ದಾರಿತಪ್ಪಿ ನಡೆವವರ ತಡೆಯಲು ಪ್ರವಚನಗಳು ಪೂರಕ: ಮಿಠಾರೆ

| Published : Jul 26 2025, 12:00 AM IST

ದಾರಿತಪ್ಪಿ ನಡೆವವರ ತಡೆಯಲು ಪ್ರವಚನಗಳು ಪೂರಕ: ಮಿಠಾರೆ
Share this Article
  • FB
  • TW
  • Linkdin
  • Email

ಸಾರಾಂಶ

ಸಮಾಜದಲ್ಲಿ ಸಂಸ್ಕಾರವಿಲ್ಲದ ಸಂಸಾರಗಳು ದಾರಿತಪ್ಪಿ ಸಂಹಾರವಾಗುತ್ತಿದ್ದು, ಅದನ್ನು ತಡೆಯುವ ನಿಟ್ಟಿನಲ್ಲಿ ಪ್ರವಚನಗಳು ಪೂರಕ ಕೆಲಸ ಮಾಡುತ್ತವೆ ಎಂದು ಬಸವ ಕೇಂದ್ರದ ಜಿಲ್ಲಾಧ್ಯಕ್ಷ ಶರಣಪ್ಪ ಮಿಠಾರೆ ಅಭಿಪ್ರಾಯಪಟ್ಟರು

ಕನ್ನಡಪ್ರಭ ವಾರ್ತೆ ಔರಾದ್

ಸಮಾಜದಲ್ಲಿ ಸಂಸ್ಕಾರವಿಲ್ಲದ ಸಂಸಾರಗಳು ದಾರಿತಪ್ಪಿ ಸಂಹಾರವಾಗುತ್ತಿದ್ದು, ಅದನ್ನು ತಡೆಯುವ ನಿಟ್ಟಿನಲ್ಲಿ ಪ್ರವಚನಗಳು ಪೂರಕ ಕೆಲಸ ಮಾಡುತ್ತವೆ ಎಂದು ಬಸವ ಕೇಂದ್ರದ ಜಿಲ್ಲಾಧ್ಯಕ್ಷ ಶರಣಪ್ಪ ಮಿಠಾರೆ ಅಭಿಪ್ರಾಯಪಟ್ಟರು

ತಾಲೂಕಿನ ಎಕಲಾರ ಗ್ರಾಮದಲ್ಲಿ ಗುರುವಾರ ಶ್ರಾವಣ ಮಾಸದ ನಿಮಿತ್ತ ನಡೆಯುವ ಬಸವ ದರ್ಶನ ಪ್ರವಚನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಸ್ತುತ ಮಕ್ಕಳು, ಯುವಕರಿಗೆ ಸಂಸ್ಕಾರ ನೀಡಲು ಪಾಲಕರು ವಿಫಲರಾಗುತ್ತಿರುವುದು ವಿಪರ್ಯಾಸ ಎಂದರು.

ಪ್ರವಚನಕಾರ ಪ್ರಕಾಶ ದೇಶಮುಖ ಮಾತನಾಡಿ, ಬಸವಾದಿ ಶರಣರ ಚಿಂತನೆಗಳು ಕೇಳಿ ಫಾರ್ವರ್ಡ್‌ ಮಾಡದೇ ಫಾಲೋ ಮಾಡುವತ್ತ ನಾವೆಲ್ಲರೂ ಶ್ರಮಿಸಬೇಕಿದೆ ಎಂದರು. ಕಮಲನಗರ ರಾಷ್ಟ್ರೀಯ ಬಸವದಳ ಅಧ್ಯಕ್ಷ ನಾಗಯ್ಯಸ್ವಾಮಿ ಮಾತನಾಡಿದರು.

ಇದೇ ವೇಳೆ ಕನ್ನಡಪ್ರಭ ಹೊರತಂದಿರುವ ‘ಔರಾದ್ ದರ್ಶನ’ ವಿಶೇಷ ಪುರವಣಿ ಬಿಡುಗಡೆ ಮಾಡಲಾಯಿತು. ಗ್ರಾಪಂ ಅಧ್ಯಕ್ಷೆ ಸುನೀತಾ ಮಣಿಗೆಂಪೂರೆ, ಬಸವ ಕೇಂದ್ರದ ತಾಲೂಕು ಅಧ್ಯಕ್ಷ ಜಗನ್ನಾಥ ಮೂಲಗೆ, ಕಸಾಪ ಅಧ್ಯಕ್ಷ ಬಾಲಾಜಿ ಅಮರವಾಡಿ, ಲಿಂಗಾಯತ ಮಹಾಸಭಾ ಅಧ್ಯಕ್ಷ ಕಲ್ಲಪ್ಪ ದೇಶಮುಖ, ಭಾರತೀಯ ಬಸವ ಬಳಗ ಅಧ್ಯಕ್ಷ ಡಾ.ಧನರಾಜ ರಾಗಾ, ಪತ್ರಕರ್ತ ಮಲ್ಲಪ್ಪ ಗೌಡ, ಮಲ್ಲಿಕಾರ್ಜುನ ಹಿಪ್ಪಳಗಾವೆ, ಸತೀಶ ಮಜಗೆ, ಶಿವಾನಂದ ಬಿರಾದಾರ, ಚಂದ್ರಕಾಂತ ಹಿಪ್ಪಳಗಾವೆ, ಗಣಪತಿ ದೇಶಪಾಂಡೆ, ನಾಗೇಶ ಪಾಟೀಲ್ ಸೇರಿದಂತೆ ಇನ್ನಿತರರಿದ್ದರು.