ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆಭಾರತ ಸ್ವಾತಂತ್ರ್ಯಗೊಳ್ಳಲು ಸಾಕಷ್ಟು ವೀರಸೇನಾನಿಗಳ ತ್ಯಾಗ, ಬಲಿದಾನವಿದೆ. ಅಂತಹ ಸ್ವಾತಂತ್ರ್ಯ ದಿನಕ್ಕೆ ಅರ್ಥ ಬರಬೇಕಾದರೆ ಯಾವಾಗ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕವಾಗಿ, ಆರ್ಥಿಕವಾಗಿ, ಸಾಂಸ್ಕೃತಿಕವಾಗಿ ಸಮಾನತೆ ಬರುತ್ತದೆ, ಆಗ ಸ್ವಾತಂತ್ರ್ಯ ದಿನಾಚರಣೆಗೆ ಅರ್ಥ ಬರುತ್ತದೆ ಎಂದು ಬಾಗಲಕೋಟೆ- ಚಿತ್ರದುರ್ಗ ಭೋವಿಪೀಠದ ಜಗದ್ಗುರು ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು ಹೇಳಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಭಾರತ ಸ್ವಾತಂತ್ರ್ಯಗೊಳ್ಳಲು ಸಾಕಷ್ಟು ವೀರಸೇನಾನಿಗಳ ತ್ಯಾಗ, ಬಲಿದಾನವಿದೆ. ಅಂತಹ ಸ್ವಾತಂತ್ರ್ಯ ದಿನಕ್ಕೆ ಅರ್ಥ ಬರಬೇಕಾದರೆ ಯಾವಾಗ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕವಾಗಿ, ಆರ್ಥಿಕವಾಗಿ, ಸಾಂಸ್ಕೃತಿಕವಾಗಿ ಸಮಾನತೆ ಬರುತ್ತದೆ, ಆಗ ಸ್ವಾತಂತ್ರ್ಯ ದಿನಾಚರಣೆಗೆ ಅರ್ಥ ಬರುತ್ತದೆ ಎಂದು ಬಾಗಲಕೋಟೆ- ಚಿತ್ರದುರ್ಗ ಭೋವಿಪೀಠದ ಜಗದ್ಗುರು ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು ಹೇಳಿದರು.ನವನಗರದ ಜೀವೇಶ್ವರ ಗುಡಿ ಹತ್ತಿರ ವೈಷ್ಣೋದೇವಿ ಕ್ರಿಯೇಷನ್‌ನಿಂದ ಆ.14ರ ಮಧ್ಯರಾತ್ರಿ 12 ಗಂಟೆಗೆ ಏರ್ಪಡಿಸಿದ್ದ 78ನೇ ಸ್ವಾತಂತ್ರ್ಯ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಮಾತನಾಡಿದರು. ಭಾರತ ಇನ್ನೂ ಬಡತನದಲ್ಲಿದೆ. ನಿರುದ್ಯೋಗ ಸಮಸ್ಯೆ ಎದುರಿಸುತ್ತಿದೆ. ಶ್ರೇಣಿಕೃತ ಸಮಾಜದ ವ್ಯವಸ್ಥೆಯನ್ನು ಅನುಭವಿಸುತ್ತಿದೆ. ಇವೆಲ್ಲವೂ ನಿರ್ನಾಮವಾಗಿ ಸರ್ವರಿಗೆ ಸಮಬಾಳು ಸರ್ವರಿಗೂ ಸಮಪಾಲು ಎಂಬ ಅರಿತು ಬದುಕನ್ನು ಕಟ್ಟಿಕೊಂಡಾಗ ಈ ದಿನಕ್ಕೆ ಮಹತ್ವ ಬರುತ್ತದೆ ಎಂದರು.ಕಮತಗಿ-ಕೋಟೆಕಲ್ ಹೊಳೆಹುಚ್ಚೇಶ್ವರ ಸಂಸ್ಥಾನಮಠದ ಹುಚ್ಚೇಶ್ವರ ಮಹಾಸ್ವಾಮೀಜಿ ಮಾತನಾಡಿ, ದೇಶದಲ್ಲಿ ನಾವು ನೆಮ್ಮದಿಯಿಂದ ಬದುಕುತ್ತಿದ್ದೇವೆ ಎಂದರೆ ಅದಕ್ಕೆ ಕಾರಣ ತ್ಯಾಗ, ಬಲಿದಾನ ಮಾಡಿದ ಸ್ವತಂತ್ರ್ಯ ಹೋರಾಟಗಾರರು. ಅವರನ್ನು ಸ್ಮರಿಸುವ ಕಾರ್ಯ ಅನುದಿನವೂ ಆಗಬೇಕಿದೆ ಎಂದು ಹೇಳಿದರು.ರಾಜ್ಯಸಭಾ ಸದಸ್ಯ ನಾರಾಯಣಸಾ ಬಾಂಡಗೆ ಧ್ವಜಾರೋಹಣ ಮಾಡಿ ಮಾತನಾಡಿ, ಭಾರತ ವಿವಿಧ ಕ್ಷೇತ್ರದಲ್ಲಿ ಅಗಾಧವಾದ ಸಾಧನೆ ಮಾಡುತ್ತ ದಾಪುಗಾಲಿಡುತ್ತಿದೆ. ಅದಕ್ಕೆ ಹೋರಾಟಗಾರರ ತ್ಯಾಗ, ಬಲಿದಾನ ಕಾರಣ. ವೀರ ಹೋರಾಟಗಾರರಾದ ಮಹಾತ್ಮ ಗಾಂಧಿ, ಸುಭಾಸಚಂದ್ರ ಬೋಸ್, ಭಗತ್ ಸಿಂಗ್, ವೀರ ಸಾವರ್ಕರ್ ಸೇರಿದಂತೆ ಹಲವರನ್ನು ಸ್ಮರಿಸಬೇಕು. ದೇಶದ ಅಭಿವೃದ್ಧಿಗೆ ಪಕ್ಷ, ಭೇದವನ್ನು ಮರೆತು ಎಲ್ಲರೂ ಒಗ್ಗಟ್ಟಾಗಿ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.ಹಿರಿಯ ಚಿತ್ರನಟರಾದ ಎ.ರವಿಶಂಕರ್ ಅಶ್ವಥ ಮಾತನಾಡಿ, ಕೇವಲ ಸ್ವಾತಂತ್ರ್ಯ ದಿನಾಚರಣೆ ವೇಳೆ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸದೇ ಅನುಕರಣೆ ಮಾಡದೇ ನಿತ್ಯವೂ ಮಾಡಬೇಕಿದೆ ಎಂದು ಸಲಹೆ ನೀಡಿದರು.ಚಿತ್ರ ನಿರ್ಮಾಪಕ ಘನಶ್ಯಾಂ ಬಾಂಡಗೆ ಪ್ರಸ್ತಾವಿಕ ಮಾತನಾಡಿ, ಪ್ರತಿ ವರ್ಷ ಸ್ವಾತಂತ್ರ್ಯ ದಿನವನ್ನು ಯೋಧರನ್ನು ಸ್ಮರಿಸುವ ದಿನವನ್ನಾಗಿ ಆಚರಿಸುತ್ತಿದ್ದೇವೆ. ಕಳೆದ 30 ವರ್ಷಗಳಿಂದ ಮಧ್ಯರಾತ್ರಿ ಧ್ವಜಾರೋಹಣ ನೆರವೇರಿಸಲಾಗುತ್ತಿದೆ ಎಂದು ಹೇಳಿದರು. ಹಿರಿಯ ನಟ ಜೆ.ಕೆ.ಶ್ರೀನಿವಾಸ್ ಮೂರ್ತಿ, ನಟ ಅನಿರುದ್ಧ ಜತಕರ ಮಾತನಾಡಿದರು. ಈ ವೇಳೆ ಶಿರೂರಿನ ಕನಕ ಬ್ರಹ್ಮ ವಿದ್ಯಾಶ್ರಮದ ಚಿನ್ಮಯಾನಂದ ಮಹಾಸ್ವಾಮಿಗಳು, ಸುರಗಿರಿಬೆಟ್ಟದ ಭುವನೇಶ್ವರಿ ದೇವಿಯ ಅರ್ಚಕ ಲಕ್ಷ್ಮಣ ಶರಣರು, ನಟರಾದ ಕಲ್ಲೇಶವರ್ಧನ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ, ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಟಿ.ಪಾಟೀಲ, ಚಿಕ್ಕ ಮಕ್ಕಳ ತಜ್ಞ ಡಾ.ದೇವರಾಜ ಪಾಟೀಲ, ಡಾ.ಎಂ.ಎಸ್.ಮದರಕರ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಬಳ್ಳಾರಿ, ವಿಶೇಷಚೇತನ ಅಂತಾರಾಷ್ಟ್ರೀಯ ಕ್ರಿಕೆಟರ್ ಶಿವಾನಂದ ಗುಂಜಾಳ ಸೇರಿ ವೈಷ್ಣೋದೇವಿ ಕ್ರಿಯೇಷನ್ ತಂಡದವರು ಇದ್ದರು. ಅನೇಕ ಕಲಾ ತಂಡಗಳು ದೇಶಭಕ್ತಿ ಗೀತೆ ಗಾಯನ, ನೃತ್ಯ ಮಾಡಿ ಮನರಂಜಿಸಿದರು.