ಪ್ರಜ್ವಲ್ ರೇವಣ್ಣರಿಂದ ಲೈಂಗಿಕ ಕಿರುಕುಳ ನಿಜವಾಗಿದ್ರೆ ಅಕ್ಷಮ್ಯ: ಮಾಧುಸ್ವಾಮಿ

| Published : May 04 2024, 12:33 AM IST

ಪ್ರಜ್ವಲ್ ರೇವಣ್ಣರಿಂದ ಲೈಂಗಿಕ ಕಿರುಕುಳ ನಿಜವಾಗಿದ್ರೆ ಅಕ್ಷಮ್ಯ: ಮಾಧುಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಸಂಸದ ಪ್ರಜ್ವಲ್, ಮಾಜಿ ಸಚಿವ ಎಚ್‌.ಡಿ. ರೇವಣ್ಣನವರ ಮೇಲೆ ಲೈಂಗಿಕ ಕಿರುಕುಳ ಆರೋಪವಿದೆ. ಇದು ನಿಜವೇ ಆಘಿದ್ದರೆ ಅಕ್ಷಮ್ಯ ಅಪರಾಧವಾಗಿದ್ದು, ವೈಯಕ್ತಿಕವಾಗಿ ಖಂಡಿಸುತ್ತೇನೆ ಎಂದು ಕಾನೂನು ಮತ್ತು ಸಂಸದೀಯ ಖಾತೆ ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ ಮಲೇಬೆನ್ನೂರು

ಸಂಸದ ಪ್ರಜ್ವಲ್, ಮಾಜಿ ಸಚಿವ ಎಚ್‌.ಡಿ. ರೇವಣ್ಣನವರ ಮೇಲೆ ಲೈಂಗಿಕ ಕಿರುಕುಳ ಆರೋಪವಿದೆ. ಇದು ನಿಜವೇ ಆಘಿದ್ದರೆ ಅಕ್ಷಮ್ಯ ಅಪರಾಧವಾಗಿದ್ದು, ವೈಯಕ್ತಿಕವಾಗಿ ಖಂಡಿಸುತ್ತೇನೆ ಎಂದು ಕಾನೂನು ಮತ್ತು ಸಂಸದೀಯ ಖಾತೆ ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ ಅಭಿಪ್ರಾಯಪಟ್ಟರು.

ಹರಿಹರ ತಾಲೂಕು ಗ್ರಾಮಗಳಾದ ಎಕ್ಕೆಗೊಂದಿ, ನಂದಿತಾವರೆ ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಪರ ಚುನಾವಣಾ ಪ್ರಚಾರ ಸಭೆ ನಡೆಸಿದ ಅವರು, ಜಿಗಳಿ ಗ್ರಾಮದಲ್ಲಿ ಸುದ್ದಿಗಾರರ ಜತೆ ಮಾತನಾಡಿದರು. ಪ್ರಕರಣ ಕುರಿತು ವಿಶೇಷ ತನಿಖಾ ತಂಡ ತನಿಖೆ ನಡೆಸುತ್ತಿದ್ದು, ಅಪರಾಧ ಸಾಬೀತಾದಾಗ ಸತ್ಯ ತಿಳಿಯುತ್ತದೆ ಎಂದರು.

ಪೆನ್ ಡ್ರೈವ್ ವಿಡಿಯೋ ವಿಚಾರವಾಗಿ ಮಹಿಳೆಯರು ಧೈರ್ಯವಾಗಿ ಸಾಕ್ಷಿ ಹೇಳಬೇಕಿದೆ. ಹೇಳಲು ಬಾರದ ವಾತಾವರಣವೂ, ವ್ಯವಸ್ಥೆಯೂ ಇದೆ. ಬೇರೆ ಜಿಲ್ಲೆಯವರನ್ನು ಅನ್ಯಜಿಲ್ಲೆಗೆ ಉಸ್ತವಾರಿ ಹಾಕಿದಾಗ ಗೆದ್ದು ಹೋಗಿಬಿಡ್ತಾರೆ. ಸ್ಥಳೀಯರಿಗೆ ಅನ್ಯಾಯವಾಗುತ್ತೆ, ಪಶ್ಚಾತ್ತಾಪ ಪಡುತ್ತಾರೆ ಎಂದರು.

ಲೋಕಸಭಾ ಚುನಾವಣೆ ಎರಡು ದಿನವಿದ್ದಾಗ ಎರಡು ತಿಂಗಳ ಗ್ಯಾರಂಟಿ ಹಣ ಮಹಿಳೆಯರ ಖಾತೆಗೆ ಹಾಕುವ ಕಾಂಗ್ರೆಸ್ ವರ್ತನೆಗೆ ವಿರೋಧವಿದೆ. ರೈತರಿಗೆ ಹಾಲಿನ ಹಣ ಮತ್ತು ಗುತ್ತಿಗೆದಾರರ ಬಾಕಿ ಹಣ ಜಮಾ ಮಾಡದೇ ಸರ್ಕಾರ ಮೋಸ ಮಾಡಿದೆ. ಗ್ಯಾರಂಟಿ ವಿಚಾರವಾಗಿ ಮಹಿಳೆಯರು ಸತ್ಯವಾದ ಧ್ವನಿ ಬಿಡುತ್ತಿಲ್ಲ. ಇಂಡಿಯಾ ಒಕ್ಕೂಟದಿಂದ ಪ್ರಣಾಳಿಕೆ ಇದ್ದರೆ ವಿಚಾರವೇ ಬೇರೆ ಆಗಿರುತ್ತಿತ್ತು. ಇದು ಕೇಂದ್ರದ ಕಾಂಗ್ರೆಸ್ ಪ್ರಣಾಳಿಕೆ ಮಾತ್ರವಾದ್ದರಿಂದ ಪರಿಣಾಮ ಬೀರಲ್ಲ. ದೇಶದ ಎಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆ ಅಭ್ಯರ್ಥಿಗಳೇ ಇಲ್ಲ ಎಂದರು.

ಚಿಕ್ಕಮಗಳೂರು, ಚಿತ್ರದುರ್ಗ, ಹಾವೇರಿ, ದಾವಣಗೆರೆ ಮತ್ತು ಹಾಸನ ಜಿಲ್ಲೆಯಲ್ಲಿ ಪ್ರವಾಸ ಮಾಡಿದಾಗ ನರೇಂದ್ರ ಮೋದಿ ಅವರ ಮೇಲೆ ನಂಬಿಕೆ ಮತ್ತು ಉತ್ತಮ ಭಾವನೆ ಜನರಲ್ಲಿ ಕಂಡುಬಂದಿದೆ ಎಂದರು.

ಶಾಸಕ ಬಿ.ಪಿ ಹರೀಶ್, ಮುಖಂಡ ಜಿಗಳಿ ಇಂದೂಧರ್, ಚಂದ್ರಶೇಖರ್ ಪೂಜಾರ್, ಲಿಂಗರಾಜ್, ಹನುಮಗೌಡ ಇದ್ದರು.

- - - -ಚಿತ್ರ-೩:

ಜೆ.ಸಿ. ಮಾಧುಸ್ವಾಮಿ