ಸನಾತನ ಸಂಸ್ಕೃತಿ ಪುನರುತ್ಥಾನಕ್ಕೆ ಶ್ರಮಿಸಿದ ಶಂಕರಾಚಾರ್ಯರು

| Published : May 03 2025, 01:15 AM IST

ಸನಾತನ ಸಂಸ್ಕೃತಿ ಪುನರುತ್ಥಾನಕ್ಕೆ ಶ್ರಮಿಸಿದ ಶಂಕರಾಚಾರ್ಯರು
Share this Article
  • FB
  • TW
  • Linkdin
  • Email

ಸಾರಾಂಶ

ಸನಾತನ ಹಿಂದೂ ಧರ್ಮ ಹಾಗೂ ಸಂಸ್ಕೃತಿಯ ಪುನರುದ್ಧಾರಕ್ಕಾಗಿ ದೇಶಾದ್ಯಂತ ಸಂಚರಿಸಿ ಅರಿವು ಮೂಡಿಸಿ ಮಹಾ ತತ್ವಜ್ಞಾನಿ ಎನಿಸಿಕೊಂಡಿದ್ದಾರೆ ಎಂದು ತಹಸೀಲ್ದಾರ್‌ ಮಹಾದೇವ ಸನಮುರಿ ಹೇಳಿದರು.

ಕನ್ನಡಪ್ರಭ ವಾರ್ತೆ ಮುಧೋಳ

ಸನಾತನ ಹಿಂದೂ ಧರ್ಮ ಹಾಗೂ ಸಂಸ್ಕೃತಿಯ ಪುನರುದ್ಧಾರಕ್ಕಾಗಿ ದೇಶಾದ್ಯಂತ ಸಂಚರಿಸಿ ಅರಿವು ಮೂಡಿಸಿ ಮಹಾ ತತ್ವಜ್ಞಾನಿ ಎನಿಸಿಕೊಂಡಿದ್ದಾರೆ ಎಂದು ತಹಸೀಲ್ದಾರ್‌ ಮಹಾದೇವ ಸನಮುರಿ ಹೇಳಿದರು.

ತಾಲೂಕು ಆಡಳಿತ, ಶಂಕರ ಸೇವಾ ಸಮಿತಿ ಹಾಗೂ ಶಾರದಾ ಭಜನಾ ಮಂಡಳಿಯ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಆದಿ ತಾಲೂಕು ಆಡಳಿತ ಭವನದಲ್ಲಿ ಆಯೋಜಿಸಿದ್ದ ಶಂಕರಾಚಾಯ೯ರ ಜಯಂತಿ ನಿಮಿತ್ತ ಶಂಕರಾಚಾಯ೯ರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

ಇದಕ್ಕೂ ಮೊದಲು ಪಂ.ವಲ್ಲಭ ಕವಠೇಕರ ಹಾಗೂ ಡಾ.ಆನಂದ ಕುಲಕರ್ಣಿ ಅವರ ನೇತೃತ್ವದಲ್ಲಿ ಶಂಕರರ ಸ್ತ್ರೋತ್ರಗಳನ್ನು ಹಾಗೂ ಭಜನೆಗಳನ್ನು ಹಾಡಲಾಯಿತು.

ತಾಲೂಕು ದಂಡಾಧಿಕಾರ ಡಾ.ವೆಂಕಟೇಶ ಮಲಘಾಣ, ರಮೇಶ ವಂಗಿ, ರಂಗನಗೌಡ ನಾಯಿಕ, ಎಂ.ವಿ. ಮಠದ, ಕುತುಗುದ್ದಿನ್‌ ಸಾತ್ರೆಕರ, ಡಿ.ಬಿ. ದೇಶಪಾಂಡೆ, ಸಮಾಜದ ಪ್ರಮುಖರಾದ ಅಶೋಕ ಕುಲಕರ್ಣಿ, ಆನಂದ ಜೇರೆ, ರಾಘವೇಂದ್ರ ಕುಲಕರ್ಣಿ, ಪ್ರಮೋದ ಬಾಜಿ, ಮನೋಹರ ದೇಶಪಾಂಡೆ, ಪ್ರವಿಣ ಬಾಜಿ, ಬಾಲಚಂದ್ರ ಕವಠೇಕರ, ಮೋಹನ ರಿಸಬೂಡ, ವಂದನಾ ಕುಲಕರ್ಣಿ, ಶೋಭಾ ಬಾಜಿ, ವೈ.ವಿ. ಕವಠೇಕರ, ಪ್ರಜ್ಞಾ ಬಾಜಿ ಅನಗಾ ಕುಲಕರ್ಣಿ ಇತರರು ಉಪಸ್ಥಿತರಿದ್ದರು.

ಇಂದು ಮೆರವಣಿಗೆ

ಶಂಕರಾಚಾರ್ಯರ ಜಯಂತಿ ನಿಮಿತ್ತ ನಗರದ ಶ್ರೀ ದತ್ತ ಮಂದಿರದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಪ್ರಾರಂಭವಾಗಿದ್ದು, 3ರಂದು ಸಂಜೆ 5 ಗಂಟೆಗೆ ದತ್ತಾತ್ರೇಯ ದೇವಸ್ಥಾನದಿಂದ ಬೃಹತ್ ಶೋಭಾಯಾತ್ರೆ ನಡೆಯಲಿದೆ ಎಂದು ಶ್ರೀ ಶಂಕರ ಸೇವಾ ಸಮಿತಿ ಹಾಗೂ ಶಾರದಾ ಶಂಕರ ಭಜನಾ ಮಂಡಳದವರು ತಿಳಿಸಿದ್ದಾರೆ. 5ರಂದು ತೊಟ್ಟಿಲೋತ್ಸವ, ಮಂಗಳಾರತಿ ಹಾಗೂ ಮಹಾಪ್ರಸಾದ ಜರುಗಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.