ಶಿವಮೊಗ್ಗ- ಹೊಸಪೇಟೆ ಬೈಪಾಸ್ ಹರಿಹರ ಹೊರವಲಯದಲ್ಲೇ ನಿರ್ಮಿಸಲಿ

| Published : Sep 26 2024, 09:48 AM IST / Updated: Sep 26 2024, 09:49 AM IST

ಶಿವಮೊಗ್ಗ- ಹೊಸಪೇಟೆ ಬೈಪಾಸ್ ಹರಿಹರ ಹೊರವಲಯದಲ್ಲೇ ನಿರ್ಮಿಸಲಿ
Share this Article
  • FB
  • TW
  • Linkdin
  • Email

ಸಾರಾಂಶ

ಹರಿಹರ ನಗರದೊಳಗೆ ಹಾದುಹೋಗಿರುವ ಶಿವಮೊಗ್ಗ ಮತ್ತು ಹೊಸಪೇಟೆ ಹೆದ್ದಾರಿ ಅಭಿವೃದ್ಧಿ ಚರ್ಚೆಗಳು ನಡೆದಿವೆ. ರಸ್ತೆ ಅಭಿವೃದ್ಧಿ ಬದಲು ಛೇಂಬರ್ ಆಫ್ ಕಾಮರ್ಸ್‍ನಿಂದ ನಗರದ ಹೊರವಲಯದಲ್ಲಿ ಬೈಪಾಸ್ ರಸ್ತೆ ನಿರ್ಮಿಸಲು ಒತ್ತಡ ಹೇರಲಾಗುತ್ತಿದೆ ಎಂದು ಹರಿಹರ ಛೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ ಮರ್ಚೆಂಟ್ಸ್‌ ವೆಲ್‍ಫೇರ್ ಅಸೋಸಿಯೇಷನ್ ಅಧ್ಯಕ್ಷ ಶಂಕರ್ ಖಟಾವ್‍ಕರ್ ಹರಿಹರದಲ್ಲಿ ಹೇಳಿದ್ದಾರೆ.

- ವಾಣಿಜ್ಯ, ನಾಗರಿಕರ ಹಿತದೃಷ್ಠಿಯಿಂದ ಸಂಸದರಿಗೂ ಮನವಿ: ಶಂಕರ ಖಟಾವಕರ್‌ ಹೇಳಿಕೆ- - - ಕನ್ನಡಪ್ರಭ ವಾರ್ತೆ ಹರಿಹರ ನಗರದೊಳಗೆ ಹಾದುಹೋಗಿರುವ ಶಿವಮೊಗ್ಗ ಮತ್ತು ಹೊಸಪೇಟೆ ಹೆದ್ದಾರಿ ಅಭಿವೃದ್ಧಿ ಚರ್ಚೆಗಳು ನಡೆದಿವೆ. ರಸ್ತೆ ಅಭಿವೃದ್ಧಿ ಬದಲು ಛೇಂಬರ್ ಆಫ್ ಕಾಮರ್ಸ್‍ನಿಂದ ನಗರದ ಹೊರವಲಯದಲ್ಲಿ ಬೈಪಾಸ್ ರಸ್ತೆ ನಿರ್ಮಿಸಲು ಒತ್ತಡ ಹೇರಲಾಗುತ್ತಿದೆ ಎಂದು ಹರಿಹರ ಛೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ ಮರ್ಚೆಂಟ್ಸ್‌ ವೆಲ್‍ಫೇರ್ ಅಸೋಸಿಯೇಷನ್ ಅಧ್ಯಕ್ಷ ಶಂಕರ್ ಖಟಾವ್‍ಕರ್ ಹೇಳಿದರು.

ಸಂಘದ ಕಚೇರಿಯಲ್ಲಿ ನಡೆದ ವಾರ್ಷಿಕ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ನಗರ ಮಧ್ಯೆ ಹಾದುಹೋಗಿರುವ ಶಿವಮೊಗ್ಗ- ಹೊಸಪೇಟೆ ರಸ್ತೆಯನ್ನು ಅಭಿವೃದ್ಧಿಪಡಿಸಲು ಈಗಾಗಲೇ ಅಧಿಕಾರಿಗಳು ಹಾಗೂ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಚರ್ಚಿಸಿದ್ದಾರೆ ಎಂದರು.

ನಗರದ ನಡುವೆ ರಸ್ತೆ ಇದೆ. ಅಭಿವೃದ್ಧಿ ಕಾರ್ಯದಿಂದ ರಸ್ತೆ ಅಕ್ಕಪಕ್ಕದ ವರ್ತಕರ ಮಳಿಗೆಗಳನ್ನು ತೆರವುಗೊಳಿಸಲಾಗುತ್ತದೆ. ಅಲ್ಲದೇ, ವಿಪರೀತ ವಾಹನಗಳ ಸಂಚಾರದಿಂದ ವರ್ತಕರಿಗೆ, ಗ್ರಾಹಕರಿಗೆ, ಸ್ಥಳೀಯರಿಗೆ ಹಾಗೂ ಇದೇ ರಸ್ತೆಯಲ್ಲಿ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತದೆ. ಆದಕಾರಣ ಸಂಸ್ಥೆ ವತಿಯಿಂದ ಬೈಪಾಸ್ ರಸ್ತೆ ನಿರ್ಮಿಸಬೇಕೆಂದು ಸಂಸದರಿಗೆ ಮನವಿ ಮಾಡಲಾಗಿದೆ ಎಂದು ವಿವರಿಸಿದರು.

ಜನಸಂಖ್ಯೆಗೆ ಅನುಗುಣವಾಗಿ ನಗರದ ಅಭಿವೃದ್ಧಿ ಆಗುತ್ತಿಲ್ಲ. ವ್ಯಾಪಾರ ಕೇಂದ್ರವಾಗಿ ಹೊರಹೊಮ್ಮತ್ತಿಲ್ಲ. ವಿಶಾಲವಾದ ಎಪಿಎಂಸಿ ಮಾರುಕಟ್ಟೆ ಇದ್ದರೂ, ರೈತರು ಅಕ್ಕಪಕ್ಕದ ದಾವಣಗೆರೆ ರಾಣೇಬೆನ್ನೂರು ಎಪಿಎಂಸಿಗೆ ಕೃಷಿ ಉತ್ಪನ್ನ ಸಾಗಿಸಬೇಕಾಗಿದೆ. ವಾರದ ಸಂತೆಯನ್ನು ಎಪಿಎಂಸಿ ಪ್ರಾಂಗಣಕ್ಕೆ ಸ್ಥಳಾಂತರಿಸಲು ಬೇಡಿಕೆಯಿದ್ದರೂ ಅದು ಆಗುತ್ತಿಲ್ಲ ಎಂದರು.

ಹರಿಹರ ರೈಲ್ವೆ ನಿಲ್ದಾಣಕ್ಕೆ ಬರುವ ರೈಲುಗಳನ್ನು 3ನೇ ಪ್ಲಾಟ್‍ಫಾರ್ಮ್‍ನಲ್ಲಿ ನಿಲುಗಡೆ ಮಾಡುತ್ತಿದೆ. ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. 1ನೇ ಪ್ಲಾಟ್‍ಫಾರನಲ್ಲಿ ನಿಲ್ಲಿಸುವಂತೆ ಛೇಂಬರ್ ಆಫ್ ಕಾಮರ್ಸ್‍ನಿಂದ ರೈಲ್ವೆ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದರು.

ಪ್ರಧಾನ ಕಾರ್ಯದರ್ಶಿ ಎಚ್. ಬಸವರಾಜಪ್ಪ ಹಲಸುಬಾಳು, ಉಪಾಧ್ಯಕ್ಷ ಎಚ್.ಪಿ. ಬಾಬಣ್ಣ, ವರ್ತಕರಾದ ಪಾಲಾಕ್ಷಪ್ಪ, ಜಿ.ಕೆ. ಮಲ್ಲಿಕಾರ್ಜುನ್, ಟಿ.ಜೆ. ಮುರುಗೇಶಪ್ಪ, ಕಾಳಪ್ಪ ಬೊಂಗಾಳೆ. ಮಲ್ಲಿಕಾರ್ಜುನ್ ಬಿಳೇಬಾಳ, ಎಂ. ಶಿವಾನಂದಪ್ಪ, ಮಹಮ್ಮದ್ ಹಯಾತ್ ಸಾಬ್. ಬಿ.ಕೆ. ಅನ್ವರ್ ಪಾಷಾ, ಬಿ.ಎಂ. ನಾಗರಾಜ್ ನೆಲ್ಲೂರ್, ಅಂದನೂರು ಕೊಟ್ರೇಶ್, ಪರಶುರಾಮ್ ಕಾಟ್ವೆ, ಮಾಲತೇಶ ಭಂಡಾರಿ, ಗೋಪಾಲ ದುರುಗೋಜಿ, ಅಮರಾವತಿ ರೇವಣಸಿದ್ದಪ್ಪ, ಹಮ್ಮಿಗಿ ನಾಗೇಂದ್ರ ಶೆಟ್ರು, ಶಿವಪ್ರಕಾಶ್ ಶಾಸ್ತ್ರಿ, ಎಚ್.ಎಸ್. ಶ್ರೀಧರ್, ಮಂಜುನಾಥ್ ವಿ.ಪಾಟೀಲ್ ಇತರರು ಉಪಸ್ಥಿತರಿದ್ದರು.

- - - -22ಎಚ್‍ಆರ್‍ಆರ್3:

ಹರಿಹರದ ಛೇಂಬರ್ ಆಫ್ ಕಾಮರ್ಸ್‌ ವಾರ್ಷಿಕ ಸಭೆಯಲ್ಲಿ ಅಧ್ಯಕ್ಷ ಶಂಕರ್ ಖಟಾವ್‍ಕರ್ ಮಾತನಾಡಿದರು.