ಪತ್ರಕರ್ತರ ಸೇವೆ ದೇಶ ಸೇವೆಗೆ ಸಮ

| Published : Nov 23 2024, 12:32 AM IST

ಸಾರಾಂಶ

ಶಿರಾ : ಸದಾ ಒತ್ತಡದಲ್ಲಿರುವ ಹಗಲು ಇರುಳು ಎನ್ನದೆ ಕೆಲಸ ಮಾಡುವ ಪತ್ರಕರ್ತರ ಸೇವೆ ದೇಶ ಸೇವೆ ಸಮನಾದುದು. ಎಂದು ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ಶಿರಾ ಸದಾ ಒತ್ತಡದಲ್ಲಿರುವ ಹಗಲು ಇರುಳು ಎನ್ನದೆ ಕೆಲಸ ಮಾಡುವ ಪತ್ರಕರ್ತರ ಸೇವೆ ದೇಶ ಸೇವೆ ಸಮನಾದುದು. ಎಂದು ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಹೇಳಿದರು.ನಗರದ ಅಂಬೇಡ್ಕರ್ ವೃತ್ತದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಮಟ್ಟದ ಕ್ರೀಡಾಕೂಟದ ಹಿನ್ನೆಲೆಯಲ್ಲಿ ಜಿಲ್ಲಾದ್ಯಾಂತ ಸಂಚರಿಸುತ್ತಿರುವ ಕ್ರೀಡಾಜ್ಯೋತಿ ವಾಹನವನ್ನು ಸ್ವಾಗತಿಸಿ ಮಾತನಾಡಿದರು. ಕ್ರೀಡೆಗೆ ಜಾತಿ, ಮತ ಬೇದವಿಲ್ಲ ಎಲ್ಲರೂ ಕೂಡ ಭಾಗವಹಿಸುವ ಕ್ರೀಡಾಕೂಟ ಪತ್ರಕರ್ತರಿಗೆ ಕೊಡುವ ಗೌರವಸೂಚಕವಾಗಿದೆ . ಪತ್ರಕರ್ತರಿಗೆ ಸರ್ಕಾರದಿಂದ ಆರೋಗ್ಯ ಸೇರಿದಂತೆ ಇತರ ಸೌಲಭ್ಯಗಳಿಗಾಗಿ ಮುಂಬರುವ ಬೆಳಗಾಂ ಅಧಿವೇಶನದಲ್ಲಿ ಚರ್ಚಿಸುತ್ತೇನೆ. ರಾಜ್ಯಮಟ್ಟದ ಕ್ರೀಡಾಕೂಟ ಯಶಸ್ವಿಯಾಗಲಿ. ಎಲ್ಲರೂ ಭಾಗವಹಿಸೋಣ ಎಂದರು. ತಹಶೀಲ್ದಾರ್ ಸಚ್ಚಿದಾನಂದ ಕುಚನೂರು ಅವರು ಮಾತನಾಡಿ ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಆರೋಗ್ಯ ಉತ್ತಮವಾಗಿರುತ್ತದೆ. ಹಾಗೂ ಒತ್ತಡ ನಿವಾರಣೆಯಾಗುತ್ತದೆ. ಈ ನಿಟ್ಟಿನಲ್ಲಿ ಪತ್ರಕರ್ತರಿಗೆ ಕ್ರೀಡಾಕೂಟ ಏರ್ಪಡಿಸಿರುವುದು ಅವಶ್ಯಕವಾಗಿದೆ ಎಂದರು.

ತಾಲೂಕು ಕಸಾಪ ಅಧ್ಯಕ್ಷ ಬಿ.ಪಿ.ಪಾಂಡುರಂಗಯ್ಯ ಮಾತನಾಡಿ ಪತ್ರಕರ್ತರು ಸರಕಾರದ, ಜನಪ್ರತಿನಿಧಿಗಳು ದಾರಿತಪ್ಪಿದಾಗ ಎಚ್ಚರಿಸುವ ಕೆಲಸ ಮಾಡುತ್ತಾರೆ. ಪತ್ರಕರ್ತರಿಗೆ ತುಮಕೂರಿನಲ್ಲಿ ನ. 24 ರಂದು ಏರ್ಪಡಿಸಿರುವ ರಾಜ್ಯಮಟ್ಟದ ಕ್ರೀಡಕೂಟ ಯಶಸ್ವಿಯಾಗಲಿ. ಶಿರಾ ತಾಲೂಕಿನ ಪತ್ರಕರ್ತರು ಹೆಚ್ಚು ಪ್ರಶಸ್ತಿ ಗೆಲ್ಲಲಿ ಎಂದು ಆಶಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಇ.ರಘುರಾಮ್, ಮಾಜಿ ಪ್ರಧಾನ ಕಾರ್ಯದರ್ಶಿ ರಂಗರಾಜು.ಡಿ. ಪತ್ರಿಕಾ ಛಾಯಾಗ್ರಹಕ ಸುರೇಶ್, ಜಿಲ್ಲಾ ಕಾರ್ಯದರ್ಶಿ ದಶರಥ, ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎನ್.ಜಯಪಾಲ್, ಉಪಾಧ್ಯಕ್ಷ ಫಕೃದ್ಧೀನ್ ಬಾಬು, ಪ್ರಧಾನ ಕಾರ್ಯದರ್ಶಿ ದೇವರಾಜು.ಎನ್, ಖಜಾಂಚಿ ಎಸ್.ಕೆ.ಕುಮಾರ್, ಕನಕ ಬ್ಯಾಂಕ್ ಅಧ್ಯಕ್ಷ ಎಸ್.ಎಲ್.ರಂಗನಾಥ್, ನಿರ್ದೇಶಕ ಕಡೇಮನೆ ಎಸ್.ರವಿಕುಮಾರ್, ಪೌರಾಯುಕ್ತ ರುದ್ರೇಶ್, ಸರಕಾರಿ ನೌಕರರ ಸಂಘದ ಅಧ್ಯಕ್ಷ ನಾಗರಾಜು, ಬಿಆರ್‌ಡಿ ರಂಗಪ್ಪ, ನಗರಸಭಾ ಸದಸ್ಯರಾದ ಮಹೇಶ್, ದೃವಕುಮಾರ್, ಪತ್ರಕರ್ತರಾದ ಬರಗೂರು ವಿರೂಪಾಕ್ಷ, ಶಿವಕುಮಾರ್, ಅನಂತರಾಮು, ವಿಜಯಕುಮಾರ್, ಲಕ್ಷ್ಮೀಕಾಂತ್, ಬಾಲಕೃಷ್ಣ, ವಲಿಸಾಬ್, ಮುಬಾರಕ್ ಪಾಷ, ಸುಫಿಯಾನ್, ಓಂಕಾರಪ್ಪ, ಮಹೇಶ್, ಮಧುಸೂಧನ್, ವೀರಭದ್ರಸ್ವಾಮಿ, ಹನುಮಂತರಾಜು, ಜಿ.ಆರ್.ನಟರಾಜು, ಟಿ.ಎಲ್.ನಟರಾಜು, ಮಂಜುನಾಥ್, ವಿನೋದ್‌ಕುಮಾರ್ ಸೇರಿದಂತೆ ಹಲವರು ಹಾಜರಿದ್ದರು.