ಮಹಿಳೆಯರ ಸ್ವಾವಲಂಬನೆಗೆ ಹೊಲಿಗೆ ತರಬೇತಿ

| Published : Dec 08 2024, 01:15 AM IST

ಸಾರಾಂಶ

ವಿಜಯಪುರ: ಮನುಷ್ಯ ಭೌತಿಕವಾಗಿ ಸಾಮಾಜಿಕವಾಗಿ ವೈಜ್ಞಾನಿಕವಾಗಿ ಎಷ್ಟೇ ಮುಂದುವರಿದರೂ, ಎಷ್ಟೇ ಸಾಧನೆ ಮಾಡಿದರೂ ಮೌಲ್ಯಗಳನ್ನು ವೃದ್ಧಿಸಿಕೊಳ್ಳುವುದರಲ್ಲಿ ಹಿಂದುಳಿದಿದ್ದೇವೆ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾನಿಲಯದ ಸಂಚಾಲಕರಾದ ಬ್ರಹ್ಮಕುಮಾರಿ ರೂಪಕ್ಕ ತಿಳಿಸಿದರು.

ವಿಜಯಪುರ: ಮನುಷ್ಯ ಭೌತಿಕವಾಗಿ ಸಾಮಾಜಿಕವಾಗಿ ವೈಜ್ಞಾನಿಕವಾಗಿ ಎಷ್ಟೇ ಮುಂದುವರಿದರೂ, ಎಷ್ಟೇ ಸಾಧನೆ ಮಾಡಿದರೂ ಮೌಲ್ಯಗಳನ್ನು ವೃದ್ಧಿಸಿಕೊಳ್ಳುವುದರಲ್ಲಿ ಹಿಂದುಳಿದಿದ್ದೇವೆ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾನಿಲಯದ ಸಂಚಾಲಕರಾದ ಬ್ರಹ್ಮಕುಮಾರಿ ರೂಪಕ್ಕ ತಿಳಿಸಿದರು.

ವಿಜಯಪುರ ಜೆಸಿಐ ಸಂಸ್ಥೆಯ ನೂತನ ಪದಾಧಿಕಾರಿಗಳ ಪದವಿ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜೆಸಿಐ ನೂತನ ಅಧ್ಯಕ್ಷೆ ಜಿ.ಶೀಲಾಭೈರೇಗೌಡರಿಗೆ ವಲಯ ೧೪ರ ಜೆಸಿಐ ಅಧ್ಯಕ್ಷ ವಿಜಯಕುಮಾರ್ ಪ್ರಮಾಣ ವಚನ ಬೋಧಿಸಿದರು.

ಇದೇ ವೇಳೆ ಆವತಿಯ ವೈಟ್ ಅಂಡ್ ವೈಟ್ ಎಂಟರ್ಪ್ರೈಸಸ್ ಎಂ.ಆರ್.ಗಂಗಾಧರ್, ಸೀನಿಯರ್ ಚೇಂಬರ್ ಅಧ್ಯಕ್ಷ ಕೆ. ವೆಂಕಟೇಶ್, ಜೆಸಿಐ ವಲಯ ಸಂಯೋಜಕರಾದ ಮುನಿಕೃಷ್ಣಪ್ಪ, ಎನ್‌ಸಿ ಮುನಿವೆಂಕಟರಮಣಪ್ಪ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಡಾ. ಎಂ.ಶಿವಕುಮಾರ್ ವಕೀಲರಾದ ಎನ್.ವಿ.ಜಯರಾಂ ಅವರನ್ನು ಸನ್ಮಾನಿಸಲಾಯಿತು. ಮಾಜಿ ಅಧ್ಯಕ್ಷರಾದ ಎಂ.ಬೈರೇಗೌಡ, ಎಸ್ ರಮೇಶ್, ಎಸ್‌ಆರ್‌ಎಸ್‌ ಬಸವರಾಜು, ಜನಾರ್ದನ್, ಅನೀಸ್ ಉರ್ ರಹಮಾನ್, ಎಂ.ಲೋಕೇಶ್, ದೇವನಹಳ್ಳಿ ಜೆಸಿಐ ಅಧ್ಯಕ್ಷ ಪ್ರಶಾಂತ್‌ ಇತರರಿದ್ದರು. ನೂತನ ಕಾರ್ಯಕಾರಿ ಮಂಡಳಿ:

ಅಧ್ಯಕ್ಷರಾಗಿ ಶೀಲಾಭೈರೇಗೌಡ, ಕಾರ್ಯದರ್ಶಿಯಾಗಿ ಎಂ.ಲೋಕೇಶ್, ಖಜಾಂಚಿಯಾಗಿ ಗಾಯತ್ರಿ ಜನಾರ್ಧನ್, ಉಪಾಧ್ಯಕ್ಷರಾಗಿ ಸರಸ್ವತಿ, ತರಬೇತಿ ಉಪಾಧ್ಯಕ್ಷರಾಗಿ ಶ್ರೀನಿವಾಸಮೂರ್ತಿ, ಸಾರ್ವಜನಿಕ ಸಂಪರ್ಕ ಉಪಾಧ್ಯಕ್ಷರಾಗಿ ಮಾಧವಿ ರಮೇಶ್, ಘಟಕ ಅಭಿವೃದ್ಧಿ ಉಪಾಧ್ಯಕ್ಷರಾಗಿ ಶಿಲ್ಪ ಬಲಮುರಿ ಶ್ರೀನಿವಾಸ್, ಅಭಿವೃದ್ಧಿ ಮತ್ತು ಬೆಳವಣಿಗೆ ಉಪಾಧ್ಯಕ್ಷರಾಗಿ ಶಶಿಕುಮಾರ್, ಕಾರ್ಯಕ್ರಮ ಉಪಾಧ್ಯಕ್ಷರಾಗಿ ರತ್ನಮ್ಮ, ವ್ಯವಹಾರ ಉಪಾಧ್ಯಕ್ಷರಾಗಿ ಯೇಸು ಮಣಿ, ಟ್ರೈನಿಂಗ್ ಡೆವೆಲಪ್ಮೆಂಟ್ ಸದಸ್ಯರಾಗಿ ಪುನೀತ್ ಆರಾಧ್ಯ, ಘಟಕ ಪತ್ರಿಕೆ ಸಂಪಾದಕರಾಗಿ ರಂಜಿತ, ಉಪಸಂಪಾದಕರಾಗಿ ನರಸಿಂಹಮೂರ್ತಿ, ಸಹ ಸಂಪಾದಕರಾಗಿ ಸಂಜಯ್, ಮಹಿಳಾ ಜೆಸಿ ಮುಖ್ಯಸ್ಥರಾಗಿ ವನರಾಜಲಕ್ಷ್ಮಿ, ಸಹ ಕಾರ್ಯದರ್ಶಿಯಾಗಿ ವರುಣ್ ವರ್ಮ ಆಯ್ಕೆ ಮಾಡಲಾಯಿತು.

(ಫೋಟೊ ಕ್ಯಾಫ್ಷನ್‌)

ವಿಜಯಪುರದಲ್ಲಿ ಜೆಸಿಐ ಸಂಸ್ಥೆ ನೂತನ ಪದಾಧಿಕಾರಿಗಳ ಪದವಿ ಸ್ವೀಕಾರ ಸಮಾರಂಭ ನಡೆಯಿತು.