ಸಣ್ಣ ಸೈಟ್‌ಗಳಲ್ಲಿ ಮನೆ ಕಟ್ಟಿಸುವವರಿಗೆ ಸಂತೋಷದ ಸುದ್ದಿಯನ್ನು ನಗರಾಭಿವೃದ್ಧಿ ಇಲಾಖೆ ನೀಡಿದ್ದು, 60 ಚದರ ಮೀಟರ್ ವರೆಗಿನ ಸೈಟ್‌ಗಳಲ್ಲಿ ಮನೆ ಕಟ್ಟಿಸುವವರು ಹಿಂಭಾಗದಲ್ಲಿ ಸೆಟ್ ಬ್ಯಾಕ್ ಬಿಡುವುದರಿಂದ ವಿನಾಯಿತಿ ನೀಡಿ ನಗರಾಭಿವೃದ್ಧಿ ಇಲಾಖೆ ಅಂತಿಮ ಅಧಿಸೂಚನೆ ಹೊರಡಿಸಿದೆ.

ಬೆಂಗಳೂರು : ಸಣ್ಣ ಸೈಟ್‌ಗಳಲ್ಲಿ ಮನೆ ಕಟ್ಟಿಸುವವರಿಗೆ ಸಂತೋಷದ ಸುದ್ದಿಯನ್ನು ನಗರಾಭಿವೃದ್ಧಿ ಇಲಾಖೆ ನೀಡಿದ್ದು, 60 ಚದರ ಮೀಟರ್ ವರೆಗಿನ ಸೈಟ್‌ಗಳಲ್ಲಿ ಮನೆ ಕಟ್ಟಿಸುವವರು ಹಿಂಭಾಗದಲ್ಲಿ ಸೆಟ್ ಬ್ಯಾಕ್ ಬಿಡುವುದರಿಂದ ವಿನಾಯಿತಿ ನೀಡಿ ನಗರಾಭಿವೃದ್ಧಿ ಇಲಾಖೆ ಅಂತಿಮ ಅಧಿಸೂಚನೆ ಹೊರಡಿಸಿದೆ.

ನಗರಾಭಿವೃದ್ಧಿ ಇಲಾಖೆಯೇ ನಿಗದಿ

ಈ ಮೊದಲು 20*30 ಅಡಿ ಅಳತೆಯ ನಿವೇಶನದ ಸುತ್ತಲೂ 1 ಮೀಟರ್ ಜಾಗ ಬಿಡಬೇಕು ಹಾಗೂ 30*40 ಅಡಿ ಅಳತೆಯ ನಿವೇಶನಗಳ ಸುತ್ತಲೂ ಒಂದೂವರೆ ಮೀಟರ್ ಜಾಗ ಬಿಡಬೇಕು ಎನ್ನುವ ನಿಯಮವಿತ್ತು. ಅಲ್ಲದೇ, ದೊಡ್ಡ ನಿವೇಶನಗಳ ಒಟ್ಟಾರೆ ವಿಸ್ತೀರ್ಣದ ಆಧಾರದ ಮೇಲೆ ಸುತ್ತಲು ಇಂತಿಷ್ಟು ಸೆಟ್ ಬ್ಯಾಕ್ ಬಿಡಬೇಕು ಎಂಬ ನಿಯಮವಿತ್ತು. ಅದನ್ನು ಪರಿಷ್ಕರಿಸಿ ಇಂತಿಷ್ಟು ವಿಸ್ತೀರ್ಣದ ಸೆಟ್ ಬ್ಯಾಕ್ ಬಿಡಬೇಕು ಎನ್ನುವುದನ್ನು ನಗರಾಭಿವೃದ್ಧಿ ಇಲಾಖೆಯೇ ನಿಗದಿಪಡಿಸಿದೆ.

1500 ಚದರಡಿ ವಿಸ್ತೀರ್ಣದವರೆಗಿನ ಸೈಟ್‌ಗಳಲ್ಲಿ ನಿರ್ಮಿಸಿರುವ ಕಟ್ಟಡಗಳಿಗೆ ಸೆಟ್ ಬ್ಯಾಕ್ ಜಾಗ ಕಡಿಮೆ ಮಾಡಲಾಗಿದೆ. ಈ ಹೊಸ ನಿಯಮವೂ ಈಗಾಗಲೇ ನಿರ್ಮಾಣವಾಗಿರುವ ಕಟ್ಟಡಗಳಿಗೂ ಅನ್ವಯಿಸುತ್ತದೆ.

ಕೈಗಾರಿಕೆಗಳಿಗೆ ವಿನಾಯಿತಿ: 

500 ಚದರಡಿ ಮೀಟರ್‌ವರೆಗಿನ ನಿವೇಶನದಲ್ಲಿ ನಿರ್ಮಿಸುವ ಕೈಗಾರಿಕಾ ಕಟ್ಟಡಗಳಿಗೆ ಸೆಟ್‌ಬ್ಯಾಕ್‌ನಲ್ಲಿ ವಿನಾಯಿತಿ ನೀಡಲಾಗಿದೆ. ಸುತ್ತಲು 4.5 ಮೀಟರ್ ಬಿಡಬೇಕು ಎಂದು ಇದ್ದ ನಿಯಮವನ್ನು ಪರಿಷ್ಕರಿಸಿ, ನಿವೇಶನದ ವಿಸ್ತೀರ್ಣಕ್ಕೆ ಅನುಗುಣವಾಗಿ ಮುಂಭಾಗದಲ್ಲಿ ಶೇ.12 ಹಾಗೂ ಹಿಂಭಾಗ ಮತ್ತು ಅಕ್ಕ-ಪಕ್ಕದಲ್ಲಿ ಶೇ.8ರಷ್ಟು ಸೆಟ್ ಬ್ಯಾಕ್ ಬಿಡಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.