲ್ಲಿ ಮಾನ್ವಿ ತಾಲೂಕು ಕೃಷಿ ಪರಿಕಾರಗಳ ಮಾರಾಟಗಾರರ ಸಂಘದ ಅಧ್ಯಕ್ಷ ಜಿ.ನಾಗರಾಜ, ಉಪಾಧ್ಯಕ್ಷ ರಾಜು, ಕಾರ್ಯದರ್ಶಿಸುಬ್ಬರಾವ್, ಸಿರವಾರ ತಾಲೂಕು ಅಧ್ಯಕ್ಷ ವಿರೇಶ್, ಕೃಷಿ ಅಧಿಕಾರಿ ಅಮರೇಶ, ಅಶ್ವಿನಿ, ವೆಂಕಣ್ಣ ಯಾದವ್, ಅಮರೇಶ್, ಕೃಷಿ ತಾಂತ್ರಿಕ ಅಧಿಕಾರಿ ಮಹಮ್ಮದ್ ಖಾಲಿದ್, ಸೇರಿ ಕೃಷಿ ಪರಿಕಾರಗಳ ಮಾರಾಟಗಾರರು ಇದ್ದರು.