ಹಿರಿಯ ಪತ್ರಕರ್ತ ನಾಗೇಂದ್ರಗೆ ನಾಗರಿಕ ಸನ್ಮಾನ

| Published : Mar 11 2025, 12:48 AM IST

ಸಾರಾಂಶ

Senior journalist Nagendra receives civic honour

-ಕಾರ್ಯನಿರತ ಪತ್ರಕರ್ತರ ಸಂಘದ ವಿಶೇಷ ದತ್ತಿ ಪುರಸ್ಕಾರಕ್ಕೆ ಭಾಜನರಾದ ಟಿ. ನಾಗೇಂದ್ರ

------

ಕನ್ನಡಪ್ರಭ ವಾರ್ತೆ ಶಹಾಪುರ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನೀಡಲಾಗುವ ವಿಶೇಷ ದತ್ತಿ ಪುರಸ್ಕಾರಕ್ಕೆ ಭಾಜನರಾದ ನಗರದ ಹಿರಿಯ ವರದಿಗಾರ ಹಾಗೂ ನ್ಯಾಯವಾದಿ ಟಿ. ನಾಗೇಂದ್ರ ಅವರಿಗೆ ನಾಗರಿಕರ ವತಿಯಿಂದ ನಗರದ ಪ್ರವಾಸಿ ಮಂದಿರದಲ್ಲಿ ವಿಶೇಷ ಸನ್ಮಾನಿಸಿ ಗೌರವಿಸಲಾಯಿತು.

ಈ ವೇಳೆ ಮಾತನಾಡಿದ ಗ್ಯಾರಂಟಿ ಯೋಜನೆಗಳ ತಾಲೂಕ ಅಧ್ಯಕ್ಷ ಗೌಡಪ್ಪ ಗೌಡ ಆಲ್ದಾಳ್, ಶಾಸಕಾಂಗ ಕಾರ್ಯಾಂಗ ನ್ಯಾಯಾಂಗದಂತೆ ಪತ್ರಿಕಾರಂಗ ಒಂದು ಸಮಾಜದಲ್ಲಿ ನಾಲ್ಕನೇ ಕಂಬ ಇದ್ದಂತೆ. ಸಮಾಜ ಪರಿವರ್ತನೆಯಲ್ಲಿ ಪತ್ರಕರ್ತರ ಕೊಡುಗೆ ಅಪಾರ. ವಸ್ತುನಿಷ್ಠ ಪತ್ರಕರ್ತರಾಗಿ ಸುಮಾರು 30 ವರ್ಷದಿಂದ ಸೇವೆ ಸಲ್ಲಿಸುತ್ತಿರುವ ತಾಲೂಕಿನ ಹಿರಿಯ ವರದಿಗಾರ ಟಿ. ನಾಗೇಂದ್ರ ಅವರಿಗೆ ರಾಜ್ಯಮಟ್ಟದ ದತ್ತಿ ಪ್ರಶಸ್ತಿ ಬಂದಿರುವುದು ಜಿಲ್ಲೆಗೆ ಕೀರ್ತಿ ಬಂದಂತಾಗಿದೆ ಎಂದರು.

ಈ ಕಾರ್ಯಕ್ರಮದಲ್ಲಿ, ರೈತ ಮುಖಂಡ ಶರಣಪ್ಪ ಸಲಾದಪುರ, ಬಿಜೆಪಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಕಾಮಾ, ತಾಲೂಕ ವಾಲ್ಮೀಕಿ ನಾಯಕರ ಸಂಘದ ಅಧ್ಯಕ್ಷ ಮರೆಪ್ಪ ಪ್ಯಾಟಿ, ವಾಲ್ಮೀಕಿ ನಾಯಕರ ಸಂಘದ ಜಿಲ್ಲಾ ಮುಖಂಡ ರವಿ ಯಾಕ್ಷಿಂತಿ, ವಕೀಲರಾದ ಅಂಬರೀಶ್ ಇಟ್ಟಗಿ, ಶರಣಪ್ಪ ಪ್ಯಾಟಿ, ರಾಘವೇಂದ್ರ ಯಾಕ್ಷಿಂತಿ, ಶೇಖರ್ ದೊರೆ ಕಕ್ಕಸಗೇರ, ರಾಜು ಬಾಣತಿಹಾಳ್, ರಾಜಶೇಖರ್ ಪತ್ತಾರ್ ಸೇರಿದಂತೆ ವಿವಿಧ ಸಮುದಾಯದ ಮುಖಂಡರು ಭಾಗವಹಿಸಿದ್ದರು.

-----ಫೋಟೊ

ಕರ್ನಾಟಕ ಕಾರ್ಯನಿರತರ ಪತ್ರಕರ್ತರ ಸಂಘದ ವತಿಯಿಂದ ನೀಡುವ ವಿಶೇಷ ದತ್ತಿ ಪ್ರಶಸ್ತಿಗೆ ಭಾಜನರಾದ ಹಿರಿಯ ವರದಿಗಾರ ಟಿ ನಾಗೇಂದ್ರ ಅವರಿಗೆ ನಾಗರಿಕರಿಂದ ಪ್ರವಾಸಿ ಮಂದಿರದಲ್ಲಿ ಸನ್ಮಾನಿಸಲಾಯಿತು.10ವೈಡಿಆರ್‌5 :