ಒಳ ಮೀಸಲಾತಿಗೆ ಹೋರಾಡಿದ ಹಿರಿಯ ನಾಯಕರಿಗೆ ನಗರದಲ್ಲಿ ಸನ್ಮಾನ

| Published : Aug 07 2024, 01:05 AM IST

ಸಾರಾಂಶ

Senior leaders who fought for internal reservation are honored in the city

-ಹಿರಿಯೂರು ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಲದ ಸನ್ಮಾನ ಸಮಾರಂಭ

-----

ಕನ್ನಡಪ್ರಭ ವಾರ್ತೆ ಹಿರಿಯೂರು: ಮಹಾನಾಯಕ ದಲಿತಸೇನೆ, ಅಂಬೇಡ್ಕರ್ ಸ್ವಾಭಿಮಾನಿ ಸೇನೆ, ದಲಿತ ಸಂಘರ್ಷ ಸಮಿತಿ ಪ್ರೊ.ಬಿ.ಕೃಷ್ಣಪ್ಪ ಬಣ, ದಲಿತ ಸಂಘರ್ಷ ಸಮಿತಿ ಪರಿವರ್ತನಾ ವಾದ ಮುಂತಾದ ದಲಿತಪರ ಸಂಘಟನೆಗಳಿಂದ ಒಳ ಮೀಸಲಾತಿ ಜಾರಿಗಾಗಿ ಮಾದಿಗ ದಂಡೋರ ಸಂಘಟನೆಯ ನೇತೃತ್ವದಲ್ಲಿ ಹೋರಾಟ ನಡೆಸಿದ್ದ ಹಿರಿಯ ಹೋರಾಟಗಾರರನ್ನು ನಗರದ ಪ್ರವಾಸಿ ಮಂದಿರದಲ್ಲಿ ಸನ್ಮಾನಿಸಲಾಯಿತು.

ಬಬ್ಬೂರು ಪರಮೇಶ್ವರಪ್ಪ ಮಾದಿಗ, ಸ್ವಾಮೀಜಿದಾಸ್, ಕೆ.ಗುರುಶ್ಯಾಮಯ್ಯ ಮಾದಿಗ, ಗೂಳ್ಯ ಈಶ್ವರ್, ಹಳೆಯಳನಾಡು ದ್ಯಾಮಣ್ಣ, ದಿ. ಪಟ್ರೆಹಳ್ಳಿ ರಾಮಯ್ಯ ಪರವಾಗಿ ಅವರ ಪುತ್ರ ಶ್ರೀಧರ್,ದಿ. ಕಣಜನಹಳ್ಳಿ ಕರಿಯಪ್ಪನವರ ಪರವಾಗಿ ಅವರ ಪುತ್ರ ದುಷ್ಯಂತ್, ಬೋರನಕುಂಟೆ ಕರಿಯಪ್ಪ, ಮಹೇಶ್, ಹುಚ್ಚವನಹಳ್ಳಿ ತಿಪ್ಪೇಸ್ವಾಮಿ, ರಾಘವೇಂದ್ರ ಎಎಸ್ ಎಸ್, ಆಲೂರು ಕಾಂತರಾಜ್ ಅವರನ್ನು ಸನ್ಮಾನಿಸಲಾಯಿತು.

ಮಾದಿಗ ದಂಡೋರ ರಾಜ್ಯ ಜಂಟಿ ಕಾರ್ಯದರ್ಶಿ ಬಬ್ಬೂರು ಪರಮೇಶ್ವರಪ್ಪ ಮಾತನಾಡಿ, ಒಳಮೀಸಲಾತಿ ಜಾರಿಗೆ ಮಾದಿಗ ದಂಡೋರ ಸಂಘಟನೆಯ ಅನೇಕ ಕಾರ್ಯಕರ್ತರು ಪ್ರಾಣ ತೆತ್ತಿದ್ದಾರೆ. ಸುಪ್ರೀಂಕೋರ್ಟ್ ನ ತೀರ್ಪಿನಂತೆ ರಾಜ್ಯದಲ್ಲಿ ಎಬಿಸಿಡಿ ವರ್ಗೀಕರಣ ಬೇಗ ಆಗಬೇಕು. ಇದಕ್ಕೆ ನಮ್ಮ ಸಹೋದರ ಜಾತಿಗಳು ವಿರೋಧ ಮಾಡುವುದನ್ನು ಹಾಗೂ ಇಲ್ಲಸಲ್ಲದ ಪುಕಾರು ಹಬ್ಬಿಸುವುದನ್ನು ನಿಲ್ಲಿಸಬೇಕು ಎಂದರು.

ಮಾದಿಗ ದಂಡೋರ ಜಿಲ್ಲಾಧ್ಯಕ್ಷ ಸ್ವಾಮೀಜಿ ದಾಸ್ ಮಾತನಾಡಿ, ಮಾದಿಗ ಸಮುದಾಯದ ನಿರಂತರ ಹೋರಾಟದಿಂದ ಒಳಮೀಸಲಿಗೆ ಗೆಲುವು ದೊರೆತಿದ್ದು 18-02-2002ರಲ್ಲಿ ಹಿರಿಯೂರಿನಲ್ಲಿ ಮಂದಕೃಷ್ಣ ಮಾದಿಗ ಅವರ ನೇತೃತ್ವದಲ್ಲಿ ಬೃಹತ್ ಸಭೆ ನಡೆಸಲಾಗಿತ್ತು. ಈಗ ಮತ್ತೊಮ್ಮೆ ಹಿರಿಯೂರಿನಿಂದ ಮೀಸಲಾತಿ ಜಾರಿಗಾಗಿ ಬೃಹತ್ ಹೋರಾಟ ಹಮ್ಮಿಕೊಳ್ಳುವ ಕಾಲ ದೂರವಿಲ್ಲ ಎಂದರು.

ದಂಡೋರ ರಾಜ್ಯ ಪ್ರ.ಕಾ. ಕೆ.ಗುರುಶ್ಯಾಮಯ್ಯ ಮಾದಿಗ ಮಾತನಾಡಿ, ಆಂಧ್ರ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಒಳಮೀಸಲಾತಿ ವಿಚಾರವನ್ನು ದಿಟ್ಟತನದ ನಿರ್ಧಾರದ ಹಾಗೇ ಸಿದ್ದರಾಮಯ್ಯನವರು ಕೂಡ ನಿರ್ಧಾರ ತೆಗೆದುಕೊಂಡು ಅಹಿಂದ ಮುಖ್ಯಮಂತ್ರಿ ಎನ್ನುವ ಹೆಸರಿಗೆ ಕಳಂಕಬಾರದಂತೆ ನಡೆದುಕೊಳ್ಳಬೇಕು ಎಂದರು.

ಮಹಾನಾಯಕ ದಲಿತ ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಕೆ.ಪಿ.ಶ್ರೀನಿವಾಸ್,ರಾಜ್ಯ ಕಾರ್ಯದರ್ಶಿ ರವಿಕುಮಾರ್ ಘಾಟ್,ಅಂಬೇಡ್ಕರ್ ಸ್ವಾಭಿಮಾನಿ ಸೇನೆಯ ರಾಜ್ಯ ಕಾರ್ಯದರ್ಶಿ ರಾಮಚಂದ್ರಪ್ಪ, ತಾಲೂಕು ಅಧ್ಯಕ್ಷ ಆರ್ ರಾಘವೇಂದ್ರ, ಮುಖಂಡರಾದ ಜಿ.ಎಲ್.ಮೂರ್ತಿ, ವಕೀಲ ಮಸ್ಕಲ್ ರಾಜಪ್ಪ, ಪ್ರದೀಪ್, ಕೂನಿಕೆರೆ ಮಾರುತಿ, ಡಿಎಸ್ಎಸ್ ಪರಿವರ್ತನಾ ವಾದ ಜಿಲ್ಲಾಧ್ಯಕ್ಷ ಮಂಜುನಾಥ್ ಹೆಗ್ಗೆರೆ, ಡಿಎಸ್ಎಸ್ ಪ್ರೊ ಕೃಷ್ಣಪ್ಪ ಸ್ಥಾಪಿತ ತಾಲೂಕು ಅಧ್ಯಕ್ಷ ರಘುನಾಥ್, ಲಕ್ಷ್ಮಣ್ ರಾವ್, ಗೋವಿಂದಪ್ಪ, ಕಣುಮೇಶ್, ಓಂಕಾರ್, ರಾಮದಾಸ್, ಸಾಧಿಕ್, ರಾಘವೇಂದ್ರ, ನೂರ್ ಅಹಮದ್, ವಿಷ್ಣು, ರಾಘು ಮಹಾಲಿಂಗಪ್ಪ ಮರಡಿಹಳ್ಳಿ, ಬೆಳ್ಳಿ ಇದ್ದರು.

-----

ಫೋಟೊ: 1,2 ದಲಿತಪರ ಸಂಘಟನೆಗಳಿಂದ ಒಳ ಮೀಸಲಾತಿ ಜಾರಿಗಾಗಿ ಮಾದಿಗ ದಂಡೋರ ಸಂಘಟನೆಯ ನೇತೃತ್ವದಲ್ಲಿ ಹೋರಾಟ ನಡೆಸಿದ್ದ ಹಿರಿಯ ಹೋರಾಟಗಾರರನ್ನು ನಗರದ ಪ್ರವಾಸಿ ಮಂದಿರದಲ್ಲಿ ಸನ್ಮಾನಿಸಲಾಯಿತು.