ಪ್ರತ್ಯೇಕ ರಾಜ್ಯ ಎಂಬುದು ಮುಗಿದ ಕಥೆ: ರೆಡ್ಡಿ

| Published : Nov 02 2023, 01:00 AM IST

ಸಾರಾಂಶ

ರಾಮನಗರ: ಪ್ರತ್ಯೇಕ ರಾಜ್ಯ ಅನ್ನುವುದು ಮುಗಿದ ಕಥೆ. ಕನ್ನಡ ಮಾತನಾಡುವ ಭಾಷಿಗರೆಲ್ಲರು ಒಂದೇ ಆಗಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿದರು.
ರಾಮನಗರ: ಪ್ರತ್ಯೇಕ ರಾಜ್ಯ ಅನ್ನುವುದು ಮುಗಿದ ಕಥೆ. ಕನ್ನಡ ಮಾತನಾಡುವ ಭಾಷಿಗರೆಲ್ಲರು ಒಂದೇ ಆಗಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಎಂಇಎಸ್‌ನ ನಾಲ್ಕೈದು ಜನರು ಗೆದ್ದು ಅಸೆಂಬ್ಲಿಗೆ ಬರುತ್ತಿದ್ದರು. ಈಗ ಅವರೆಲ್ಲರು ಬರುವುದಿಲ್ಲ. ಬೆಳಗಾವಿಯಲ್ಲಿ ಅಷ್ಟೇ ಅಲ್ಲ. ನಗರ ಪಾಲಿಕೆಯಲ್ಲು ಅವರನ್ನು ಗೆಲ್ಲಿಸಲ್ಲ, ಎಲ್ಲಾ ಸೋಲಿಸುತ್ತಾರೆ ಎಂದರು. ಬಸ್ ಸುಟ್ಟಿದ್ದಾರೆ, ಬಸ್ ಸುಡುವುದಕ್ಕೂ, ಮೀಸಲಾತಿಗೂ ಯಾವುದೇ ಸಂಬಂಧ ಇಲ್ಲ, ಅವರು ಮೀಸಲಾತಿಗೆ ಹೋರಾಟ ಮಾಡಿಕೊಳ್ಳಲಿ . ಯಾರು ಬಸ್‌ ಗಳನ್ನು ಸುಟ್ಟಿದ್ದಾರೊ ಅವರ ವಿರುದ್ಧ ಕ್ರಮ ಜರುಗಿಸುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆಯುತ್ತೇನೆ ಎಂದು ಹೇಳಿದರು. ಅವರ ಬಸ್ಸುಗಳ ನಮ್ಮ ಕಡೆ ಬರುತ್ತಲ್ಲ. ನಮ್ಮವರು ಏನಾದರು ಮಾಡುತ್ತಾರಾ. ನಮಗೂ ಮಹಾರಾಷ್ಟ್ರಕ್ಕೂ ಏನಾದರು ಗಲಾಟೆ ಇದಿಯಾ. ಅದು ಅವರ ಆಂತರಿಕ ವಿಚಾರ. ಅವರು ಮಾಡುತ್ತಿರುವುದು ತಪ್ಪು ಎಂದರು. ರಾಜ್ಯಮಟ್ಟದಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡುತ್ತೇವೆ. ಜಿಲ್ಲಾಮಟ್ಟದಲ್ಲಿ ಪ್ರಶಸ್ತಿ ನೀಡುವ ಬಗ್ಗೆ ಮಾಹಿತಿ ಇರಲಿಲ್ಲ. ಈ ಬಗ್ಗೆ ಬೆಳಗ್ಗೆಯಷ್ಟೇ ಗೊತ್ತಾಯಿತು. ಮುಂದಿನ ವರ್ಷದಿಂದ ರಾಮನಗರದಲ್ಲೂ ಜಿಲ್ಲಾ ಮಟ್ಟದ ಪ್ರಶಸ್ತಿ ನೀಡುತ್ತೇವೆ. ರಾಜ್ಯ ಮಟ್ಟದ ಪ್ರಶಸ್ತಿ ಎಲ್ಲರಿಗೂ ಸಿಗುವುದಿಲ್ಲ. ಜಿಲ್ಲಾ ಮಟ್ಟದಲ್ಲಿ ನೆಲ ಜಲ ಭಾಷೆಗಾಗಿ ಹಾಗೂ ವಿವಿಧ ಕ್ಷೇತ್ರಕ್ಕೆ ಸಾಧನೆ ಮಾಡಿದವರಿಗೆ ಪ್ರಶಸ್ತಿ ಕೊಡಲಾಗುವುದು ಎಂದು ರಾಮಲಿಂಗಾರೆಡ್ಡಿ ಹೇಳಿದರು.