ಸಾರಾಂಶ
ಸಾರ್ವಜನಿಕರಿಗೆ ಉಚಿತ ಆರೋಗ್ಯ ಸೇವೆ ನೀಡುವುದಕ್ಕಾಗಿ ಸರ್ಕಾರ ಆರೋಗ್ಯ ರಕ್ಷಾ ಸಮಿತಿ ರಚಿಸಿದ್ದು, ನಿರ್ದೇಶಿತಗೊಂಡ ಎಲ್ಲ ಸದಸ್ಯರು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು.
ಕನ್ನಡಪ್ರಭ ವಾರ್ತೆ ಕನಕಗಿರಿ
ಸಾರ್ವಜನಿಕರಿಗೆ ಉಚಿತ ಆರೋಗ್ಯ ಸೇವೆ ನೀಡುವುದಕ್ಕಾಗಿ ಸರ್ಕಾರ ಆರೋಗ್ಯ ರಕ್ಷಾ ಸಮಿತಿ ರಚಿಸಿದ್ದು, ನಿರ್ದೇಶಿತಗೊಂಡ ಎಲ್ಲ ಸದಸ್ಯರು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಜಿಪಂ ಮಾಜಿ ಸದಸ್ಯ ವೀರೇಶ ಸಮಗಂಡಿ ಹೇಳಿದರು.ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಆರೋಗ್ಯ ರಕ್ಷಾ ಸಮಿತಿಗೆ ನಾಮ ನಿರ್ದೇಶಿತ ಸದಸ್ಯರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿ, ೬೦ಕ್ಕೂ ಹೆಚ್ಚು ಗ್ರಾಮಗಳಿರುವ ನಮ್ಮ ತಾಲೂಕಿನ ಜನತೆಗೆ ಸರಿಯಾದ ಆರೋಗ್ಯ ಸೇವೆ ಸಿಗುತ್ತಿಲ್ಲ. ಕಾರ್ಮಿಕರು, ರೈತರು ಹಾಗೂ ಬಡವರು ಬೆಂಗಳೂರು, ಹುಬ್ಬಳ್ಳಿ, ಬಳ್ಳಾರಿ ನಗರಗಳಿಗೆ ಹೋಗಬೇಕಾದ ಪರಿಸ್ಥಿತಿ ಈಗಲೂ ಮುಂದುವರೆದಿದೆ. ರಕ್ಷಾ ಸಮಿತಿಗೆ ಆಯ್ಕೆಯಾದ ಸದಸ್ಯರು ಸಚಿವರೊಂದಿಗೆ ಚರ್ಚಿಸಿ ನೂರು ಬೆಡ್ ಆಸ್ಪತ್ರೆ ಮಂಜೂರು ಮಾಡಿಸುವುದಲ್ಲದೇ ಹೆರಿಗೆ, ಎಲುಬು, ಕೀಲು, ಗಂಟಲು, ಹೃದ್ರೋಗ ಸೇರಿದಂತೆ ನಾನಾ ರೋಗಗಳಿಗೆ ವೈದ್ಯರ ನೇಮಿಸುವ ಮೂಲಕ ಸಾರ್ವಜನಿಕರಿಗೆ ನೆರವಾಗುವ ಕೆಸಲ ಮಾಡಬೇಕೆಂದರು.
ಸದಸ್ಯರಾಗಿ ಆಯ್ಕೆಯಾದ ಹನುಮೇಶ ವಾಲೇಕಾರ, ಶರಣಪ್ಪ ಸೋಮಸಾಗರ, ವೆಂಕೋಬ ಭೋವಿ, ಮರಿ ಗುಂಡಪ್ಪ ಕನ್ನೇರಮಡು, ಅಮರೇಶ ತೆಗ್ಗಿನಮನಿ, ಅನುರಾಧ ಜಯರಾಮರೆಡ್ಡಿ ಬರ‍್ಗಿ, ಸಾದೀಕ ಪಾಷ, ರಾಜೇಶ ಬೆಲ್ಲಂಕೊಂಡಿ ಪದಗ್ರಹಣ ಮಾಡಿದರು.ಈ ವೇಳೆ ತಾಪಂ ಮಾಜಿ ಅಧ್ಯಕ್ಷ ಬಸವಂತಗೌಡ, ಪಪಂ ಸದಸ್ಯರಾದ ಶರಣೇಗೌಡ, ರಾಜಾಸಾಬ ನಂದಾಪೂರ, ಪ್ರಮುಖರಾದ ಹೊನ್ನೂರಸಾಬ ಉಪ್ಪು, ಶಾಂತಪ್ಪ ಬಸರಿಗಿಡದ, ಟಿ.ಜೆ. ರಾಮಚಂದ್ರ, ಆಡಳಿತ ವೈದ್ಯಾಧಿಕಾರಿ ಸತೀಶ ಜೀರಾಳ ಇತರರಿದ್ದರು.
ಭೂನ್ಯಾಯ ಮಂಡಳಿಗೆ ಆಯ್ಕೆ:ತಾಲೂಕು ಮಟ್ಟದ ಭೂನ್ಯಾಯ ಮಂಡಳಿಗೆ ಸರ್ಕಾರದಿಂದ ನಾಮ ನಿರ್ದೇಶಿತರಾದ ವಿರೂಪಾಕ್ಷಿ ಬೊಮ್ಮನಾಳ, ಚಿದಾನಂದಪ್ಪ ಭಜಂತ್ರಿ, ಬಸವರಾಜ ಬಂಕಾಪುರ, ಶರಣಬಸವರಾಜ ತಹಶೀಲ್ ಕಚೇರಿಯಲ್ಲಿ ತಹಸೀಲ್ದಾರ ವಿಶ್ವನಾಥ ಮುರುಡಿ ಸಮ್ಮುಖದಲ್ಲಿ ಅಧಿಕಾರ ಸ್ವೀಕರಿಸಿದರು.ಆರಾಧನಾ ಸಮಿತಿಗೆ ಆಯ್ಕೆ:
ಕನಕಗಿರಿ ವಿಧಾನಸಭಾ ಕ್ಷೇತ್ರದ ಆರಾಧನಾ ಸಮಿತಿಗೆ ಸತ್ಯಪ್ಪ ಭೋವಿ, ಮೌನೇಶ ವಿಶ್ವಕರ್ಮ ಹಿರೇಮಾದಿನಾಳ, ಮಲ್ಲಮ್ಮ ರಾಮನಗೌಡ ಆದಾಪುರ, ರಾಮಕೃಷ್ಣ ನಾಯಕ ಆಯ್ಕೆಯಾಗಿದ್ದಾರೆ ಎಂದು ತಹಸೀಲ್ದಾರ ಮುರುಡಿ ತಿಳಿಸಿದರು.