ಸಂಪ್ರದಾಯಗಳು ಭಾರತೀಯ ಸಂಸ್ಕೃತಿಯ ತಾಯಿ ಬೇರು

| Published : Jan 16 2025, 12:50 AM IST

ಸಂಪ್ರದಾಯಗಳು ಭಾರತೀಯ ಸಂಸ್ಕೃತಿಯ ತಾಯಿ ಬೇರು
Share this Article
  • FB
  • TW
  • Linkdin
  • Email

ಸಾರಾಂಶ

ಹೊಸಮನೆ ಅಲಮೇಲಮ್ಮ ರಾಮಸ್ವಾಮಿ ಅಯ್ಯಂಗಾರ್ ಹಾಗೂ ಎಂ.ಕೆ. ವೆಂಕಟೇಶಯ್ಯ ಸ್ಮರಣಾರ್ಥ ಹರಿವಿದ್ಯಾಲಯದಲ್ಲಿ ನಡೆದ ವಾರ್ಷಿಕ ಸಂಗೀತ ಸಮಾರಂಭ

ಕನ್ನಡಪ್ರಭ ವಾರ್ತೆ ಮೈಸೂರುಶಾಸ್ತ್ರಿಯ ಸಂಗೀತ, ಹಸುಗಳನ್ನು ಕಿಚ್ಚು ಹಾಯಿಸುವುದು, ಎಳ್ಳು ಬೆಲ್ಲ ವಿನಿಮಯ, ಮಣ್ಣಿನ ಅಲಂಕೃತ ಒಲೆಯ ಮೇಲೆ ಮಡಿಕೆಯನ್ನಿಟ್ಟು ಪೊಂಗಲ್ ತಯಾರಿಸುವುದು ಮೊದಲಾದವು ನಮ್ಮ ಭಾರತೀಯ ಸಂಸ್ಕೃತಿಯ ತಾಯಿಬೇರು. ಈ ಎಲ್ಲವನ್ನೂ ಮಕ್ಕಳ ಮೂಲಕ ಮಾಡಿಸುವ ಹರಿ ವಿದ್ಯಾಲಯದ ಧ್ಯೇಯ ಪ್ರಶಂಸಾರ್ಹ ಎಂದು ಸಂಗೀತ ವಿಮರ್ಶಕಿ ರಮಾ ವಿ. ಬೆಣ್ಣೂರ್ ನುಡಿದರು.ಹೊಸಮನೆ ಅಲಮೇಲಮ್ಮ ರಾಮಸ್ವಾಮಿ ಅಯ್ಯಂಗಾರ್ ಹಾಗೂ ಎಂ.ಕೆ. ವೆಂಕಟೇಶಯ್ಯ ಸ್ಮರಣಾರ್ಥ ಹರಿವಿದ್ಯಾಲಯದಲ್ಲಿ ನಡೆದ ವಾರ್ಷಿಕ ಸಂಗೀತ ಸಮಾರಂಭಕ್ಕೂ ವಿದ್ಯಾರ್ಥಿಗಳು ಹಾಗು ಸಾರ್ವಜನಿಕರು ಸಾಕ್ಷಿಯಾದರು. ಜಿ.ಕೆ. ಮನಮೋಹನ್ ಅವರು ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರೆ ಅವರಿಗೆ ಪಕ್ಕವಾದ್ಯದಲ್ಲಿ ಪಿಟೀಲು ಕೇಶವ ಮೋಹನಕುಮಾರ್, ಮೃದಂಗ ಅನಿರುಧ್ಧ ಎಸ್. ಭಟ್ ಅವರು ಸಹಕರಿಸಿದರು. ಪೊಂಗಲನ್ನು ಆಸ್ವಾದಿಸುವುದರೊಂದಿಗೆ ಕಾರ್ಯಕ್ರಮ ಮುಕ್ತಾಯವಾಹಿತು.ಸಂಸ್ಥೆ ಅಧ್ಯಕ್ಷ ಶ್ರೀನಿವಾಸ ಹೊಸಮನೆ, ಕಾರ್ಯದರ್ಶಿ ಎಚ್.ಆರ್. ಭಗವಾನ್, ಶೈಕ್ಷಣಿಕ ನಿರ್ದೇಶಕ ಕೆ.ವಿ. ಸತ್ಯನ್ ಹಾಗೂ ಸಂಸ್ಥೆ ಸಿಬ್ಬಂದಿ ಇದ್ದರು.