ನಗರದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಜ್ಞಾನ ಸಂಗಮ ಆವರಣದಲ್ಲಿರುವ ಡಾ.ಎ.ಪಿ.ಜಿ.ಅಬ್ದುಲ್‌ಕಲಾಂ ಸಭಾಂಗಣದಲ್ಲಿ ಅರಣ್ಯ ಇಲಾಖೆ ಹಾಗೂ ಚಿತ್ರಕಲಾ ಪರಿಷತ್ ಸಹಕಾರದೊಂದಿಗೆ ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಹಮ್ಮಿಕೊಂಡ ಜಿಲ್ಲಾಮಟ್ಟದ ಚಿತ್ರಕಲಾ ಸ್ಪರ್ಧೆ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ತಾಲೂಕಿನಿಂದ ಬಂದ ವಿದ್ಯಾರ್ಥಿಗಳಿಗೆ ಹಾಗೂ ಪಾಲಕರಿಗೆ ಭೋಜನ ತಯಾರಿಸಿದ್ದ ಶಾಂತಿ ಗ್ರ್ಯಾಂಡ್‌ ಹೋಟೆಲ್‌ನ ಮುಖ್ಯಭಾಣಸಿಗ ರಮೇಶ ಭಟ್ರ ಅವರಿಗೆ ಕನ್ನಡಪ್ರಭ ವತಿಯಿಂದ ಬೆಳಗಾವಿ ಆವೃತ್ತಿಯ ಸ್ಥಾನಿಕ ಸಂಪಾದಕರಾದ ಬ್ರಹ್ಮಾನಂದ ಹಡಗಲಿ, ಬಾಲಾಜಿ ಹಾರ್ಡ್‌ವೇರ್ ಗ್ಯಾಲರಿ ಮಾಲೀಕ ರುದ್ರಣ್ಣ ಚಂದರಗಿ ಸನ್ಮಾನಿಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ನಗರದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಜ್ಞಾನ ಸಂಗಮ ಆವರಣದಲ್ಲಿರುವ ಡಾ.ಎ.ಪಿ.ಜಿ.ಅಬ್ದುಲ್‌ಕಲಾಂ ಸಭಾಂಗಣದಲ್ಲಿ ಅರಣ್ಯ ಇಲಾಖೆ ಹಾಗೂ ಚಿತ್ರಕಲಾ ಪರಿಷತ್ ಸಹಕಾರದೊಂದಿಗೆ ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಹಮ್ಮಿಕೊಂಡ ಜಿಲ್ಲಾಮಟ್ಟದ ಚಿತ್ರಕಲಾ ಸ್ಪರ್ಧೆ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ತಾಲೂಕಿನಿಂದ ಬಂದ ವಿದ್ಯಾರ್ಥಿಗಳಿಗೆ ಹಾಗೂ ಪಾಲಕರಿಗೆ ಭೋಜನ ಸಿದ್ಧಪಡಿಸಿದ್ದ ಶಾಂತಿ ಗ್ರ್ಯಾಂಡ್‌ ಹೋಟೆಲ್‌ನ ಮುಖ್ಯಬಾಣಸಿಗ ರಮೇಶ ಭಟ್ರ ಅವರಿಗೆ ಕನ್ನಡಪ್ರಭ ವತಿಯಿಂದ ಬೆಳಗಾವಿ ಆವೃತ್ತಿಯ ಸ್ಥಾನಿಕ ಸಂಪಾದಕರಾದ ಬ್ರಹ್ಮಾನಂದ ಹಡಗಲಿ, ಬಾಲಾಜಿ ಹಾರ್ಡ್‌ವೇರ್ ಗ್ಯಾಲರಿ ಮಾಲೀಕ ರುದ್ರಣ್ಣ ಚಂದರಗಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ವರದಿಗಾರ ಶ್ರೀಶೈಲ ಮಠದ, ಶಾಂತಿ ಗ್ರ್ಯಾಂಡ್‌ ಹೋಟೆಲ್‌ ಮಾಲೀಕರಾದ ಸುರೇಶ ಶೆಟ್ಟಿ, ಮ್ಯಾನೇಜರ್‌ರಾದ ದಿನಕರ ಶೆಟ್ಟಿ, ರಮೇಶಗೌಡ, ಸುಕುಮಾರ ಶೆಟ್ಟಿ ಸೇರಿದಂತೆ ಹೋಟೆಲ್‌ ಸಿಬ್ಬಂದಿ ಉಪಸ್ಥಿತರಿದ್ದರು.

ಅಡುಗೆ ಮಾಡುವುದೆಂದರೇ ಕೇವಲ ಹಿಟ್ಟು ರುಬ್ಬಿ, ತರಕಾರಿ ಕಟ್‌ ಮಾಡಿ ಸಾಂಬಾರ ಪುಡಿ ಹಾಕಿ ಘಮ್‌ ಅನಿಸುವುದಲ್ಲ. ರುಚಿಗೆ ತಕ್ಕ ಉಪ್ಪು, ಕಾರ ಹಾಕಿ ಅಡುಗೆ ಮಾಡಿದರೇ ಸಾಲದು, ಮಾಡುವ ಅಡುಗೆಯಲ್ಲಿ ಪ್ರೀತಿಯ ಕೈರುಚಿ ತೋರಿಸಿದರೇ ಮಾತ್ರ ತಿನ್ನುವ ಅಡುಗೆಯೆಲ್ಲವೂ ಅಮೃತಕ್ಕೆ ಸಮನಾಗುವುದು. ಅಡುಗೆ ರುಚಿ ಉಂಡವರು ಖುಷಿಯಿಂದ ಅಡುಗೆ ಚೆನ್ನಾಗಿದೆಂದರೇ ಸಾಕು ಶ್ರಮವಹಿಸಿ ಮಾಡಿದ್ದಕ್ಕೆ ಬೆಲೆಯೂ ಬರುತ್ತದೆ, ಮನಸಿಗೆ ಖುಷಿಯೂ ಹೆಚ್ಚಾಗುತ್ತದೆ.

-ರಮೇಶ ಭಟ್ರ, ಶಾಂತಿ ಗ್ರ್ಯಾಂಡ್‌ ಹೋಟೆಲ್‌ನ ಮುಖ್ಯಬಾಣಸಿಗ.