ಸಾರಾಂಶ
ಮುದ್ದೇಬಿಹಾಳ:ಭಾರತೀಯ ಜ್ಞಾನ ಪರಂಪರೆಯಲ್ಲಿ ಶಂಕರಾಚಾರ್ಯರ ಕೊಡುಗೆ ಅಪಾರವಾಗಿದೆ ಎಂದು ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ರಾಮಚಂದ್ರ ಹೆಗಡೆ ಹೇಳಿದರು. ಪಟ್ಟಣದ ವಿವೇಕಾನಂದ ವಿದ್ಯಾ ಪ್ರಸಾರ ಸಮಿತಿಯ ಅಡಿಯಲ್ಲಿ ನಡೆಯುವ ಜ್ಞಾನ ಭಾರತಿ ವಿದ್ಯಾ ಮಂದಿರ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಆದಿಗುರು ಶಂಕರಾಚಾರ್ಯರ ಜಯಂತ್ಯುತ್ಸವದ ನಿಮಿತ್ತ ಶಂಕರಾಚಾರ್ಯರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಮಾತನಾಡಿದರು.
ಮುದ್ದೇಬಿಹಾಳ:
ಭಾರತೀಯ ಜ್ಞಾನ ಪರಂಪರೆಯಲ್ಲಿ ಶಂಕರಾಚಾರ್ಯರ ಕೊಡುಗೆ ಅಪಾರವಾಗಿದೆ ಎಂದು ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ರಾಮಚಂದ್ರ ಹೆಗಡೆ ಹೇಳಿದರು. ಪಟ್ಟಣದ ವಿವೇಕಾನಂದ ವಿದ್ಯಾ ಪ್ರಸಾರ ಸಮಿತಿಯ ಅಡಿಯಲ್ಲಿ ನಡೆಯುವ ಜ್ಞಾನ ಭಾರತಿ ವಿದ್ಯಾ ಮಂದಿರ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಆದಿಗುರು ಶಂಕರಾಚಾರ್ಯರ ಜಯಂತ್ಯುತ್ಸವದ ನಿಮಿತ್ತ ಶಂಕರಾಚಾರ್ಯರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಮಾತನಾಡಿದರು. ಮನುಷ್ಯ ಜನ್ಮ ಶ್ರೇಷ್ಠವಾದುದು. ನಾವು ನಮ್ಮದೆ ಆದ ಸಾಧನೆಯನ್ನು ಇದೇ ಜನ್ಮದಲ್ಲಿ ಮಾಡಲೇಬೇಕಾಗಿದೆ. ಆತ್ಮ ಸಾಕ್ಷಾತ್ಕಾರಕ್ಕೆ ಸರಿದೂಗುವ ನೆಮ್ಮದಿ ಬೇರೊಂದಿಲ್ಲ. ಶಂಕರರಂತಹ ದಾರ್ಶನಿಕರು ಮನುಕುಲದ ಅಭ್ಯುದಯಕ್ಕೆ ಬೇಕಾಗುವ ವೇದ ಸಾಹಿತ್ಯಗಳನ್ನ ಜೀವನಾನುಭವದ ಮೇರೆಗೆ ನೀಡಿದ್ದಾರೆ. ಅದರ ಸದುಪಯೋಗ ಮಾಡಿಕೊಳ್ಳುವುದು ನಮ್ಮ ಕರ್ತವ್ಯವಾಗಬೇಕು ಎಂದರು.ಶಿಕ್ಷಕ ಮಂಜುನಾಥ ಪಡದಾಳಿ ಶಂಕರಾಚಾರ್ಯರ ಬಾಲ್ಯ, ಜೀವನ ಮತ್ತು ಅದ್ವೈತ ಸಿದ್ಧಾಂತದ ಬಗ್ಗೆ ವಿವರಿಸಿದರು. ಈ ಸಂದರ್ಭದಲ್ಲಿ ಆಂಗ್ಲ ಮಾಧ್ಯಮ ಮುಖ್ಯ ಗುರುಮಾತೆ ರಂಜಿತಾ ಹೆಗಡೆ, ಶಿಕ್ಷಕಿಯರಾದ ಗುರುಬಾಯಿ ತಂಗಡಗಿ, ಶಾಹಿನ ನಾಲತವಾಡ, ಭಾಗ್ಯ ಸಿದ್ದಾಪೂರ ಸೇರಿದಂತೆ ಇತರರು ಹಾಜರಿದ್ದರು.