ನರಸಿಂಹರಾಜಪುರರಾಜ್ಯದ ಪೂರ್ವ, ಪಶ್ಚಿಮ, ದಕ್ಷಿಣ, ಉತ್ತರ ರಾಜ್ಯಗಳಿಂದ ಎಲ್ಲಾ ಭಾಷಿಗರು ನಮ್ಮ ರಾಜ್ಯಕ್ಕೆ ಬಂದಿದ್ದಾರೆ. ಬಂದ ಎಲ್ಲಾ ಭಾಷಿಗರಿಗೂ ವಿಶಾಲ ಹೃದಯದ ಕನ್ನಡಗರು ಆಶ್ರಯ ನೀಡಿದ್ದಾರೆ ಎಂದು ಸಿಂಹನಗದ್ದೆ ಬಸ್ತಿಮಠದ ಶ್ರೀ ಲಕ್ಷ್ಮೀಸೇಭಟ್ಟಾರಕ ಸ್ವಾಮೀಜಿ ತಿಳಿಸಿದರು.
- ಜೈ ಭುವನೇಶ್ವರಿ ಆಟೋ ಚಾಲಕರು ಹಾಗೂ ಮಾಲೀಕರ ಸಂಘದಿಂದ ಕನ್ನಡ ರಾಜ್ಯೋತ್ಸವ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರರಾಜ್ಯದ ಪೂರ್ವ, ಪಶ್ಚಿಮ, ದಕ್ಷಿಣ, ಉತ್ತರ ರಾಜ್ಯಗಳಿಂದ ಎಲ್ಲಾ ಭಾಷಿಗರು ನಮ್ಮ ರಾಜ್ಯಕ್ಕೆ ಬಂದಿದ್ದಾರೆ. ಬಂದ ಎಲ್ಲಾ ಭಾಷಿಗರಿಗೂ ವಿಶಾಲ ಹೃದಯದ ಕನ್ನಡಗರು ಆಶ್ರಯ ನೀಡಿದ್ದಾರೆ ಎಂದು ಸಿಂಹನಗದ್ದೆ ಬಸ್ತಿಮಠದ ಶ್ರೀ ಲಕ್ಷ್ಮೀಸೇಭಟ್ಟಾರಕ ಸ್ವಾಮೀಜಿ ತಿಳಿಸಿದರು.
ಸೋಮವಾರ ರಾತ್ರಿ ಬಸ್ಸು ನಿಲ್ದಾಣದ ಆವರಣದಲ್ಲಿ ಜೈ ಭುವನೇಶ್ವರಿ ಆಟೋ ಚಾಲಕರ ಹಾಗೂ ಮಾಲೀಕರ ಸಂಘದಿಂದ ನಡೆದ 70 ನೇ ಕನ್ನಡ ರಾಜ್ಯೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ನಮ್ಮ ಅಕ್ಕ ಪಕ್ಕದ ರಾಜ್ಯಗಳ ಭಾಷೆ ಗಳಿಗೆ ಶಾಸ್ತ್ರೀಯ ಸ್ಥಾನ ಮಾನ ಬಂದಿದೆ. ಆದರೆ, ಕರ್ನಾಟಕಕ್ಕೆ ಇನ್ನೂ ಸಂಪೂರ್ಣವಾಗಿ ಶಾಸ್ತ್ರೀಯ ಸ್ಥಾನಮಾನ ಬಂದಿಲ್ಲ. ನವಂಬರ್ 1 ರಂದು ಮಾತ್ರ ಕನ್ನಡ ಭಾಷೆಯನ್ನು ನೆನೆಯುವುದಲ್ಲ. ಪ್ರತಿ ದಿನವೂ ಕನ್ನಡ ಭಾಷೆಯಲ್ಲೇ ಮಾತನಾಡ ಬೇಕು. ಕನ್ನಡ ಭಾಷೆಯನ್ನು ಲಿಪಿಗಳ ರಾಣಿ ಎಂದು ಕರೆಯುತ್ತಾರೆ. ಆಟೋ ರಿಕ್ಷಾದವರು ಪ್ರತಿ ವರ್ಷ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಆಟೋ ಓಡಿಸುವ ವೃತ್ತಿಯಿಂದ ಸಾವಿರಾರು ಜನರಿಗೆ ಉದ್ಯೋಗ ಸೃಷ್ಠಿಯಾಗಿದೆ. ಆಟೋ ರಿಕ್ಷಾ ಎಂದರೆ ಭಕ್ತರನ್ನು ಹೊತ್ತು ತರುವ ತೇರಿನಂತೆ ಕಾಣುತ್ತದೆ. ರಸ್ತೆ ಹಾಳಾಗಿರುವುದರಿಂದ ಆಟೋ ರಿಕ್ಷಾ ಸೇರಿದಂತೆ ಎಲ್ಲಾ ವಾಹನಗಳು ಹಾಳಾಗುತ್ತಿದೆ. ಜನ ಪ್ರತಿನಿಧಿಗಳು ಗಮನ ಹರಿಸಬೇಕು. ಸರ್ಕಾರ ಕಾರ್ಮಿಕರಿಗೆ ಕೊಟ್ಟ ಸೌಲಭ್ಯದ ರೀತಿಯಲ್ಲಿ ಆಟೋದವರಿಗೆ ನೀಡಬೇಕು ಎಂದು ಒತ್ತಾಯಿಸಿದರು.ಮುಖ್ಯ ಅತಿಥಿಯಾಗಿದ್ದ ಮಾಜಿ ಸಚಿವ ಡಿ.ಎನ್.ಜೀವರಾಜ್ ಮಾತನಾಡಿ, ನಾನು ಸಚಿವನಾಗಿದ್ದಾಗ ಕೊಪ್ಪದಲ್ಲಿ ಮೊದಲ ಆಟೋ ನಿಲ್ದಾಣ ಮಾಡಿಸಿಕೊಟ್ಟಿದ್ದೆ. ಕಾಫಿ ತೋಟದ ಕಾರ್ಮಿಕರಿಗೆ ಹಾಗೂ ಆಟೋ ಚಾಲಕರಿಗೆ ಬಿಪಿಎಲ್ ಕಾರ್ಡು ಕೊಡಿಸಿದ್ದೆ. ಇದಕ್ಕಾಗಿ ಸರ್ಕಾರದ ಮಟ್ಟದಲ್ಲಿ ಪ್ರಯತ್ನಪಟ್ಟು ಕಾನೂನಿನ ಚೌಕಟ್ಟಿನ ಒಳಗೆ ಬಿಪಿಎಲ್ ಕಾರ್ಡು ನೀಡಲು ಪ್ರಯತ್ನ ಪಟ್ಟು ಯಶಸ್ಸು ಕಂಡಿದ್ದೇನೆ. ಸೂರ್ಯ ಹುಟ್ಟುವ ಮುಂಚೆ ಹಾಗೂ ಸೂರ್ಯ ಮುಳುಗಿದ ನಂತರವೂ ಆಟೋ ದವರು ತಮ್ಮ ಕರ್ತವ್ಯ ಮಾಡುತ್ತಾರೆ. ಜೊತೆಗೆ ಆಟೋ ಚಾಲಕರು ಸಮಾಜ ಸೇವೆಯೂ ಮಾಡುತ್ತಾರೆ. ಯಾವುದೇ ಸರ್ಕಾರ ಬಂದರೂ ಮೊದಲು ಶಿಕ್ಷಣ, ಆರೋಗ್ಯದ ಜೊತೆಗೆ ರಸ್ತೆಯ ಕಡೆಗೂ ಗಮನ ನೀಡಬೇಕು. ರಾಜ್ಯ ಪ್ರವಾಸೋದ್ಯಮ ಅಭಿವೃದ್ದಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ಪಟ್ಟಣದ ರಸ್ತೆ ಅಗಲೀಕರಣಕ್ಕೆ ಗಮನ ಹರಿಸಿ ₹60 ಕೋಟಿ ಮಂಜೂರು ಮಾಡಿಸಿಕೊಂಡು ಬಂದಿದ್ದಾರೆ. ಅವರನ್ನು ಅಭಿನಂದಿಸುತ್ತೇನೆ ಎಂದರು.
ಇದೇ ಸಂದರ್ಭದಲ್ಲಿ ನಾಟೀ ವೈದ್ಯ ಡಾ.ಎಚ್.ಸಿ.ಈಶ್ವರನಾಯಕ್ ಅವರನ್ನು ಸನ್ಮಾನಿಸಲಾಯಿತು. ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಆಟೋ ಚಾಲಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಸಭೆ ಅಧ್ಯಕ್ಷತೆಯನ್ನು ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ವಿ. ಮಧುಸೂದನ್ ವಹಿಸಿದ್ದರು. ಅತಿಥಿಗಲಾಗಿ ಲಯನ್ಸ್ ಕ್ಲಬ್ ಅಧ್ಯಕ್ಷ ಪಿ.ಜೆ.ಆಂಟೋನಿ, ರೋಟರಿ ಕ್ಲಬ್ ಅಧ್ಯಕ್ಷ ಕಣಿವೆ ವಿನಯ್, ಪಪಂ ಮಾಜಿ ಅಧ್ಯಕ್ಷ ಆಶೀಶ್ ಕುಮಾರ್,ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತಶೆಟ್ಟಿ, ಪಪಂ ಅಧ್ಯಕ್ಷೆ ಜುಬೇದ, ತಾ.ಪಂಚಾಯಿತಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಎನ್.ಎಂ.ನಾಗೇಶ್,ಆಟೋ ಸಂಘದ ಗೌರವಾಧ್ಯಕ್ಷ ಕೆ.ಅಣ್ಣಪ್ಪ, ಆಟೋ ಸಂಘದ ಶೃಂಗೇರಿ ಕ್ಷೇತ್ರ ಸಮಿತಿ ಗೌರವಾಧ್ಯಕ್ಷ ಎಚ್.ಆರ್.ಜಗದೀಶ್, ಕ್ಷೇತ್ರ ಸಮಿತಿ ಅಧ್ಯಕ್ಷ ವಿಜೇಂದ್ರ, ಕೊಪ್ಪ, ಬಾಳೆಹೊನ್ನೂರು, ಕುದುರೆ ಗಂಡಿ, ಬಿ.ಎಚ್.ಕೈಮರದ ಆಟೋ ಚಾಲಕರ ಸಂಘದ ಅಧ್ಯಕ್ಷರುಗಳು ಇದ್ದರು. ನಿರಂಜನಗೌಡ ಸ್ವಾಗತಿಸಿದರು. ನಂದಿನಿ ಆಲಂದೂರು ಕಾರ್ಯಕ್ರಮ ನಿರೂಪಿಸಿದರು.ನಂತರ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಆರ್ಕೆಸ್ಟ್ರಾ ಕಾರ್ಯಕ್ರಮ ನಡೆಯಿತು. ವಿಶೇಷ ಆಕರ್ಷಣೆಯಾಗಿ ಖ್ಯಾತ ಕಲಾವಿದ ಜೂನಿಯರ್ ರವಿಚಂದ್ರನ್, ರೂಪ, ಪ್ರಕಾಶ್, ಎಂ.ಯಶವಂತ್, ನಾದಿರಾ ಭಾನು ಪಾಲ್ಗೊಂಡಿದ್ದರು.