ಸಾರಾಂಶ
ಹಾಲಿನ ಪೌಡರ್, ರಾಸಾಯನಿಕ ಪೌಡರ್ ಬಳಸಿ ನಕಲಿ ಹಾಲು ತಯಾರಿಸಿ ಹೊರ ರಾಜ್ಯ ಮಹಾರಾಷ್ಟ್ರದ ಜತ್ತ ಜಿಲ್ಲೆಗೆ ಸಾಗಿಸಲು ಮುಂದಾಗಿದ್ದರು
ಸಾವಳಗಿ: ಕಲಬೆರಕೆ ಹಾಲು ತಯಾರಿಸಿ ಮಾರಾಟ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಖಚಿತ ಮಾಹಿತಿ ಮೇರೆಗೆ ಸಾವಳಗಿ ಪೊಲೀಸರು ದಾಳಿ ಮಾಡಿ ಕಲಬೆರಿಕೆ ವಸ್ತುಗಳ ಜೊತೆಗೆ ಇಬ್ಬರನ್ನು ಬಂಧಿಸಿದ ಘಟನೆ ಸಾವಳಗಿಯಲ್ಲಿ ನಡೆದಿದೆ.
ಅಡಿಹುಡಿ ಗ್ರಾಮದ ಸಚೀನ ಲಕ್ಷ್ಮಣ ನರೋಟೆ, ಶಾಂತಿಲಾಲ ಮಹಾದೇವ ನರೋಟೆ ಎಂಬಾತರನ್ನು ವಶಕ್ಕೆ ಪಡೆಯಲಾಗಿದೆ. 28 ಕ್ಯಾನ್‌ಗಳಲ್ಲಿನ 1120 ಲೀಟರ್ ಹಾಲಿಗೆ ಕಲಬೆರಿಕೆ ಪೌಡರ್ ಮತ್ತು ಅಡುಗೆಎಣ್ಣಿ ಮಿಶ್ರಣ ಮಾಡಿಕೊಂಡು ಮಾರಾಟಕ್ಕೆಂದು ವಾಹನದಲ್ಲಿ ಸಾಗಿಸುತ್ತಿದ್ದ 2 ಮಹೀಂದ್ರಾ ಪಿಕಪ್ ವಾಹನ ಮತ್ತು ಅಡಿಹುಡಿ ಗ್ರಾಮದ ಇಬ್ಬರನ್ನು ವಶಪಡಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್‌ರು ತಿಳಿಸಿದ್ದಾರೆ.ಹಾಲಿನ ಪೌಡರ್, ರಾಸಾಯನಿಕ ಪೌಡರ್ ಬಳಸಿ ನಕಲಿ ಹಾಲು ತಯಾರಿಸಿ ಹೊರ ರಾಜ್ಯ ಮಹಾರಾಷ್ಟ್ರದ ಜತ್ತ ಜಿಲ್ಲೆಗೆ ಸಾಗಿಸಲು ಮುಂದಾಗಿದ್ದರು ಎಂದು ತಿಳಿಯಲಾಗಿದೆ. ಕಾರ್ಯಾಚರಣೆಯಲ್ಲಿ ಪಿಎಸ್‌ಐ ಎಸ್.ಕೆ.ಸಿಂಗನ್ನವರ, ಐಎ ನದಾಪ, ಎಸ್.ಕೆ.ಬಜಂತ್ರಿ, ಆರ್.ಎಸ್.ಬಸನ್ನವರ, ಬಿ.ಬಿ.ಯಡವೆ, ಎಸ್.ಎನ.ಹಚ್ಚಗೌಡರ ಸೇರಿದಂತೆ ಅನೇಕರು ಇದ್ದರು.