ಸಮಾಜದಲ್ಲಿ ಶರಣರ ನುಡಿಗಳನ್ನು ಬಿತ್ತುವ ಕಾರ್ಯವಾಗಲಿ: ಡಾ. ನೀಲಗಿರಿ

| Published : Aug 22 2024, 12:48 AM IST

ಸಾರಾಂಶ

ಮನುಷ್ಯನ ಮನಃಶುದ್ಧಿಗಾಗಿ ಸಮಾನ ಮನಸ್ಕರು ಒಂದೆಡೆ ಸೇರಿ ಸತ್ಸಂಗ ಬಳಗವನ್ನಾಗಿಸಿಕೊಂಡು ಸಮಾಜದ ಹಿತ ಚಿಂತನೆ ಅರಿಯುವುದೇ ಶಿವಾನುಭವ ಗೋಷ್ಠಿಯಾಗಿದೆ ಸಾಹಿತಿ ಡಾ. ನೀಲಗಿರಿ ತಳವಾರ ಹೇಳಿದರು.

ಲಕ್ಷ್ಮೇಶ್ವರ: ಸಮೀಪದ ಶಿಗ್ಲಿ ಗ್ರಾಮದಲ್ಲಿ ಸೋಮವಾರ ನೂಲು ಹುಣ್ಣಿಮೆ ನಿಮಿತ್ತ ೩೪೦ನೇ ಶಿವಾನುಭವಗೋಷ್ಠಿ ಹಾಗೂ ಸೇವಾ ಮಂದಿರದ ಬಸವಕುಮಾರ ಮುಳಗುಂದಮಠ ಅಜ್ಜನವರ ೨೮ನೇ ಪುಣ್ಯಾರಾಧನೆ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಬಸವಕುಮಾರ ಅಜ್ಜನವರ ಗದ್ದುಗೆಗೆ ಪೂಜೆ, ಪ್ರವಚನ, ಪ್ರಾರ್ಥನೆ, ವಚನಗಾಯನ, ನಂತರ ಪ್ರಸಾದ ವಿನಿಮಯ ನಡೆಯಿತು.

ಈ ವೇಳೆ ಸಾಹಿತಿ ಡಾ. ನೀಲಗಿರಿ ತಳವಾರ ಮಾತನಾಡಿ, ಮನುಷ್ಯ ದೇಹ ಶುದ್ಧಿಗಾಗಿ ವಿವಿಧ ಸೋಪು, ಶ್ಯಾಂಪೂ ಉಪಯೋಗಿಸಿ ನಮ್ಮ ಮೈ ತೊಳೆದುಕೊಳ್ಳುತ್ತೇವೆ. ಆದರೆ, ಮನಸ್ಸು ಪ್ರತಿ ಕ್ಷಣ ಮೈಲಿಗೆಯಾಗುತ್ತದೆ. ಹಾಗಾಗಿ ಮನುಷ್ಯನ ಮನಃಶುದ್ಧಿಗಾಗಿ ಸಮಾನ ಮನಸ್ಕರು ಒಂದೆಡೆ ಸೇರಿ ಸತ್ಸಂಗ ಬಳಗವನ್ನಾಗಿಸಿಕೊಂಡು ಸಮಾಜದ ಹಿತ ಚಿಂತನೆ ಅರಿಯುವುದೇ ಶಿವಾನುಭವ ಗೋಷ್ಠಿಯಾಗಿದೆ ಎಂದರು.

ಇಷ್ಟಲಿಂಗ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸೋಮಣ್ಣ ಡಾಣಗಲ್ಲ ಅಧ್ಯಕ್ಷತೆ ವಹಿಸಿದ್ದರು. ಎನ್‌.ಎ. ಮುಳಗುಂದಮಠ, ಎಸ್.ಪಿ. ಬಳಿಗಾರ, ಕಸ್ತೂರಮ್ಮ ಹಿರೇಮಠ, ರತ್ನಮ್ಮ ಆರ್.ಎಚ್., ಶಿವಯೂಗಿ ಎಂ., ಈರಣ್ಣ ಎಂ., ಕಲ್ಲೇಶಪ್ಪ ಮನಗೂಳಿ, ಶಂಕ್ರಪ್ಪ ರಜಪೂತ, ಬೈರಪ್ಪ ಕೋರ್ಪಡೆ, ಸೋಮಣ್ಣ ರಿತ್ತಿ, ಈರಣ್ಣ ಗಂಜಿ, ಪದ್ಮರಾಜ ಪಾಟೀಲ, ರಾಮನಗೌಡ ಪಿ., ಲಕ್ಷ್ಮಣ ಮೆಳ್ಳಿಗಟ್ಟಿ, ಗುರಪ್ಪ ಪಶುಪತಿಹಾಳ, ಸತ್ಯಪ್ಪ ಡಂಬಳ, ಸಿ.ಆ‌ರ್. ಗೋಕಾವಿ, ಆರ್.ಎಂ. ಹೊನಕೇರಿ, ವೀರಣ್ಣ ಪವಾಡದ .ಶಿವಣ್ಣ ಕೆಸರಳ್ಳಿ, ಬಸಣ್ಣ ಹಂಜಿ, ಜಿ.ಎ. ನವಲಗುಂದ, ಕೃಷ್ಣಾ ಬಿದರಹಳ್ಳಿ. ಡಾ. ವಿ.ಬಿ. ಮೇಲ್ಮರಿ, ಡಾ. ವಿನೋದ ಹೊನ್ನಿಕೊಪ್ಪ, ಶಿವಗಿರಪ್ಪ ಹಲಗೂರು, ಈರಣ್ಣ ಭಂಡಾರಿ ಇದ್ದರು.