ಪುಟ...2ಶಾಲಾ ಹಂತದಲ್ಲೇ ಗುರಿ ನಿಶ್ಚಯಿಸಿಕೊಳ್ಳಿ: ಶಿವಾನಂದ ಶ್ರೀ

| Published : Feb 27 2024, 01:31 AM IST

ಪುಟ...2ಶಾಲಾ ಹಂತದಲ್ಲೇ ಗುರಿ ನಿಶ್ಚಯಿಸಿಕೊಳ್ಳಿ: ಶಿವಾನಂದ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಆಲಮೇಲ: ವಿದ್ಯಾರ್ಥಿಗಳು ಶಾಲಾ ಹಂತದಲ್ಲಿಯೇ ತಮ್ಮ ಜೀವನದ ಮುಂದಿನ ಗುರಿಯನ್ನು ನಿಶ್ಚಯಿಸಿದರೆ ಭವಿಷ್ಯ ಉಜ್ವಲವಾಗುವದು ಎಂದು ಕುಮಸಗಿ ಕಲ್ಲಾಲಿಂಗೇಶ್ವರ ಮಠದ ಶಿವಾನಂದ ಶಿವಾಚಾರ್ಯರು ಹೇಳಿದರು. ತಾಲೂಕಿನ ಕುಮಸಗಿ ಗ್ರಾಮದ ಕಲ್ಲಾಲಿಂಗೇಶ್ವರ ಶಿಕ್ಷಣ ಸಂಸ್ಥೆಯ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮಾತನಾಡುತ್ತಿದ್ದರು. ಈಗಿನಿಂದಲೇ ಗುರಿ ಇಟ್ಟುಕೊಂಡು ಸತತ ಪರಿಶ್ರಮ ಪಟ್ಟರೆ ಯಶಸ್ಸು ಖಂಡಿತ ದೊರೆಯುತ್ತದೆ ಎಂದರು.

ಕನ್ನಡಪ್ರಭ ವಾರ್ತೆ ಆಲಮೇಲ: ವಿದ್ಯಾರ್ಥಿಗಳು ಶಾಲಾ ಹಂತದಲ್ಲಿಯೇ ತಮ್ಮ ಜೀವನದ ಮುಂದಿನ ಗುರಿಯನ್ನು ನಿಶ್ಚಯಿಸಿದರೆ ಭವಿಷ್ಯ ಉಜ್ವಲವಾಗುವದು ಎಂದು ಕುಮಸಗಿ ಕಲ್ಲಾಲಿಂಗೇಶ್ವರ ಮಠದ ಶಿವಾನಂದ ಶಿವಾಚಾರ್ಯರು ಹೇಳಿದರು. ತಾಲೂಕಿನ ಕುಮಸಗಿ ಗ್ರಾಮದ ಕಲ್ಲಾಲಿಂಗೇಶ್ವರ ಶಿಕ್ಷಣ ಸಂಸ್ಥೆಯ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮಾತನಾಡುತ್ತಿದ್ದರು. ಈಗಿನಿಂದಲೇ ಗುರಿ ಇಟ್ಟುಕೊಂಡು ಸತತ ಪರಿಶ್ರಮ ಪಟ್ಟರೆ ಯಶಸ್ಸು ಖಂಡಿತ ದೊರೆಯುತ್ತದೆ ಎಂದರು. ಅತಿಥಿ ಉಪನ್ಯಾಸಕ ಕಡಣಿ ಪಿ ಬಿ, ಕಾಲೇಜು ಪ್ರಾಚಾರ್ಯ ರಮೇಶ ಗಂಗನಳ್ಳಿ ಮಾತನಾಡಿ ಸತತ ಪರಿಶ್ರಮವೇ ಸಾಧನೆಗೆ ಮೂಲ ಸಾಧನ. ಸಾಧನೆಯ ಶಿಖರ ತಲುಪಲು ಕಠಿಣ ಪರಿಶ್ರಮ ಅಗತ್ಯ ಎಂದು ಹೇಳಿದರು.

ಮಲಘಾಣದ ಜಡೇಶಾಂತಲಿಂಗ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು, ದೇವರನಾವದಗಿ ಸಿಆರ್ಪಿ ಜೆ.ಬಿ.ಪಾಟೀಲ, ದೇವಣಗಾಂವ ಪ್ರಗತಿಪರ ಶಿಕ್ಷಣ ಸಂಸ್ಥೆಯ ಪ್ರಾಚಾರ್ಯ ಸುರೇಶ ಗಂಗನಳ್ಳಿ, ರಾಜುಗೌಡ ಪಾಟೀಲ, ಗರೀಬಸಾಬ ನದಾಫ, ಲಕ್ಷ್ಮೀಕಾಂತ ಚಾವರ, ವಿನೋದ ತಳವಾರ, ಪರಶುರಾಮ ಕುಮಸಿ, ಅಪ್ಪಾರಾಯ ಬಟವಾಲ, ಅನೀಲ ಸಿಂದಗಿ, ಡಾ.ಶ್ರೀಶೈಲ ಕೋಲ್ಹಾರ, ಡಾ.ಚಂದ್ರಕಾಂತ ದೇಸಾಯಿ, ಬಸವರಾಜ ಹೊಸಗೌಡರ, ಉಸ್ಮಾನ ಬೇಪಾರಿ, ಡಾ.ಭೀಮರಾಯ ತಳವಾರ, ಸಂಗಣ್ಣ ಧನಶೆಟ್ಟಿ, ರುದ್ರಗೌಡ ಬಿರಾದಾರ, ಕುಪ್ಪಣ್ಣಗೌಡ ಬಿರಾದಾರ, ಭೀಮಶ್ಯಾಗೌಡ ಬಿರಾದಾರ, ನಾಡಗೌಡ ಪಾಟೀಲ, ಈರಪ್ಪ ತಳವಾರ, ಹಣಮಂತ ಮಾರದ ಇದ್ದರು. ಭೀಮು ಸಜ್ಜನ ಸ್ವಾಗತಿಸಿದರು, ಬಸು ಮಳಲಿ ವರದಿ ವಾಚಿಸಿದರು, ರಾಜು ನಾವಿ ನಿರೂಪಿಸಿದರು, ವಿಶ್ವನಾಥ ಸಿಂಪಿ ವಂದಿಸಿದರು.