ಸಾರಾಂಶ
ಹೆಬ್ರಿ ಶಾಂತಿನಿಕೇತನದ ವತಿಯಿಂದ ಇತ್ತೀಚೆಗೆ ಜ್ಞಾನ ದೀವಿಗೆ ಕಾರ್ಯಕ್ರಮ ನಡೆಯಿತು. ಉಡುಪಿ ಅದಮಾರು ಮಠದ ಧಾರ್ಮಿಕ ಪ್ರವಚನಕಾರ ಓಂ ಪ್ರಕಾಶ್ ಭಟ್ ಉಪನ್ಯಾಸ ನೀಡಿದರು.
ಕನ್ನಡಪ್ರಭ ವಾರ್ತೆ ಕಾರ್ಕಳ
ಮನುಷ್ಯ ಮೊದಲು ಸುಸಂಸ್ಕೃತನಾಗಬೇಕು. ದೇವರ ಸ್ಮರಣೆಯನ್ನು ನಿರಂತರವಾಗಿ ಮಾಡುತ್ತಾ ಸಾಗಬೇಕಾಗಿದೆ. ಸ್ಮರಣೆಗೆ ಯಾವುದೇ ಕಾಲದ ಮಿತಿ ಇಲ್ಲ. ನಮ್ಮನ್ನು ನಾವು ಶುದ್ಧಿ ಮಾಡಿಕೊಳ್ಳಬೇಕಾದರೆ ದೇವರಸ್ತುತಿ ಬಹಳ ಮುಖ್ಯ ಎಂದು ಉಡುಪಿ ಅದಮಾರು ಮಠದ ಧಾರ್ಮಿಕ ಪ್ರವಚನಕಾರ ಓಂ ಪ್ರಕಾಶ್ ಭಟ್ ಹೇಳಿದರು.ಅವರು ಹೆಬ್ರಿ ಶಾಂತಿನಿಕೇತನದ ವತಿಯಿಂದ ಇತ್ತೀಚೆಗೆ ನಡೆದ ಜ್ಞಾನ ದೀವಿಗೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಎಲ್ಲರೂ ಒಂದಾಗಿ ಸಮಾಜದಲ್ಲಿ ಬಾಳಬೇಕು. ವ್ಯವಸ್ಥಿತ ದೇಶ ಕಟ್ಟಲು ಉತ್ತಮ ಪ್ರಜೆಗಳ ಅಗತ್ಯವಿರುವದರಿಂದ ನಾವೆಲ್ಲರೂ ಕಟಿಬದ್ಧರಾಗಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮ್ಮನ್ನು ಉತ್ತಮವಾಗಿ ತೊಡಗಿಸಿಕೊಂಡಾಗ ಮಾತ್ರ ದೇಶದ ಭವಿಷ್ಯ ಉತ್ತಮವಾಗಿರುತ್ತದೆ. ಗೋಮಾತೆಯ ಮೇಲೆ ನಿರಂತರವಾಗಿ ಅಪರಾಧಗಳು ನಡೆಯುತ್ತಿರುವುದು ಖಂಡನೀಯ ಎಂದು ಹೇಳಿದರು.ಶಾಂತಿನಿಕೇತನದ ವತಿಯಿಂದ ಓಂ ಪ್ರಕಾಶ್ ಹಾಗೂ ರೂಪ ದಂಪತಿಯನ್ನು ಸನ್ಮಾನಿಸಲಾಯಿತು.ಶಾಂತಿನಿಕೇತನದ ನಿಯೋಜಿತ ಅಧ್ಯಕ್ಷ ಮಹೇಶ್, ಸಿಇಒ ನರೇಂದ್ರ, ಆಡಳಿತ ಮಂಡಳಿ ಸದಸ್ಯರಾದ ರಾಜೇಶ್ರೀ, ವಿನೋದ, ಕಲಾವತಿ, ನಿತಿನ್, ಆಶಾ, ಚಂದ್ರಾವತಿ, ಮೀನಾಕ್ಷಿ, ಪೂರ್ಣಿಮಾ ಉಪಸ್ಥಿತರಿದ್ದರು.