ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುನಗರದಲ್ಲಿ ಸೋಮವಾರ ಬಿದ್ದ ಧಾರಾಕಾರ ಮಳೆಯಿಂದಾಗಿ ಸುಣ್ಣದಕೇರಿ 50ನೇ ವಾರ್ಡ್ ನಲ್ಲಿ ಮನೆಗಳಿಗೆ ಚರಂಡಿ ನೀರು ನುಗ್ಗಿದೆ.ನಗರದ ಹೃದಯ ಭಾಗದಲ್ಲಿನ ಸುಣ್ಣದಕೇರಿ 50ನೇ ವಾರ್ಡ್ನ ಸುಮಾರು 40ಕ್ಕೂ ಹೆಚ್ಚು ಮನೆಗಳಿಗೆ ಚರಂಡಿ ನೀರು ನುಗ್ಗಿದ್ದರಿಂದ ಅಲ್ಲಿನ ನಿವಾಸಿಗಳಿಗೆ ತೊಂದರೆ ಉಂಟಾಗಿದೆ.ಸ್ಥಳೀಯ ನಿವಾಸಿಗಳು ಮೂಗು ಮುಚ್ಚಿ ವಾಸಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆಯಲ್ಲಿ ಹೊಕ್ಕ ಡ್ರೈನೇಜ್ ನೀರನ್ನು ಬಕೆಟ್ ಸಹಾಯದಿಂದ ಹೊರ ಹಾಕುವ ಪ್ರಯತ್ನ ಮಾಡಿದರು. ಅದು ಕೂಡ ವ್ಯರ್ಥವಾಯಿತು.ಸಂಜೆ 5 ಗಂಟೆ ಸುಮಾರಿಗೆ ರಸ್ತೆಗೆ ಚಾಚಿದ ಚರಂಡಿ ನೀರು ರಸ್ತೆಯಗಲಕ್ಕೂ ನೀರು ಚಿಮ್ಮತ್ತಿದ್ದು ಜನರು ರಸ್ತೆ ಹಾಗೂ ಮನೆಗಳಿಗೆ ಹೋಗಲು ಜನರು ಹರಸಾಹಸ ಪಡಬೇಕಿದೆ. ಇಲ್ಲಿನ ಕಿರಿದಾದ ರಸ್ತೆಯಲ್ಲಿ ಸರಿಯಾದ ಮೋರಿ, ಪೈಪ್ಲೈನ್ ಸರಿಯಾಗಿ ಹಾಕದೆ ಈ ರೀತಿ ಗೊಂದಲಕ್ಕೆ ಸೃಷ್ಟಿಯಾಗಿದೆ ಎಂದು ಆಮ್ ಆದ್ಮಿಯ ಹೇಮಂತ್ಕುಮಾರ್ ಹಾಗೂ ಜಿಲ್ಲಾಧ್ಯಕ್ಷ ರಂಗಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಸ್ಥಳೀಯರು ಸಂಬಂಧ ಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಅದ್ದರಿಂದ ಸ್ಥಳೀಯರು ಸಂಬಂಧ ಪಟ್ಟ ಅಧಿಕಾರಿಗಳಿಗೆ ಹಿಡಿಶಾಪ ಹಾಕಿದ್ದಾರೆ. ಕೆಲವರು ಮೊದಲ ಮಹಡಿಯಲ್ಲಿ ಆಶ್ರಯ ಪಡೆದರೆ, ಮತ್ತೆ ಕೆಲವರು ಮನೆಯನ್ನು ಬಿಟ್ಟು ಸ್ನೇಹಿತರ ಮನೆಗೆ ತೆರಳಿ ಆಶ್ರಯ ಪಡೆದಿದ್ದಾರೆ.