ತಂಬಾಕು ಮಾರಾಟಕ್ಕೆ ಪ್ರತ್ಯೇಕ ಪರವಾನಗಿ

| Published : Mar 01 2025, 01:00 AM IST

ಸಾರಾಂಶ

ಸರ್ಕಾರ ಆದೇಶದಂತೆ ತಂಬಾಕು ಮಾರಾಟಕ್ಕೆ ಪ್ರತ್ಯೇಕ ಪರವಾನಗಿ ನೀತಿ ಅನುಷ್ಠಾನಗೊಳಿಸಲು ಈಗಾಗಲೇ ಹಿಂದಿನ ಸಭೆಯಲ್ಲಿ ತಿಳಿಸಲಾಗಿದೆ, ರಾಜ್ಯ ಮಟ್ಟದಿಂದ ತರಬೇತಿಯು ಸಹ ನೀಡಿದ್ದು ಸದರಿ ಸ್ಥಳೀಯ ಸಂಸ್ಥೆಗಳಿಂದ ಪರವಾನಗಿ ವಿತರಣೆಯಾಗಿರುವವರಿಗೆ ತಂಬಾಕು ಮಾರಾಟ ಪರವಾನಗಿ ನೀಡಬೇಕು

ಕನ್ನಡಪ್ರಭ ವಾರ್ತೆ ಕೋಲಾರಕೋಟ್ಪಾ ಕಾಯ್ದೆಯಡಿಯಲ್ಲಿ ಸೆಕ್ಷನ್ ೪ ರ ಅನುಸಾರ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಬಳಕೆ ಮಾಡಿದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಂಡು ದಂಡ ವಿಧಿಸಲಾಗುವುದು, ಈವರೆಗೂ ಜಿಲ್ಲೆಯಲ್ಲಿ ೭೩೫ ಪ್ರಕರಣಗಳನ್ನು ದಾಖಲು ಮಾಡಿ ದಂಡ ವಿಧಿಸಲಾಗಿದೆ ಎಂದು ಎಡಿಸಿ ಮಂಗಳಾ ತಿಳಿಸಿದರು.ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ತಂಬಾಕು ನಿಯಂತ್ರಣದ ಕುರಿತು ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದರು.ಮಾರಾಟಕ್ಕೆ ಪ್ರತ್ಯೇಕ ಪರವಾನಗಿ

ಸರ್ಕಾರ ಆದೇಶದಂತೆ ತಂಬಾಕು ಮಾರಾಟಕ್ಕೆ ಪ್ರತ್ಯೇಕ ಪರವಾನಗಿ ನೀತಿ ಅನುಷ್ಠಾನಗೊಳಿಸಲು ಈಗಾಗಲೇ ಹಿಂದಿನ ಸಭೆಯಲ್ಲಿ ತಿಳಿಸಲಾಗಿದೆ, ರಾಜ್ಯ ಮಟ್ಟದಿಂದ ತರಬೇತಿಯು ಸಹ ನೀಡಿದ್ದು ಸದರಿ ಸ್ಥಳೀಯ ಸಂಸ್ಥೆಗಳಿಂದ ಪರವಾನಗಿ ವಿತರಣೆಯಾಗಿರುವವರಿಗೆ ತಂಬಾಕು ಮಾರಾಟ ಪರವಾನಗಿ ನೀಡಬೇಕು ಎಂದು ಹೇಳಿದರು. ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ತಂಬಾಕು ಮುಕ್ತ ನಾಮಫಲಕಗಳನ್ನು ಅಳವಡಿಸಬೇಕು ಇದು ಸರ್ಕಾರದ ಆದೇಶವಾಗಿದೆ, ಕಚೇರಿಯ ಆವರಣಗಳಲ್ಲಿ ತಂಬಾಕು ಬಳಕೆ ಮಾಡಬಾರದು ಎಂಬುದು ಇದರ ಉದ್ದೇಶವಾಗಿದೆ. ಗ್ರಾಪಂಗಳ ಮುಖಾಂತರ ಒಂದು ಹಳ್ಳಿ ಅಥವಾ ಗ್ರಾಮವನ್ನು ಗುರುತಿಸಿ ಸ್ಥಳೀಯ ಆರೋಗ್ಯ ಕೇಂದ್ರದ ಸಮನ್ವಯದೊಂದಿಗೆ ಗ್ರಾಮದಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಮತ್ತು ಬಳಕೆ ಸಂಪೂರ್ಣವಾಗಿ ನಿಷೇಧಿಸಿ ತಂಬಾಕು ಮುಕ್ತ ಗ್ರಾಮವನ್ನಾಗಿ ಘೋಷಿಸಬೇಕು ಎಂದು ತಿಳಿಸಿದರು.

ಸಾರ್ವಜನಿಕ ಆರೋಗ್ಯದ ದೊಡ್ಡ ಬೆದರಿಕೆಗಳಲ್ಲಿ, ತಂಬಾಕು ಸೇವನೆಯು ಒಂದಾಗಿದೆ. ವಿಶ್ವದಾದ್ಯಂತ ಇರುವ ೧.೧ ಶತಕೋಟಿ ಧೂಮಪಾನಿಗಳಲ್ಲಿ ಸುಮಾರು ಶೇ.೮೦ ರಷ್ಟು ಜನ ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ ವಾಸಿಸುತ್ತಿದ್ದಾರೆ. ಅಲ್ಲಿ ತಂಬಾಕು ಸಂಬಂಧಿತ ಕಾಯಿಲೆ ಮತ್ತು ಸಾವಿನ ಪ್ರಮಾಣ ಹೆಚ್ಚಾಗಿದೆ ಎಂದರು. ಸಭೆಯಲ್ಲಿ ಡಿಡಿಪಿಐ ಉಪ ನಿರ್ದೇಶಕ ಕೃಷ್ಣಮೂರ್ತಿ ಇದ್ದರು.