ನಾಳೆ ಶಹಾಪುರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ

| Published : Mar 01 2024, 02:18 AM IST

ನಾಳೆ ಶಹಾಪುರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ
Share this Article
  • FB
  • TW
  • Linkdin
  • Email

ಸಾರಾಂಶ

4ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವು ಸುರಪುರದ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರು ಅಕಾಲಿಕ ನಿಧನದಿಂದ ಮುಂದೂಡಲಾಗಿತ್ತು. ಈಗ, ಈ ಸಮ್ಮೇಳನವು ಮಾ.2ರಂದು ಶನಿವಾರ ಸಮ್ಮೇಳನ ನಡೆಸಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಶಹಾಪುರ

ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಭೀಮರಾಯನಗುಡಿಯಲ್ಲಿ ನಿಗದಿಯಾಗಿದ್ದ 4ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವು ಸುರಪುರದ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರು ಅಕಾಲಿಕ ನಿಧನದಿಂದ ಮುಂದೂಡಲಾಗಿತ್ತು. ಈಗ, ಈ ಸಮ್ಮೇಳನವು ಮಾ.2ರಂದು ಶನಿವಾರ ಸಂಭ್ರಮದಿಂದ ಸಮ್ಮೇಳನ ಜರುಗಲು ಎಲ್ಲಾ ರೀತಿಯಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ರವೀಂದ್ರನಾಥ ಹೊಸಮನಿ ಅವರು ತಿಳಿಸಿದ್ದಾರೆ.

ನಗರದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಕಾರ್ಯಾಲಯದಲ್ಲಿ ನಡೆದ ಭೀಮರಾಯನಗುಡಿ ವಲಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಆಮಂತ್ರಣ ಪತ್ರಿಕೆಯಲ್ಲಿರುವಂತೆ ಸಮ್ಮೇಳನದ ಉದ್ಘಾಟನೆ, ಮೆರವಣಿಗೆ, ವಿವಿಧ ಗೋಷ್ಠಿಗಳಲ್ಲಿ ಸಂಪನ್ಮೂಲ ವ್ಯಕ್ತಿಗಳು, ವಿದ್ವಾಂಸರು, ಸಾಹಿತಿಗಳು, ಗಣ್ಯ ವ್ಯಕ್ತಿಗಳು ಪಾಲ್ಗೊಂಡು ತಮ್ಮ ಚಿಂತನೆಗಳನ್ನು ವ್ಯಕ್ತಪಡಿಸಲಿದ್ದಾರೆ. ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪಗೌಡ ದರ್ಶನಾಪೂರ ಅವರು ಎಲ್ಲರನ್ನು ಒಳಗೊಳ್ಳುವ ಮಾದರಿ ಸಮ್ಮೇಳನವಾಗಿಸಲು ಎಲ್ಲಾ ರೀತಿಯಿಂದ ಸಹಕಾರ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಮಾ.2ರಂದು ಭೀಮರಾಯನಗುಡಿಯ ಸಿದ್ಧಾರೂಢ ಮಠದಲ್ಲಿ ಜರುಗಲಿರುವ 4ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಾಡಿನ ಸಮಸ್ತ ಕನ್ನಡದ ಬಂಧುಗಳು ಮತ್ತು ಎಲ್ಲಾ ಶಾಲಾ-ಕಾಲೇಜುಗಳ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಸಮ್ಮೇಳನದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಭೀಮರಾಯಗುಡಿಯ ವಲಯ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶರಣಬಸವ ಪೊಲೀಸ್ ಬಿರಾದಾರ್ ಮನವಿ ಮಾಡಿದ್ದಾರೆ.

ಗೌರವ ಕಾರ್ಯದರ್ಶಿ ರಾಘವೇಂದ್ರ ಹಾರಣಗೇರಾ, ಮಡಿವಾಳಪ್ಪ ಪಾಟೀಲ್, ಬಸವರಾಜ ಸಿನ್ನೂರು, ರಾಮು ಸಗರ, ತಿಪ್ಪಣ್ಣ ಕ್ಯಾತನಾಳ, ಸತೀಶ ತುಳೇರ, ನಿಂಗಣ್ಣ ದೇವಿಕೇರಾ ಇತರರಿದ್ದರು.