ಸಾರಾಂಶ
ಕುರಿಗಳ ಹಿಂಡಿನ ಮೇಲೆ ತೋಳ ದಾಳಿಯಿಂದ ಏಳು ಕುರಿಗಳು ಸಾವಿಗೀಡಾದ ಘಟನೆ ಸಮೀಪದ ನಿಂಗಾಪುರ ಗ್ರಾಮದಲ್ಲಿ ಶುಕ್ರವಾರ ಸಂಜೆ ನಡೆದಿದೆ.
ಕನ್ನಡಪ್ರಭ ವಾರ್ತೆ ಲೋಕಾಪುರ
ಕುರಿಗಳ ಹಿಂಡಿನ ಮೇಲೆ ತೋಳ ದಾಳಿಯಿಂದ ಏಳು ಕುರಿಗಳು ಸಾವಿಗೀಡಾದ ಘಟನೆ ಸಮೀಪದ ನಿಂಗಾಪುರ ಗ್ರಾಮದಲ್ಲಿ ಶುಕ್ರವಾರ ಸಂಜೆ ನಡೆದಿದೆ.ಅಬ್ದುಲ್ ರಜಾಕ್ ಸರಕಾವಸ ಅವರಿಗೆ ಸೇರಿದ ಕುರಿಗಳು ಮೃತಪಟ್ಟಿವೆ. ಸೀಮೆಯಲ್ಲಿ ಕುರಿಗಳ ಹಿಂಡು ಮೇಯಲು ಸಮಯದಲ್ಲಿ ಈ ಘಟನೆ ನಡೆದಿದೆ. ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪಂಚನಾಮೆ ಮಾಡಿ, ಪರಿಶೀಲಿಸಿ ಸೂಕ್ತ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯಾಧಿಕಾರಿ ನಿಂಗಪ್ಪ ರಾಮಗಾನಟ್ಟಿ ತಿಳಿಸಿದ್ದಾರೆ. ಅಬ್ದುಲ್ ರಜಾಕ್ ಕುರಿ ಸಾಕಾಣಿಯಿಂದಲೇ ಬದುಕು ನಡೆಸುತ್ತಿದ್ದ ಈ ಅಪಾರ ನಷ್ಟಕ್ಕೆ ಕಂಗಾಲಾಗಿದ್ದು, ತೋಳ ದಾಳಿಯಿಂದ ಹಾನಿಗೆ ಸರಕಾರ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದ್ದಾನೆ. ಗಸ್ತು ಸಿಬ್ಬಂದಿ ಬಸವರಾಜ ನಂದಿಕೋಲಮಠ, ಫಕೀರಪ್ಪ ಬಂಗಿ, ಪಶು ವೈದ್ಯ ಡಾ.ಬಿ.ಕೆ. ಹೊಸೂರ ಭೇಟಿ ನೀಡಿ ಪರೀಶಿಲನೆ ನಡೆಸಿದರು.