ಕಡೂರಿನಲ್ಲಿ 11ಕ್ಕೆ ಸೇವಾಲಾಲ್ ಜಯಂತಿ

| Published : Mar 02 2024, 01:45 AM IST

ಸಾರಾಂಶ

ಮಾರ್ಚ್‌ 11ರ ಸೋಮವಾರ ತಾಲೂಕು ಬಂಜಾರ ಸಮಾಜ ಮತ್ತು ನೌಕರ ಸಂಘಗಳ ಸಹಯೋಗದಲ್ಲಿ 285ನೇ ಶ್ರೀ ಸೇವಾಲಾಲ್ ಮಹಾರಾಜರ ಜಯಂತಿ ಮಹೋತ್ಸವ ನಡೆಯಲಿದೆ ಎಂದು ಬಂಜಾರ ಸಮಾಜದ ತಾಲೂಕು ಅಧ್ಯಕ್ಷ ಕುಮಾರ್‌ ನಾಯಕ್‌ ತಿಳಿಸಿದರು.

ಈ ಬಾರಿಯೂ ಅದ್ಧೂರಿ ಕಾರ್ಯಕ್ರಮ: ಕುಮಾರ್‌ ನಾಯಕ್‌

ಕನ್ನಡಪ್ರಭ ವಾರ್ತೆ, ಕಡೂರು

ಮಾರ್ಚ್‌ 11ರ ಸೋಮವಾರ ತಾಲೂಕು ಬಂಜಾರ ಸಮಾಜ ಮತ್ತು ನೌಕರ ಸಂಘಗಳ ಸಹಯೋಗದಲ್ಲಿ 285ನೇ ಶ್ರೀ ಸೇವಾಲಾಲ್ ಮಹಾರಾಜರ ಜಯಂತಿ ಮಹೋತ್ಸವ ನಡೆಯಲಿದೆ ಎಂದು ಬಂಜಾರ ಸಮಾಜದ ತಾಲೂಕು ಅಧ್ಯಕ್ಷ ಕುಮಾರ್‌ ನಾಯಕ್‌ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರತಿ ವರ್ಷದಂತೆ ಈ ಬಾರಿಯೂ ಅದ್ಧೂರಿ ಸೇವಾಲಾಲ್ ಜಯಂತಿ ಆಚರಣೆಗೆ ಸಿದ್ದತೆ ನಡೆಸಲಾಗಿದೆ. ನಮ್ಮ ಸಮಾಜದ ಗುರುಗಳಾದ ಚಿತ್ರದುರ್ಗದ ಸೀಬಾರದ ಸರ್ದಾರ್ ಸೇವಾಲಾಲ್ ಸ್ವಾಮಿಗಳ ಸಾನ್ನಿಧ್ಯದಲ್ಲಿ ಜಯಂತಿ ನಡೆಯಲಿದೆ. ಮಾರ್ಚ್ 11ರ ಸೋಮವಾರ ಪಟ್ಟಣದ ಗಣಪತಿ ಪೆಂಡಾಲಿನಲ್ಲಿ ನಡೆಯಲಿದೆ.ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಾರ್ಯಕ್ರಮ ಉದ್ಘಾಟಿಸಲಿದ್ದು. ಶಾಸಕ ಕೆ.ಎಸ್.ಆನಂದ್, ನಮ್ಮ ಸಮಾಜದ ಹೆಸರಾಂತ ಗಾಯಕಿ ಹೈದರಬಾದ್ ನ ಮಂಗಲಿಬಾಯಿ, ಸರಿಗಮದ ಗದಗದ ರಮೇಶ್, ಸಾಹಿತಿ ಮಾಜಿ ಸಚಿವೆ ಬಿ.ಟಿ. ಲಲಿತನಾಯ್ಕ ಭಾಗವಹಿಸಲಿದ್ದಾರೆ.

ಜಿಲ್ಲಾ ಮಟ್ಟದ ಸೇವಾಲಾಲ್ ಪ್ರಶಸ್ತಿಯನ್ನು ಸಮಾಜದ ಓರ್ವ ವ್ಯಕ್ತಿಗೆ ನೀಡಲಾಗುವುದು. ತಾಲೂಕಿನ ಎಲ್ಲಾ ತಾಂಡ್ಯಗಳ ಬಂಧುಗಳು 11ರ ಜಯಂತಿ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಬಂಜಾರ ಸಮಾಜದ ಪ್ರಕಾಶ ನಾಯ್ಕ,ಸತೀಶ್‌ ನಾಯ್ಕ,ಕೋಡೀಹಳ್ಳಿ ಶ್ರೀನಿವಾಸನಾಯ್ಕ, ರಾಮಚಂದ್ರ ನಾಯ್ಕ, ಪಾಂಡಣ್ಣ, ನಾರಾಯಣ ನಾಯ್ಕ, ಬಾಲಾಜಿ ನಾಯ್ಕ, ಗೋವಿಂದನಾಯ್ಕ ಮತ್ತಿತರರು ಇದ್ದರು.

1ಕೆಕೆೆಡಿಯು3.

ಕಡೂರು ತಾಲೂಕು ಬಂಜಾರ ಸಮಾಜದ ಅಧ್ಯಕ್ಷ ಕುಮಾರನಾಯ್ಕ ಅಧ್ಯಕ್ಷತೆಯಲ್ಲಿ ಸೇವಾಲಾಲ್ ಜಯಂತಿ ಸಭೆ ನಡೆಯಿತು.