ಸೇವಾ ಮನೋಭಾವ ಲಯನ್ಸ್ ದ್ಯೇಯ: ನಾರಾಯಣಸ್ವಾಮಿ

| Published : Jul 17 2025, 12:37 AM IST

ಸಾರಾಂಶ

220 ದೇಶಗಳಲ್ಲಿ ಲಯನ್ಸ್ ಕ್ಲಬ್ ಇದೆ. 10 ಬಿಲಿಯನ್ ಸದಸ್ಯರು ಇದ್ದಾರೆ. ಕೊಳ್ಳೇಗಾಲದ ಲಯನ್ಸ್ ಕ್ಲಬ್ ಪ್ರತಿಷ್ಠಿತ ಕ್ಲಬ್ ಅಗಿ ಹೊರಹೊಮ್ಮಿದೆ.

ಕೊಳ್ಳೇಗಾಲ ಲಯನ್ಸ್ ಕ್ಲಬ್‌ನ 49ನೇ ಆಡಳಿತ ಮಂಡಳಿ ಪದಗ್ರಹಣ

ಕನ್ನಡಪ್ರಭವಾರ್ತೆ ಕೊಳ್ಳೇಗಾಲ

ಸೇವಾ ಮನೋಭಾವ ಲಯನ್ಸ್ ಸಂಸ್ಥೆ ಪ್ರಮುಖ ದ್ಯೇಯವಾಗಿದೆ ಎಂದು ಸಂಸ್ಥೆ ಅಸಿಸ್ಟೆಂಟ್ ಗವರ್ನರ್ ನಾರಾಯಣಸ್ವಾಮಿ ಹೇಳಿದರು.

ಕೊಳ್ಳೇಗಾಲ ಲಯನ್ಸ್ ಕ್ಲಬ್‌ನ 49ನೇ ಆಡಳಿತ ಮಂಡಳಿ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿ, ನೂತನ ಪದಾಧಿಕಾರಿಗಳು ಜನರ ಆಶೋತ್ತರಗಳಿಗೆ ಸ್ಪಂದಿಸುವ ಹೆಚ್ಚು ಹೆಚ್ಚು ಸೇವಾ ಮನೋಭಾವದ ಕಾರ್ಯಕ್ರಮ ರೂಪಿಸಿ ಸಂಸ್ಥೆ ದ್ಯೇಯ, ಉದ್ದೇಶ ಈಡೇರಿಸುವಲ್ಲಿ ಪಣತೊಡಬೇಕು. ಲಯನ್ಸ್‌ ಸಂಸ್ಥೆ ಸಮಾಜ ಸೇವೆಗೆ ಮುಡಿಪಾಗಿರುವುದು ಹೆಮ್ಮೆಯ ಸಂಗತಿ ಎಂದರು.

ಈ ವೇಳೆ ಕ್ಲಬ್ ಮಲ್ಟಿಪಲ್ ಛೇರ್ಮನ್ ಡಾ.ಎನ್.ಕೃಷ್ಣೇಗೌಡ ಮಾತನಾಡಿ, 220 ದೇಶಗಳಲ್ಲಿ ಲಯನ್ಸ್ ಕ್ಲಬ್ ಇದೆ. 10 ಬಿಲಿಯನ್ ಸದಸ್ಯರು ಇದ್ದಾರೆ. ಕೊಳ್ಳೇಗಾಲದ ಲಯನ್ಸ್ ಕ್ಲಬ್ ಪ್ರತಿಷ್ಠಿತ ಕ್ಲಬ್ ಅಗಿ ಹೊರಹೊಮ್ಮಿದೆ ಎಂದರು. ಈ ವೇಳೆ 2025-26ನೇ ಸಾಲಿನ ನೂತನ ಅಧ್ಯಕ್ಷರಾಗಿ ಪಿ. ಮಾದೇಶ್, ಕಾರ್ಯದರ್ಶಿಯಾಗಿ ವಿರೂಪಾಕ್ಷ, ಖಜಾಂಚಿಯಾಗಿ ಮಹದೇವಸ್ವಾಮಿ ಅವರಿಗೆ ನಾರಾಯಣಸ್ವಾಮಿ ಅಧಿಕಾರ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಬಡ ವಿದ್ಯಾರ್ಥಿಗಳಿಗೆ ನೋಟ್‌ ಪುಸ್ತಕ ವಿತರಿಸಲಾಯಿತು. ಎಸ್‌ಎಸ್‌ಎಲ್‌ಸಿಯಲ್ಲಿ

ಸಾಧಕ ಮಕ್ಕಳಿಗೆ ಗೌರವಿಸಲಾಯಿತು. ಮಧುಮೇಹಿ ರೋಗಿಗಳಿಗೆ ನೆರವು ನೀಡಲಾಯಿತು.

ವಲಯ ಅಧ್ಯಕ್ಷ ಗಾಯತ್ರಿ ಜಗದೀಶ್, ನಿಕಟಪೂರ್ವ ಅಧ್ಯಕ್ಷ ಚಿಕ್ಕಬಸವಯ್ಯ, ಲಯನ್ಸ್ ಕ್ಲಬ್ ಚನ್ನಮಾದೇಗೌಡ, ಜಿ.ಎಸ್.ಎಂ. ಪ್ರಸಾದ್, ನಾಗರಾಜು ಕೊಂಗರಹಳ್ಳಿ, ಲಯನ್ಸ್ ಸ್ಕೂಲ್ ಕಾರ್ಯದರ್ಶಿ ವೆಂಕಟೇಶ್ ಇನ್ನಿತರಿದ್ದರು.

---------------

16ಕೆಜಿಎಲ್60

ಕೊಳ್ಳೇಗಾಲದಲ್ಲಿ ಅಯೋಜಿಸಿದ್ದ ಲಯನ್ಸ್ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಅಸಿಸ್ಟೆಂಟ್ ಗವರ್ನರ್ ನಾರಾಯಣಸ್ವಾಮಿ ಅವರು ಮಾದೇಶ್ ನೇತೃತ್ವದ ತಂಡಕ್ಕೆ ಪದಗ್ರಹಣ ನೆರವೇರಿಸಿದ ಬಳಿಕ ಗೌರವಿಸಿದರು. ಚನ್ನಮಾದೇಗೌಡ, ನಾಗರಾಜು ಇದ್ದರು.