ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ದೇಶ ಸೇವೆಯೇ ಅತ್ಯುನ್ನತ ಸೇವೆ ಎಂದು ಭಾರತೀಯ ವಾಯುಸೇನೆ ನಿವೃತ್ತರಾದ ಡಿ. ತಿಪ್ಪಣ್ಣ ಹೇಳಿದರು.4 ಕೆಎಆರ್‌ಎಐಆರ್‌ಎಸ್‌ಕ್ಯೂಎನ್‌ಎನ್‌ಸಿಸಿ ಹಾಗೂ ಮಹಾಜನ ಪ್ರಥಮ ದರ್ಜೆ ಕಾಲೇಜಿನ ಸಹಯೋಗದೊಂದಿಗೆ 93ನೇ ಭಾರತೀಯ ವಾಯು ಸೇನಾ ದಿನಾಚರಣೆಯಲ್ಲಿ ಎನ್‌ಸಿಸಿಕೆಡೆಟ್‌ಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.
ತಮ್ಮ ಶಾಲಾ ಹಾಗೂ ಕಾಲೇಜು ಅವಧಿಯಲ್ಲಿ ಎನ್‌ಸಿಸಿಯಲ್ಲಿ ತರಬೇತಿ ಪಡೆದ್ದರಿಂದ ಸೇನೆಗೆ ಸೇರುವಂತಾಯಿತು. 1962ರಲ್ಲಿ ಭಾರತೀಯ ವಾಯು ಸೇನೆಗೆ ಸೇರಿದತಕ್ಷಣ ಕೆಲವೇ ತಿಂಗಳುಗಳ ತರಬೇತಿ ನೀಡಿ ತಮ್ಮನ್ನು ಇಂಡೋ-ಚೈನಾ ಯುದ್ಧಕ್ಕೆ ಸನ್ನದ್ದರಾಗುವಂತೆ ಮಾಡಿದ ಕ್ಷಣಗಳನ್ನು ನೆನಪಿಸಿಕೊಂಡರು. ಭಾರತೀಯ ಸೇನೆಯಿಂದ ದೊರೆಯುವ ಎಲ್ಲ ಸೌಲಭ್ಯಗಳನ್ನು ವಿವರಿಸುತ್ತಾ, ಎನ್‌ಸಿಸಿ ಕೆಡೆಟ್‌ಗಳು ಸೇನೆಗೆ ಸೇರಿ ಈ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಹಾಗೂ ದೇಶ ಸೇವೆಯೇ ಅತ್ಯುನ್ನತ ಸೇವೆ ಎಂದು ಕರೆ ನೀಡಿದರು.ನಿವೃತ್ತಿಯ ನಂತರ ತಾವು ಕಟ್ಟಿದ ಮೂಡಲಪಾಯ ಯಕ್ಷಗಾನ ಕಲೆಯ ಯಕ್ಷರಂಗ ಎಂಬ ಮೈಸೂರು ತಂಡದ ಬಗ್ಗೆ ತಿಳಿಸಿಕೊಟ್ಟರು.
ಮೈಸೂರಿನ 4 ಕೆಎಆರ್‌ಎಐಆರ್‌ಎಸ್‌ಕ್ಯೂಎನ್‌ಎನ್‌ಸಿಸಿ ಘಟಕದ ಮಾಸ್ಟರ್ ವಾರೆಂಟ್ ಆಫೀಸರ್ ಮಾನಂಜಯ್ ಅವರು ಮಾತನಾಡಿ, ತಮ್ಮ ಹಿಂದಿನ ಎನ್‌ಸಿಸಿ ಅವಧಿಯಲ್ಲಿ ಭಾರತೀಯ ವಾಯು ಸೇನೆಯ ಮೊದಲ ಮಹಿಳಾ ರಫೇಲ್ ಏರ್ ಕ್ರಾಫ್ಟ್‌ನ ಮೊದಲಾ ಮಹಿಳಾ ಪೈಲೇಟ್ ಆಗಿರುವ ಶಿವಾಂಗಿ ಸಿಂಗ್ ಅವರಿಗೆ ಎನ್‌ಸಿಸಿ ತರಬೇತಿ ನೀಡಿದ್ದನ್ನು ನೆನಪಿಸಿಕೊಂಡು ಶಿವಾಂಗಿ ಸಿಂಗ್ ಅವರ ರೀತಿ ಪ್ರತಿಯೊಬ್ಬ ಎನ್‌ಸಿಸಿ ಕೆಡೆಟ್‌ಗಳು ಶ್ರದ್ದೆಯಿಂದ ತರಬೇತಿ ಪಡೆದು ಯಾವುದೇ ಕ್ಷೇತ್ರದಲ್ಲಾದರೂ ದೇಶ ಸೇವೆ ಸಲ್ಲಿಸಬೇಕು ಎಂದರು.ಭಾರತೀಯ ವಾಯು ಸೇನೆಯ ಸುಮಾರು 30 ನಿವೃತ್ತ ಅಧಿಕಾರಿಗಳಿಗೆ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಆರ್. ಜಯಕುಮಾರಿ ಅವರು ಎನ್‌ಸಿಸಿ ಕೆಡೆಟ್ ಗಳಿಂದ ಅಭಿನಂದನಾ ಘೋಷಣೆ ಕೂಗಿಸಿದರು.
ನಂತರ ಎನ್‌ಸಿಸಿ ಕೆಡೆಟ್ ಗಳು ದೇಶ ಸೇವೆಗೆ ಆಧ್ಯತೆ ನೀಡಬೇಕೆಂದು ಕಿವಿಮಾತು ಹೇಳಿದರು.ಭಾರತೀಯ ವಾಯುಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಎಸ್. ವಾಸುದೇವನ್, ಶ್ರೀನಿವಾಸ್ ಹಾಗೂ ನಾಗೇಶ್ ಅವರು ಕೆಡೆಟ್ ಗಳಿಗೆ ಹಿತವಚನ ಹೇಳಿದರು.
ಕಳೆದ ವರ್ಷ ಆರ್‌ಡಿಸಿ ಮತ್ತು ಎಐವಿಎಸ್‌ಸಿ ಕ್ಯಾಂಪ್‌ಗಳಲ್ಲಿ ಸಾಧನೆಗೈದ 4 ಕೆಎಆರ್‌ಎಐಆರ್‌ಎಸ್‌ಕ್ಯೂಎನ್‌ಎನ್‌ಸಿಸಿ ಘಟಕದ ಕೆಡೆಟ್‌ಗಳನ್ನು ಸನ್ಮಾನಿಸಲಾಯಿತು.ಭಾರತೀಯ ವಾಯು ಸೇನೆಯ ನಿವೃತ್ತ ಅಧಿಕಾರಿಗಳು, ಪ್ಲೇಯಿಂಗ್ ಆಫೀಸರ್ ಡಾ.ಪಿ.ಜಿ. ಪುಷ್ಪರಾಣಿ, ಪ್ಲೇಯಿಂಗ್ ಆಫೀಸರ್ ಡಾ.ಜಿ. ಶ್ರುತಿ, ಸಾರ್ಜೆಂಟ್ ಸುಮನ್ ಚೌಹ್ಹಾನ್, ಸಾರ್ಜೆಂಟ್ ಎಸ್.ಎಸ್. ರಾಥೋಡ್, ಕಾರ್ಪೋರಲ್ ಸುರ್ಜಾರಾಮ್, ಜಿಸಿಐ ಕೆ.ಪಿ. ದಿವ್ಯಾ, 4 ಕೆಎಆರ್‌ಎಐಆರ್‌ಎಸ್‌ಕ್ಯೂಎನ್‌ಎನ್‌ಸಿಸಿ ಘಟಕದ 150 ಕೆಡೆಟ್‌ಗಳು, 25 ಎಕ್ಸ್ ಕೆಡೆಟ್‌ಗಳು ಇದ್ದರು.