ಸಾರಾಂಶ
ಹೊನ್ನಾಳಿ: ಪಟ್ಟಣದ ಶಿವ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನೂತನ ಅಧ್ಯಕ್ಷರಾಗಿ ಆರ್.ಸಿ. ಶಂಕರಗೌಡ ಕ್ಯಾಸಿನಕೆರೆ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿ ಕರ್ತವ್ಯನಿರ್ವಹಿಸಿದ ಸಹಕಾರಿ ಅಭಿವೃದ್ಧಿ ಆಧಿಕಾರಿ ನವೀನ್ ಕುಮಾರ್ ಘೋಷಿಸಿದರು.
ಅಧ್ಯಕ್ಷರಾಗಿದ್ದ ಕಮ್ಮಾರಗಟ್ಟೆ ಶಿವಕುಮಾರ್ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಸೊಸೈಟಿ ಸಭಾಂಗಣದಲ್ಲಿ ಸೋಮವಾರ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಆರ್.ಸಿ. ಶಂಕರಗೌಡ ಕ್ಯಾಸಿನಕೆರೆ ಅವರೊಬ್ಬರೇ ಉಮೇದುವಾರಿಕೆ ಸಲ್ಲಿಸಿದ್ದರು. ಆದ್ದರಿಂದ ಚುನಾವಣಾಧಿಕಾರಿ ಅವಿರೋಧ ಆಯ್ಕೆ ಘೋಷಣೆ ಮಾಡಿದರು.ಈ ಸಂದರ್ಭ ಸೊಸೈಟಿ ಮಾಜಿ ಅಧ್ಯಕ್ಷ ಕಮ್ಮಾರಗಟ್ಟೆ ಶಿವಕುಮಾರ್, ಸೊಸೈಟಿ ಉಪಾಧ್ಯಕ್ಷ ಕೆ.ಎನ್. ಬಸವರಾಜ್ ಕೂಲಂಬಿ, ಸದಸ್ಯರಾದ ಶೈಲೇಶ್ ಹೊನ್ನಾಳಿ, ಮಂಜುಳಾ ಕೆ.ಜಿ. ತರಗನಹಳ್ಳಿ ಪಿ.ಚಂದ್ರಪ್ಪ ರಾಮೇಶ್ವರ, ಕೆಂಚಪ್ಪ ಬಿ. ಸೂರಗೊಂಡನಕೊಪ್ಪ, ಜಿ.ಎಸ್. ಬಸವನಗೌಡ ಕುಂದೂರು, ಕರಿಬಸಪ್ಪ ಅರಬಗಟ್ಟೆ, ಸತೀಶ್ ಅರುಂಡಿ, ಚನ್ನವೀರಪ್ಪ ದೊಡ್ಡೇತ್ತಿನಹಳ್ಳಿ, ಯಶೋಧಮ್ಮ ಚಿ.ಕಡದಕಟ್ಟೆ, ಕಷ್ಣಾ ನಾಯ್ಕ ವಿಜಯಪುರ, ಚೇತನ್ ಕುಮಾರ್ ನೇರಲಗುಂಡಿ ಹಾಗೂ ಸಾಧು ವೀರಶೈವ ಸಮಾಜ ಮುಖಂಡ ಎಚ್.ಎ. ಗದ್ದಿಗೇಶ್, ಗುರುರಾಜ್ ಗೌಡ, ಸೊಸೈಟಿ ವ್ಯವಸ್ಥಾಪಕ ರುದ್ರೇಶ್ ಹಾಗೂ ಸಿಬ್ಬಂದಿ ಇದ್ದರು.
- - - -13ಎಚ್.ಎಲ್.ಐ1.ಜೆಪಿಜಿ:ಹೊನ್ನಾಳಿ ಪಟ್ಟಣದ ಶಿವ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನೂತನ ಅಧ್ಯಕ್ಷರಾಗಿ ಆರ್.ಸಿ. ಶಂಕರಗೌಡ ಕ್ಯಾಸಿನಕೆರೆ ಅವಿರೋಧ ಆಯ್ಕೆಯಾಗಿದ್ದು, ಮುಖಂಡರು, ಸದಸ್ಯರು, ಸಿಬ್ಬಂದಿ ಅಭಿನಂದಿಸಿದರು.