ಆಲೂರು: ಮಾನವ ಸೇವೆಯೇ ಮಹಾದೇವನ ಸೇವೆಯಾಗಿದೆ. ಸಮಾಜದಲ್ಲಿ ಪ್ರತಿಯೊಬ್ಬರೂ ತಮ ಸಾಮರ್ಥ್ಯಕ್ಕೆ ಅನುಗುಣವಾಗಿ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಶ್ರೀಮದ್ ರಂಭಾಪುರೀ ವೀರಾಸಿಂಹಾಸನ ಶಾಖಾ ಶ್ರೀ ಸಂಸ್ಥಾನ ಹಿರೇಮಠ ಕಾರ್ಜುವಳ್ಳಿಯ ಪೀಠಾಧ್ಯಕ್ಷರಾದ ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಹಾಸನ ತಾಲೂಕಿನ ಅಗಿಲೆ ಗ್ರಾಮದಲ್ಲಿರುವ ತೇಜೋದಯ ನಿರಾಶ್ರಿತರ ಆಶ್ರಮದಲ್ಲಿ ಮನೆ ಮನೆಗೆ ಮನ ಮನಕೆ ರೇಣುಕ ಧರ್ಮ ಜಾಗೃತಿ ಹಾಗು ತತ್ವ ಪ್ರಚಾರ ಕಾರ್ಯಕ್ರಮ ಮೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸರಳ ಸಂಭ್ರಮಾಚರಣೆ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಪ್ರತಿಯೊಬ್ಬರು ಧರ್ಮ ಪ್ರಚಾರದ ಜೊತೆಗೆ ದೀನ ದಲಿತರ, ನಿರಾಶ್ರಿತರ ಹಾಗು ಅಗತ್ಯವಿರುವವರಿಗೆ ನೆರವಾಗುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.

ಈ ಸಂದರ್ಭದಲ್ಲಿ ಆಶ್ರಮದ ಸ್ಥಾಪಕ ಗಿರಿತೇಜ್‌, ನಿರಾಶ್ರಿತರು ಹಾಜರಿದ್ದರು, ಸಿದ್ದಾಂತ ಶಿಖಾಮಣಿಯ ತತ್ವ ಪ್ರಚಾರ ಸಮಿತಿಯ ನಿರ್ದೇಶಕರಾದ ಡಿ.ಎ ದೇವರಾಜ್ ಶಾಸ್ತ್ರೀಗಳು, ಹೊನ್ನಸ್ವಾಮಿ ಶೆಟ್ಟಿಹಳ್ಳಿ, ಮಂಜುನಾಥ ಶ್ರೀಧರ್, ವಿರೂಪಾಕ್ಷಯ್ಯ, ಹೆಚ್.ಸಿ ನೀಲಕಂಠಪ್ಪ, ಯಶ್ವಂತ್ ಕಾರ್ಜುವಳ್ಳಿ, ಜಶ್ವಂತ್ ಸೇರಿದಂತೆ ಮುಂತಾದವರು ಹಾಜರಿದ್ದರು.