ಸಾರಾಂಶ
ಮಂಗಳೂರಿನ ಪ್ರಮುಖ ಬಿಲ್ಡರ್‌ಗಳಲ್ಲಿ ಒಂದಾದ ರೋಹನ್ ಕಾರ್ಪೊರೇಷನ್, ಬಾಲಿವುಡ್‌ನ ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರನ್ನು ಕರ್ನಾಟಕದ ತಮ್ಮ ಅಧಿಕೃತ ಬ್ರ್ಯಾಂಡ್ ರಾಯಭಾರಿಯಾಗಿ ನೇಮಿಸಿಕೊಂಡಿದೆ.
ಮಂಗಳೂರು: ಕರ್ನಾಟಕದ ರಿಯಲ್ ಎಸ್ಟೇಟ್ ಇತಿಹಾಸದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಮಂಗಳೂರಿನ ಪ್ರಮುಖ ಬಿಲ್ಡರ್‌ಗಳಲ್ಲಿ ಒಂದಾದ ರೋಹನ್ ಕಾರ್ಪೊರೇಷನ್, ಬಾಲಿವುಡ್‌ನ ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರನ್ನು ಕರ್ನಾಟಕದ ತಮ್ಮ ಅಧಿಕೃತ ಬ್ರ್ಯಾಂಡ್ ರಾಯಭಾರಿಯಾಗಿ ನೇಮಿಸಿಕೊಂಡಿದೆ.
ರೋಹನ್ ಕಾರ್ಪೊರೇಷನ್‌ನ ಸಂಸ್ಥಾಪಕ ಮತ್ತು ಅಧ್ಯಕ್ಷ ಡಾ. ರೋಹನ್ ಮೋಂತೆರೊ ಅವರು ಈ ಕುರಿತು ಮಾತನಾಡಿ, ಶಾರುಖ್ ಖಾನ್ ಅವರು ರೋಹನ್ ಕಾರ್ಪೊರೇಷನ್‌ಗೆ ಕೇವಲ ಪಾಲುದಾರರಲ್ಲ. ಇದು ನಮ್ಮ ಕನಸು ಮತ್ತು ಬದ್ಧತೆಯ ಸಂಗಮ. ಶಾರುಖ್ ಖಾನ್ ತಮ್ಮ ಪರಿಶ್ರಮ ಮತ್ತು ಬದ್ಧತೆಯಿಂದ ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡಿದಂತೆ ರೋಹನ್ ಕಾರ್ಪೊರೇಷನ್ ಕೂಡ ಜನರ ಜೀವನವನ್ನು ಉತ್ತಮಗೊಳಿಸುವ ಮೂಲಕ ಸ್ಫೂರ್ತಿ ನೀಡಲು ಬಯಸಿದೆ. ಅವರನ್ನು ರಾಯಭಾರಿಯಾಗಿ ಮಾಡುವ ಮೂಲಕ ಕರ್ನಾಟಕ ಮತ್ತು ಅದರ ಹೊರಗೂ ನಗರ ಜೀವನವನ್ನು ಮರುವ್ಯಾಖ್ಯಾನಿಸುವ ನಮ್ಮ ಗುರಿಗೆ ನಾವು ಬದ್ಧರಾಗಿದ್ದೇವೆ ಎಂದರು.ಶಾರುಖ್ ಖಾನ್ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಾ, ನಾವೀನ್ಯತೆ ಮತ್ತು ಹೃದಯವನ್ನು ಪ್ರತಿಬಿಂಬಿಸುವ ಬ್ರ್ಯಾಂಡ್ ಆಗಿರುವ ರೋಹನ್ ಕಾರ್ಪೊರೇಷನ್‌ನೊಂದಿಗೆ ಕೈಜೋಡಿಸುತ್ತಿರುವುದು ನನಗೆ ಸಂತೋಷ ತಂದಿದೆ. ನಾಳಿನ ನಗರಗಳನ್ನು ಪ್ರೀತಿ ಮತ್ತು ದೂರದೃಷ್ಟಿಯೊಂದಿಗೆ ರೂಪಿಸುವ ಈ ಅದ್ಭುತ ಪಯಣದ ಭಾಗವಾಗಲು ನಾನು ಕಾತರದಿಂದ ಕಾಯುತ್ತಿದ್ದೇನೆ ಎಂದು ಹೇಳಿದರು.
ಸಮಗ್ರತೆ, ಶ್ರೇಷ್ಠತೆ, ನಾವೀನ್ಯತೆ ಮತ್ತು ಸುಸ್ಥಿರತೆಯಂತಹ ಪ್ರಮುಖ ಮೌಲ್ಯಗಳೊಂದಿಗೆ ಶಾರುಖ್ ಖಾನ್ ಅವರೊಂದಿಗಿನ ರೋಹನ್ ಕಾರ್ಪೊರೇಷನ್‌ನ ಈ ಪಾಲುದಾರಿಕೆಯು ಹೊಸ ಕ್ರಿಯಾತ್ಮಕ ಬೆಳವಣಿಗೆಯಾಗಿದ್ದು, ಬಲವಾದ ಬ್ರ್ಯಾಂಡ್ ಅಸ್ತಿತ್ವದ ಹೊಸ ಯುಗದ ಆರಂಭವಾಗಿದೆ. ಇದು ಕರ್ನಾಟಕದಾದ್ಯಂತ ಕನಸುಗಾರರು ಮತ್ತು ಮನೆ ಮಾಲೀಕರ ಹೊಸ ಪೀಳಿಗೆಗೆ ಸ್ಫೂರ್ತಿಯಾಗಲಿದೆ.