ರೈತರ ಮಕ್ಕಳನ್ನು ಗುರುತಿಸಿ ಅವರಿಗೆ ರಿಲರ್ಸ್ ತರಬೇತಿ ನೀಡುವ ಮೂಲಕ ಸ್ಫೂರ್ತಿ ತುಂಬಿ ಅವರು ಉದ್ದಿಮೆಗಳನ್ನು ಸ್ಥಾಪಿಸಿದಲ್ಲಿ ಶೇ.೫೦ರಷ್ಟು ಸಹಾಯ ಧನದ ಸೌಲಭ್ಯ ಸಿಗಲಿದೆ. ಈಗಾಗಲೇ ಶಾಸಕ ಕೊತ್ತೂರು ಮಂಜುನಾಥ್ ಅವರು ಕಾಂತರಾಜ್ ಸರ್ಕಲ್-ದೇವರಾಯ ಸಮುದ್ರ ಬಳಿ ತರಬೇತಿ ಕೇಂದ್ರ ಸ್ಥಾಪನೆಗೆ ಸ್ಥಳಾವಕಾಶ ಕಲ್ಪಿಸಲು ಮುಂದಾಗಿದ್ದಾರೆ
ಕನ್ನಡಪ್ರಭ ವಾರ್ತೆ ಕೋಲಾರರೇಷ್ಮೆ ಗೊಡು ಉತ್ಪಾದಿಸುವ ಜೊತೆಗೆ ರಿಲರ್ಸ್ ವೃತ್ತಿಯನ್ನೂ ಕೈಗೊಂಡಾಗ ಮಾತ್ರ ರೇಷ್ಮೆ ಬೆಳೆಗಾರರು ಪ್ರಗತಿ ಪಥದತ್ತ ಸಾಗಲು ಸಾಧ್ಯ, ಈ ಭಾಗದ ರೇಷ್ಮೆ ಬೆಳೆಗಾರರು ಕನಿಷ್ಟ ೨೦೦ ಮಂದಿ ತಮ್ಮ ಕುಟುಂಬದ ಯುವಕರನ್ನು ರಿಲರ್ಸ್‌ಗಳಾಗಿ ರೂಪಿಸಬೇಕೆಂದು ಸಂಸದ ಎಂ.ಮಲ್ಲೇಶ್‌ಬಾಬು ಸಲಹೆ ನೀಡಿದರು. ನಗರದ ಟಿ.ಚೆನ್ನಯ್ಯ ರಂಗಮಂದಿರದಲ್ಲಿ ಕೋಲಾರ ಜಿಲ್ಲಾ ರೇಷ್ಮೆ ಬೆಳೆಗಾರರ ಅಭಿವೃದ್ದಿ ಸಂಘದಿಂದ ನಮ್ಮ ಕೋಲಾರ-ನಮ್ಮ ರೇಷ್ಮೆ, ನಮ್ಮ ರೈತ-ನಮ್ಮ ಹೆಮ್ಮೆ ಘೋಷಣೆಯಡಿ ರೇಷ್ಮೆ ರೈತರ ದಿನಾಚರಣೆ-೨೦೨೫ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ರಿಲರ್ಸ್ ತರಬೇತಿ ಕೇಂದ್ರ ಸ್ಥಾಪನೆ
ರೈತರ ಮಕ್ಕಳನ್ನು ಗುರುತಿಸಿ ಅವರಿಗೆ ರಿಲರ್ಸ್ ತರಬೇತಿ ನೀಡುವ ಮೂಲಕ ಸ್ಫೂರ್ತಿ ತುಂಬಿ ಅವರು ಉದ್ದಿಮೆಗಳನ್ನು ಸ್ಥಾಪಿಸಿದಲ್ಲಿ ಶೇ.೫೦ರಷ್ಟು ಸಹಾಯ ಧನದ ಸೌಲಭ್ಯ ಸಿಗಲಿದೆ. ಕ್ಲಸ್ಟರ್ ಫಾರ್ಮೇಷನ್‌ಗೆ ಪೂರಕವಾಗಲಿದೆ. ರಿಲರ್ಸ್ ಜೊತೆಗೆ ಸಪ್ಲಿಂಗ್‌ನತ್ತಲೂ ಗಮನ ಹರಿಸಬೇಕು. ಈಗಾಗಲೇ ಸ್ಥಳೀಯ ಶಾಸಕ ಕೊತ್ತೂರು ಮಂಜುನಾಥ್ ಅವರು ಕಾಂತರಾಜ್ ಸರ್ಕಲ್-ದೇವರಾಯ ಸಮುದ್ರ ಬಳಿ ತರಬೇತಿ ಕೇಂದ್ರ ಸ್ಥಾಪನೆಗೆ ಸ್ಥಳದ ಅವಕಾಶ ಕಲ್ಪಿಸಿ ಕೊಡುವುದಾಗಿ ತಿಳಿಸಿದ್ದಾರೆ, ರಾಜ್ಯ-ಕೇಂದ್ರ ಸರ್ಕಾರದಿಂದ ತರಬೇತಿಗೆ ಅಗತ್ಯವಾದ ಸೌಲಭ್ಯಗಳನ್ನು ಕಲ್ಪಿಸಲು ನಿಮ್ಮ ಜೊತೆಗೆ ನಾವು ಇರುತ್ತೇವೆ ಎಂದರು.ರೇಷ್ಮೆಯ ಸೀರೆಗಳಿಗೆ ಕಾಂಚಿವರಂ ಯಾವ ರೀತಿ ಖ್ಯಾತಿ ಪಡೆದಿದೆಯೋ ಅದೇ ರೀತಿ ಕೋಲಾರದ ರೇಷ್ಮೆ ನಾಡಿನಲ್ಲಿ ರೇಷ್ಮೆ ಸೀರೆಗಳ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುವಂತಾಗಬೇಕು. ಮಣ್ಣಿನಿಂದ ರೇಷ್ಮೆಯವರೆಗೆ ಅಭಿವೃದ್ದಿ ಪಡೆಸಲು ಕೇಂದ್ರ ಸಚಿವೆ ಶೋಭಾ ಕರಂದಾಲ್ಲೆ ಸಹಕಾರವು ಸಂಪೂರ್ಣವಾಗಿ ಸಿಗಲಿದೆ. ಟೆಕ್ಸ್‌ಟೈಲ್ ಪ್ರಾಜೆಕ್ಟ್ ಮಾಡಿದರೆ ಅದನ್ನು ಈಡೇರಿಸಿ ಕೊಡುವುದಾಗಿ ಸಂಸದರು ಭರವಸೆ ನೀಡಿದರು.ಟೊಮೆಟೋ ಜತೆ ಇತರೆ ಬೆಳೆ ಮಳಿಗೆಗಳನ್ನು ಉದ್ಘಾಟಿಸಿದ ಎಂಎಲ್ಸಿ ಇಂಚರ ಗೋವಿಂದರಾಜು ಮಾತನಾಡಿ, ನಮ್ಮ ರೈತರು ಟೊಮೆಟೋ ಬೆಳೆ ಬಗ್ಗೆ ಅತಿಯಾದ ಆಸೆ ಹೊಂದಿದ್ದು ಬಹಳಷ್ಟು ಮಂದಿ ಬೆಳೆ ಕುಸಿತದಿಂದ ನೆಲಕಚ್ಚಿದರೂ ಅವರಿಗೆ ಇಂದಲ್ಲಾ ನಾಳೆಯಾದರೂ ಗಗನಕ್ಕೇರಿದ ಬೆಲೆ ಸಿಗುತ್ತದೆ ಎಂಬ ಆಶಯ ಹೊಂದಿದ್ದಾರೆ. ಇದು ಸರಿಯಲ್ಲ. ಟೊಮೆಟೋ ಜೊತೆಗೆ ಇತರೆ ಬೆಳೆಗಳನ್ನು ಬೆಳೆದಾಗ ಒಂದರಲ್ಲಿ ನಷ್ಟವಾದರೂ ಮತ್ತೊಂದರಲ್ಲಿ ಲಾಭ ಸಿಗುವ ಸಾಧ್ಯತೆ ಇರುತ್ತದೆ ಎಂದು ಹೇಳಿದರು.ಅರಣ್ಯ ಇಲಾಖೆ ಜತೆ ಸಂಘರ್ಷ
ರಾಜ್ಯದಲ್ಲಿ ಅರಣ್ಯ ಇಲಾಖೆಯವರು ೯ ಲಕ್ಷ ಎಕರೆ ಜಮೀನನ್ನು ರೈತರು ಒತ್ತುವರಿ ಮಾಡಿದ್ದಾರೆಂದು ಸಮರ ಸಾರಿದ್ದಾರೆ. ರೈತರ ಜಮೀನು ಅರಣ್ಯಕ್ಕೆ ಸೇರಿದ್ದಾರೆ ಎನ್ನುತ್ತಿದ್ದಾರೆ. ಅದರೆ ರೈತರು ಬೆಳೆಯುವುದು ನಿಲ್ಲಿಸಿದರೆ ಗತಿಯೇನು ಎಂಬುವುದು ಊಹೆಗೂ ಮೀರಿದ್ದು, ಕಂದಾಯ ಇಲಾಖೆ ನೀಡಿರುವ ದಾಖಲಾತಿಗಳ ಜಮೀನುಗಳೆಲ್ಲಾ ಅರಣ್ಯಕ್ಕೆ ಸೇರಿದ್ದು ಎಂಬುವುದು ಸಮಂಜಸವಲ್ಲ ಎಂದರು.ಶಾಸಕ ಕೊತ್ತೂರು ಮಂಜುನಾಥ್, ಎಂಎಲ್ಸಿ ಎಂ.ಎಲ್.ಅನಿಲ್‌ಕುಮಾರ್, ಸಂಘದ ಅಧ್ಯಕ್ಷ ಕೆ.ವಿ.ಸತೀಶ್, ಕೇಂದ್ರ ರೇಷ್ಮೆ ಮಂಡಳಿ ಜಂಟಿ ಕಾರ್ಯದರ್ಶಿ ನರೇಶ್‌ಬಾಬು, ರೇಷ್ಮೆ ಇಲಾಖೆ ಉಪನಿರ್ದೇಶಕ ಆಂಜನೇಯರೆಡ್ಡಿ, ಗೂಡು ಮಾರುಕಟ್ಟೆ ಉಪ ನಿರ್ದೇಶಕ ಎಸ್.ಎನ್.ಶ್ರೀನಿವಾಸ್, ಕೃಷಿಕ ಸಮಾಜ ಅಧ್ಯಕ್ಷ ಡಿ.ಎಲ್.ನಾಗರಾಜ್, ಸಂದ ಪ್ರಧಾನ ಕಾರ್ಯದರ್ಶಿ ಶಂಕರೇಗೌಡ, ಉಪಾಧ್ಯಕ್ಷ ಎಚ್.ವಿ.ರಮೇಶ್ ಇದ್ದರು.