ಭರತ ಖಂಡದ ಧಾರ್ಮಿಕ ರಾಯಭಾರಿ ಸೇವಾಲಾಲರು

| Published : Mar 03 2025, 01:50 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಭರತ ಖಂಡದ ಧಾರ್ಮಿಕ ರಾಯಭಾರಿಗಳೂ, ಪವಾಡ ಪುರುಷರಾಗಿ ಸಮಾಜದ ಮೌಢ್ಯಗಳನ್ನು ಕಿತ್ತೊಗೆದು ಇಡೀ ಬಂಜಾರಾ ಸಮಾಜದ ದೈವೀ ಪುರುಷರಾಗಿ ಹೊರಹೊಮ್ಮಿದವರು ಸಂತ ಸೇವಾಲಾಲರು ಎಂದು ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಭರತ ಖಂಡದ ಧಾರ್ಮಿಕ ರಾಯಭಾರಿಗಳೂ, ಪವಾಡ ಪುರುಷರಾಗಿ ಸಮಾಜದ ಮೌಢ್ಯಗಳನ್ನು ಕಿತ್ತೊಗೆದು ಇಡೀ ಬಂಜಾರಾ ಸಮಾಜದ ದೈವೀ ಪುರುಷರಾಗಿ ಹೊರಹೊಮ್ಮಿದವರು ಸಂತ ಸೇವಾಲಾಲರು ಎಂದು ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ ಹೇಳಿದರು.

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಜಿಲ್ಲಾ, ತಾಲೂಕು ಹಾಗೂ ನಗರ ಘಟಕಗಳ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಸಂತ ಸೇವಾಲಾಲರ ಕುರಿತ ಚಿಂತನಾ ಗೋಷ್ಠಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಜನರಲ್ಲಿದ್ದ ಅಂಧಕಾರವನ್ನು ಹೋಗಲಾಡಿಸಿದ ಶ್ರೇಷ್ಠ ಮಹಿಮಾ ಪುರುಷರಾಗಿದ್ದರು ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಪಂ ಮಾಜಿ ಸದಸ್ಯ ಮಲ್ಲಿಕಾರ್ಜುನ ನಾಯಕ ಮಾತನಾಡಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅತ್ಯಂತ ಕ್ರಿಯಾಶೀಲವಾಗಿ ಎಲ್ಲ ಮಹಾತ್ಮರ ಜಯಂತಿಗಳನ್ನು ಆಚರಣೆ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ. ಜಿಲ್ಲೆಯ ಘನತೆ, ಗೌರವವನ್ನು ಹೆಚ್ಚಿಸಿದೆ. ಅದರಂತೆ ಸಂತ ಸೇವಾಲಾಲರ ಕುರಿತ ಚಿಂತನಾ ಗೋಷ್ಠಿಯನ್ನು ಪರಿಷತ್ತಿನಲ್ಲಿ ಅಥ೯ಪೂಣ೯ವಾಗಿ ಹಮ್ಮಿಕೊಂಡಿದ್ದು ನಮಗೆಲ್ಲ ತುಂಬ ಸಂತೋಷ ಉಂಟು ಮಾಡಿದೆ. ಅಖಂಡ ಭಾರತ ದೇಶದಲ್ಲಿ ಬಂಜಾರಾ ಸಮುದಾಯದವರು ಇಡಿಯಾಗಿ ಬಂಜಾರಾ ಭಾಷೆಯನ್ನು ಬಳಸುವ ಮೂಲಕ ಒಂದೇ ಭಾಷೆಯನ್ನು ಅಖಂಡ ದೇಶದಾದ್ಯಂತ ಬಳಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಯುವ ಸಾಹಿತಿ ಯಮನಪ್ಪ ಪವಾರ ಮಾತನಾಡಿ, ರಾಠೋಡ, ಚವ್ಹಾಣ ಹಾಗೂ ಪವಾರ ಮನೆತನಗಳು ಹೇಗೆ ಹುಟ್ಟಿಕೊಂಡವು ಹಾಗೂ ಸಂತ ಸೇವಾಲಾಲರು ಅಲೆಮಾರಿ ಜೀವನದಿಂದ ಬೇಸತ್ತು ಹೋಗಿದ್ದ ಇವರಿಗೆ ಒಂದೆಡೆ ನೆಲೆ ನಿಂತು ವ್ಯವಸಾಯ ಹಾಗೂ ಪಶುಪಾಲನೆ ಮಾಡುವಂತೆ ಕರೆ ನೀಡಿದ ಓವ೯ ಸಂತರು. ನೊಂದವರಿಗೆ ಆತ್ಮಸ್ಥೈರ್ಯ ತುಂಬುವ, ಪುರುಷರ ಸರಿ ಸಮಾನವಾದ ಸ್ಥಾನಮಾನವನ್ನು ಮಹಿಳೆಯರಿಗೂ ನೀಡಬೇಕು ಎಂದು ಪ್ರತಿಪಾದಿಸಿದ ಧೀಮಂತ ಪುರುಷರು ಸಂತ ಸೇವಾಲಾಲರು ಎಂದು ಬಣ್ಣಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ.ಎಸ್.ನಾಯಕ, ರಾಜಪಾಲ ಚೌವ್ಹಾಣ, ರುಕ್ಮಿಣಿ, ಮಹಾನಗರ ಪಾಲಿಕೆ ಸದಸ್ಯೆ ಸುಮಿತ್ರಾ ಜಾಧವ, ಮುಖಂಡ ದೇಶು ಚವ್ಹಾಣ, ಸದಸ್ಯೆ ಡಾ.ಸುರೇಖಾ ರಾಠೋಡ, ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ, ರಾಜೇಸಾಬ ಶಿವನಗುತ್ತಿ, ಅಜು೯ನ ಶಿರೂರ, ಜಿ.ಎಸ್ ಬಳ್ಳೂರ, ಲತಾ ಗುಂಡಿ, ಗಂಗಮ್ಮ ರಡ್ಡಿ, ಡಾ.ಎಂ.ಎಸ್ ಮಾಗಣಗೇರಿ, ವಿಠ್ಠಲ ಸಿಂಧೆ, ಸುಖದೇವಿ ಅಲಬಾಳಮಠ, ಬಿ.ವಿ.ಪಟ್ಟಣಶೆಟ್ಟಿ, ಶ್ರೀಕಾಂತ ಚಿಮ್ಮಲಗಿ, ಎಂ.ಡಿ.ಬಿಳಿಜಾಡರ, ಸದಾಶಿವ ಅಂಗಡಿ, ಮಂಜುಳಾ ಅಂಗಡಿ, ಕೆ.ಎಸ್.ಹಣಮಾಣಿ, ರೂಪಾ ರಜಪೂತ, ಆನಂದ ಪಂಡಿತ ಕುಂಟೋಜಿ, ಅರವಿಂದ ಪವಾರ, ಬಿ.ಎಸ್.ಬಿರಾದಾರ, ವಿರೇಶ ಅಂಗಡಿ, ರಾಹುಲ ಚವ್ಹಾಣ, ಶಿವಾಜಿ ಮೋರೆ ಸೇರಿದಂತೆ ಮುಂತಾದವರು ಇದ್ದರು. ಜಿಲ್ಲಾ ಕಸಾಪ ಗೌರವ ಕೋಶಾಧ್ಯಕ್ಷ ಡಾ. ಸಂಗಮೇಶ ಮೇತ್ರಿ ಸ್ವಾಗತಿಸಿದರು. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ.ಮಾಧವ ಗುಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.