ಕನ್ನಡಪ್ರಭ ವಾರ್ತೆ ಹಲಗೂರು

ವೃದ್ಧಾಶ್ರಮದ ವೃದ್ಧರು, ವಿಕಲಚೇತನರು ಹಾಗೂ ಬಡವರ ಆರೋಗ್ಯ, ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ, ಪರಿಸರ ಸಂರಕ್ಷಣೆ ಮಾಡುವ ಗುರಿ ಹೊಂದಿದ್ದೇನೆ. ನಾನು ಮತ್ತು ನಮ್ಮ ತಂಡದವರು ಸಮಾಜ ಸೇವೆಯನ್ನೇ ಮೂಲ ಉದ್ದೇಶವನ್ನಾಗಿಸಿಕೊಂಡು ಸಂಸ್ಥೆ ಪ್ರಾರಂಭಿಸಿರುವುದಾಗಿ ಅಲಯನ್ಸ್ ಕ್ಲಬ್ಬ್ ನೂತನ ಅಧ್ಯಕ್ಷ ಸುರೇಂದ್ರ ಅಲಿಯಾಸ್ ಸಚಿನ್ ತಿಳಿಸಿದರು.

ಮಳವಳ್ಳಿ ರಸ್ತೆಯ ಎಚ್.ಎಂ.ಆನಂದ್ ಕುಮಾರ್ ಅವರ ತೋಟದ ಮನೆ ಆವರಣದಲ್ಲಿ ಅಸೋಸಿಯನ್ ಆಫ್ ಅಲಯನ್ಸ್ ಕ್ಲಬ್ ಇಂಟರ್ ನ್ಯಾಷನಲ್ ಜಿಲ್ಲೆ 268 (ಎಸ್) ಅಲಯನ್ಸ್ ಕ್ಲಬ್ ಆಫ್ ಹಲಗೂರು ಮಿತ್ರ ಕೂಟದಿಂದ ಕೆ.ಸುರೇಂದ್ರರ ನೇತೃತ್ವದಲ್ಲಿ ನೂತನ ಕ್ಲಬ್ ಪ್ರಾರಂಭೋತ್ಸವ ಹಾಗೂ ಪ್ರತಿಜ್ಞಾವಿಧಿ ಸಮಾರಂಭದಲ್ಲಿ ಜಿಲ್ಲಾ ರಾಜ್ಯಪಾಲ ಕೆ.ಶಶಿಧರ್ ಈಚಗೆರೆ ಮಾರ್ಗದರ್ಶನದಲ್ಲಿ ಪ್ರತಿಜ್ಞಾ ಬೋಧನೆ ಸ್ವೀಕರಿಸಿ ಮಾತನಾಡಿದರು.

ಹಲಗೂರಿನಲ್ಲಿ ಸಮಾಜ ಸೇವೆ ಮಾಡುವ ಉದ್ದೇಶದಿಂದ ನಮ್ಮ ಈ ಸಂಸ್ಥೆಯನ್ನು ಪ್ರಾರಂಭಿಸಲಾಗಿದೆ. ನನ್ನನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದು ನಿಮಗೆಲ್ಲರಿಗೂ ನಾನು ಆಭಾರಿಯಾಗಿದ್ದೇನೆ. ಪ್ರಥಮ ದಿನದಲ್ಲೇ 30ಕ್ಕೂ ಹೆಚ್ಚು ಸದಸ್ಯರು ನಮ್ಮ ಸಂಸ್ಥೆಗೆ ಸೇರ್ಪಡೆ ಆಗಿರುವುದರಿಂದ ನನಗೆ ಇಂದು ಶುಭದಿನ ಎಂದುಕೊಳ್ಳುತ್ತೇನೆ ಎಂದರು.

ನನಗೆ ಸಿಕ್ಕ ಈ ಸ್ಥಾನದಿಂದ ಸಮಾಜ ಸೇವೆ ಮಾಡುತ್ತೇನೆ. ಗುರಿ ಇಟ್ಟುಕೊಂಡು ಕರ್ತವ್ಯ ನಿರ್ವಹಿಸುತ್ತೇನೆ. ಇದಕ್ಕೆ ಎಲ್ಲಾ ನಮ್ಮ ಸದಸ್ಯರು ಸಹಕರಿಸಬೇಕು ಎಂದರು.


ನೂತನ ಅಧ್ಯಕ್ಷರಾದ ಕೆ.ಸುರೇಂದ್ರ, ಉಪಾಧ್ಯಕ್ಷ ಜಿ.ಕೆ.ನಾಗೇಶ್, ಕಾರ್ಯದರ್ಶಿ ಜೆ.ದೇವರಾಜು, ಖಜಾಂಜಿ ಬಿ.ಸಿ.ಬಸವರಾಜು, ಪಿಆರ್‌ಒ ಜಿ.ಎಸ್. ಕೃಷ್ಣ ಸೇರಿದಂತೆ ನಿರ್ದೇಶಕರಾದ ಎಚ್.ಆರ್.ಪದ್ಮನಾಭ, ಕೆ.ಶಿವರಾಜು, ಎನ್.ಕೆ.ಕುಮಾರ್, ಎ.ಎಸ್.ದೇವರಾಜು, ಎಚ್.ಶಿವರಾಮು, ಎಚ್.ಎಸ್.ಸಂತೋಷ್, ಎನ್.ನಂಜುಂಡಸ್ವಾಮಿ, ಕೆ.ಕೃಷ್ಣೇಗೌಡ, ಕೃಷ್ಣೇಗೌಡ ಮತ್ತು ಸದಸ್ಯರು ಪ್ರತಿಜ್ಞಾವಿಧಿಯನ್ನು ಸ್ವೀಕರಿಸಿದರು.

ಕಾರ್ಯಕ್ರಮವನ್ನು ಪಿಎಸ್‌ಎಲ್‌ಎಫ್ ಅಂತಾರಾಷ್ಟ್ರೀಯ ಕಾರ್ಯದರ್ಶಿ ಡಾ.ನಾಗರಾಜ್ ವಿ.ಬೈರಿ ಉದ್ಘಾಟಿಸಿ ಮಾತನಾಡಿ, ನಿಗದಿತ ಗುರಿ ಇಟ್ಟು ಕರ್ತವ್ಯ ನಿರ್ವಹಿಸಿದರೆ ಸಾಧನೆ ಸಾಧ್ಯ ಎಂದರು.

ಇದೇ ವೇಳೆ ಗಣ್ಯರನ್ನು ಸನ್ಮಾನಿಸಲಾಯಿತು. ಗ್ರಾಪಂನಲ್ಲಿ ಡಿ ಗ್ರೂಪ್ ನೌಕರನಾಗಿ ಹಲವು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ರಾಜು ಅವರನ್ನು ಅಭಿನಂದಿಸಲಾಯಿತು.

ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು ಶುಭ ಹಾರೈಸಿದರು. ಹಲಗೂರು ವಿದ್ಯಾಸಂಸ್ಥೆ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಜಾಮೆಟ್ರಿ ಬಾಕ್ಸ್ ಗಳನ್ನು ನೀಡುವಂತೆ ಸಂಸ್ಥೆ ಅಧ್ಯಕ್ಷ ಎಚ್.ಎಂ.ಆನಂದ್ ಕುಮಾರ್ ಮತ್ತು ಮುಖ್ಯ ಶಿಕ್ಷಕರಿಗೆ ನೀಡಲಾಯಿತು. ಈ ವೇಳೆ ಎ.ಎಸ್.ದೇವರಾಜ್, ಟಿ.ವಿ.ಶಿಲ್ಪಾ ಸುರೇಂದ್ರ, ಎಚ್.ಆರ್.ಪದ್ಮನಾಭ, ಎನ್.ಕೆ.ಕುಮಾರ್, ಕೆ.ಶಿವರಾಜು ಸೇರಿದಂತೆ ಇತರರು ಇದ್ದರು.