ವರಮಹಾಲಕ್ಷ್ಮೀ ಉತ್ಸವದಲ್ಲಿ ಪಾಲ್ಗೊಂಡ ಧಾರಾವಾಹಿ ಕಲಾವಿದರು

| Published : Aug 06 2024, 12:33 AM IST

ವರಮಹಾಲಕ್ಷ್ಮೀ ಉತ್ಸವದಲ್ಲಿ ಪಾಲ್ಗೊಂಡ ಧಾರಾವಾಹಿ ಕಲಾವಿದರು
Share this Article
  • FB
  • TW
  • Linkdin
  • Email

ಸಾರಾಂಶ

ವಿಭಿನ್ನ, ವಿಶೇಷ ಕಾರ್ಯಕ್ರಮಗಳಿಂದಲೇ ಕನ್ನಡಿಗರನ್ನು ರಂಜಿಸುತ್ತಲಿರುವ ರಾಜ್ಯದ ಮನೋರಂಜನಾ ವಾಹಿನಿಯೆಂದೇ ಹೆಸರಾಗಿರುವ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಶ್ರಾವಣಿ ಸುಬ್ರಹ್ಮಣ್ಯ, ಬ್ರಹ್ಮಗಂಟು ಧಾರಾವಾಹಿಗಳ ಕಲಾವಿದರು ಬೆಣ್ಣೆನಗರಿಗೆ ಬಂದು ವರಮಹಾಲಕ್ಷ್ಮೀ ಉತ್ಸವ ಕಾರ್ಯಕ್ರಮ ನಡೆಸಿಕೊಟ್ಟರು.

- ಹಾಡು, ಸಂಗೀತ, ನೃತ್ಯ, ಹಾಸ್ಯ, ಮಾತುಗಳೊಂದಿಗೆ ಮುದ ತಂದ ಕಾರ್ಯಕ್ರಮ - - - ಕನ್ನಡಪ್ರಭ ವಾರ್ತೆ, ದಾವಣಗೆರೆ

ವಿಭಿನ್ನ, ವಿಶೇಷ ಕಾರ್ಯಕ್ರಮಗಳಿಂದಲೇ ಕನ್ನಡಿಗರನ್ನು ರಂಜಿಸುತ್ತಲಿರುವ ರಾಜ್ಯದ ಮನೋರಂಜನಾ ವಾಹಿನಿಯೆಂದೇ ಹೆಸರಾಗಿರುವ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಶ್ರಾವಣಿ ಸುಬ್ರಹ್ಮಣ್ಯ, ಬ್ರಹ್ಮಗಂಟು ಧಾರಾವಾಹಿಗಳ ಕಲಾವಿದರು ಬೆಣ್ಣೆನಗರಿಗೆ ಬಂದು ವರಮಹಾಲಕ್ಷ್ಮೀ ಉತ್ಸವ ಕಾರ್ಯಕ್ರಮ ನಡೆಸಿಕೊಟ್ಟರು.

ನಗರದ ಹದಡಿ ರಸ್ತೆಯ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ನಡೆದ ಈ ವರಮಹಾಲಕ್ಷ್ಮೀ ಉತ್ಸವದಲ್ಲಿ ವಿವಿಧ ಹಾಡು, ಸಂಗೀತ, ನೃತ್ಯ, ಹಾಸ್ಯ, ಮಾತುಗಳೊಂದಿಗೆ ಎಲ್ಲರ ಕಣ್ಮನ ಸೆಳೆದರು.

ಕಾರ್ಯಕ್ರಮದ ಮೊದಲು ಸುದ್ದಿಗೋಷ್ಠಿಯಲ್ಲಿ ಫಿಕ್ಷನ್‌ನ ಸುಶಾಂತ್ ಉತ್ಸವ ಕುರಿತು ಮಾತನಾಡಿ, ಶ್ರಾವಣಿ ಸುಬ್ರಹ್ಮಣ್ಯ 100ನೇ ಹಾಗೂ ಬ್ರಹ್ಮ ಗಂಟು 40ನೇ ಕಂತು ಪ್ರಸಾರವಾಗುತ್ತಿದೆ. ಸಾಮಾನ್ಯವಾಗಿ ರಾತ್ರಿ 10ರ ನಂತರ ಗ್ರಾಮೀಣ ಭಾಗದಲ್ಲಿನ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವುದು ಕಷ್ಟ ಎನ್ನುವ ಮಾತಿದೆ. ಆದರೆ, ಬ್ರಹ್ಮಗಂಟು ಧಾರಾವಾಹಿ 40 ಕಂತುಗಳನ್ನು ಯಶಸ್ವಿಯಾಗಿ ಪೂರೈಸಿರುವುದು ಕಥೆಯ ಗಟ್ಟಿತನ ತೋರಿಸುತ್ತದೆ ಎಂದು ಹೇಳಿದರು.

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಒಂದು ಕುಟುಂಬದ ತಂದೆ ಮತ್ತು ಮಗಳ ಬಾಂಧವ್ಯದ ಕಥೆಯಾದರೆ, ಬ್ರಹ್ಮಗಂಟು ಅಕ್ಕನಿಗಾಗಿ ಏನೆಲ್ಲ ತ್ಯಾಗ ಮಾಡಲಿಕ್ಕೆ ಸಿದ್ಧವಾಗಿರುವ ತಂಗಿಯ ಕಥೆ. ತಂದೆಯ ಪ್ರೀತಿಯ ಸಂಪಾದನೆಗಾಗಿ ಮಗಳು ನಡೆಸುವ ಬಾಂಧವ್ಯ ಹೋರಾಟ ಶ್ರಾವಣಿ ಸುಬ್ರಹ್ಮಣ್ಯ 100 ಕಂತು ಪೂರೈಸಿದೆ. ಅಕ್ಕ-ತಂಗಿಯರ ಉತ್ತಮ ಬಾಂಧವ್ಯದ ಕಥೆಯ ಬ್ರಹ್ಮಗಂಟು ಸಹ 40 ಕಂತು ಕಂಡಿದೆ. ಕನ್ನಡಿಗರು ನಮ್ಮ ವಾಹಿನಿಯ ಎಲ್ಲ ಧಾರಾವಾಹಿಗಳಿಗೆ ಪ್ರೋತ್ಸಾಹ ನೀಡಿದಂತೆ ಈ ಎರಡೂ ಧಾರಾವಾಹಿಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದರು.

ಹಿರಿಯ ನಟ ಮೋಹನ್ ಮಾತನಾಡಿ, ಹಿಂದಿನಂತೆ ಜನರಲ್ಲಿ ಸಿನಿಮಾ ಕ್ರೇಜ್ ಇಲ್ಲವಾಗುತ್ತಿದೆ. ಓಟಿಟಿಯಲ್ಲಿ ಚಿತ್ರ ಬಂದೇ ಬರುತ್ತದೆ. ಕೆಲವಾರು ಕೆಟ್ಟ ಚಿತ್ರಗಳ ಕಾರಣಕ್ಕೆ ಜನರು ಚಿತ್ರಮಂದಿರದತ್ತ ಬಾರದಂತೆ ಆಗಿದೆ. ಕಥೆಯೇ ಚಿತ್ರದ ನಿಜವಾದ ನಾಯಕನಾಗಬೇಕು ಎಂದು ತಿಳಿಸಿದರು.

ನಟಿ ಸಿತಾರಾ ಮಾತನಾಡಿ, ನಾಯಕ ಎಂದರೆ ಖಳನಾಯಕ ಇರಬೇಕು, ಇರುತ್ತಾರೆ ಕೂಡ. ಯಾವುದನ್ನ ಆಯ್ಕೆ ಮಾಡಿಕೊಳ್ಳಬೇಕು ಎಂಬುದು ನಮ್ಮ ಕೈಯಲ್ಲಿ ಇರುತ್ತದೆ. ಧಾರಾವಾಹಿಗಳಲ್ಲಿ ಬರೀ ಕೆಟ್ಟದ್ದನ್ನೇ ತೋರಿಸುತ್ತಾರೆ ಅನ್ನುವುದಕ್ಕಿಂತಲೂ ಒಳ್ಳೆಯದ್ದನ್ನೂ ತೋರಿಸುತ್ತಾರೆ. ಅದನ್ನೇ ನಾವು ಸ್ವೀಕರಿಸಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ಕಲಾವಿದರಾದ ಆಸಿಯಾ, ಪ್ರಜ್ಞಾ ಭಟ್, ದಿಯಾ, ರೋಹಿತ್ ಶ್ರೀನಾಥ್, ಸ್ನೇಹಾ, ಅಮಿತ್, ಭುವನ್ ಸತ್ಯ, ಸೂರಜ್, ಭರತ್‌ ನಾಯ್ಕ, ಕೀರ್ತಿ ವೆಂಕಟೇಶ್, ಬೃಂದಾ, ಆರತಿ ಪಡುಬಿದ್ರೆ, ಶರಣ್ಯ, ಶ್ರೀಹರ್ಷ ಮತ್ತು ಶರಣಯ್ಯ ಇತರರು ಇದ್ದರು.

- - -

ಬಾಕ್ಸ್‌ ಜೀವನದಲ್ಲಿ ಒಳ್ಳೆಯದು ಮತ್ತು ಕೆಟ್ಟದ್ದು ಎರಡೂ ಇರುತ್ತವೆ. ಯಾವುದನ್ನ ಆಯ್ಕೆ ಮಾಡಿಕೊಳ್ಳಬೇಕು ಎಂಬುದು ನಮ್ಮ ಕೈಯಲ್ಲಿ ಇರುತ್ತದೆ. ಒಳ್ಳೆಯ ಜೊತೆಗೆ ಕೆಟ್ಟದ್ದು ಇರುತ್ತದೆ ಎಂಬ ಕಥೆಗಳ ಆಧಾರದಲ್ಲಿ ಧಾರಾವಾಹಿಗಳನ್ನು ನಡೆಸಿಕೊಂಡು ಹೋಗಲಾಗುತ್ತದೆ. ನಮ್ಮ ಸುತ್ತಮುತ್ತಲೇ ನಡೆಯುವ ಅನೇಕ ಘಟನೆಗಳನ್ನೇ ಕಥೆಯನ್ನಾಗಿ ಹೆಣೆಯಲಾಗುತ್ತದೆ

- ಶಿವಾಜಿ ರಾವ್, ಹಿರಿಯ ನಟ

- - - -4ಕೆಡಿವಿಜಿ37ಃ:

ದಾವಣಗೆರೆಯಲ್ಲಿ ಝೀ ಕನ್ನಡ ವಾಹಿನಿಯ ವರಮಹಾಲಕ್ಷ್ಮೀ ಉತ್ಸವ ಕಾರ್ಯಕ್ರಮದಲ್ಲಿ ಶ್ರಾವಣಿ ಸುಬ್ರಹ್ಮಣ್ಯ, ಬ್ರಹ್ಮ ಗಂಟು ಕಲಾವಿದರು ಮಾತನಾಡಿದರು.