ಸಾರಾಂಶ
ಶಿರಶ್ಯಾಡ ಸಂಸ್ಥಾನ ಹಿರೇಮಠದ ಜಾತ್ರೆ ಆರಂಭ
ತಾಂಬಾ: ಶ್ರೀ ಅಭೀನವ ಮುರುಘೇಂದ್ರ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಶಿರಶ್ಯಾಡ ಸಂಸ್ಥಾನ ಹಿರೇಮಠದ ಲಿಂ.ಮುರುಘೇಂದ್ರ ಶಿವಾಚಾರ್ಯರ ಪುಣ್ಯ ಸ್ಮರಣೋತ್ಸವ (ಜಾತ್ರಾ ಮಹೋತ್ಸವ) ಗುರುವಾರ ಆರಂಭವಾಗಿದ್ದು, ಸಾಮೂಹಿಕ ವಿವಾಹ ಸೇರಿದಂತೆ ಡಿ.17ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಗುರುವಾರ ಬೆಳಗ್ಗೆ 9ಗಂಟೆಗೆ ರಕ್ತದಾನ ಶಿಬಿರ ಹಾಗೂ ಉಚಿತ ನೇತ್ರ ತಪಾಸಣೆ ಮತ್ತು ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಡಿ.15ರಂದು ಬೆಳಗ್ಗೆ 10ಗಂಟೆಗೆ ಮುತ್ತೈದೆಯರಿಗೆ ಉಡಿತುಂಬುವ ಕಾರ್ಯಕ್ರಮ, ಡಿ.16ರಂದು ಬೆಳಗ್ಗೆ 10ಗಂಟೆಗೆ ಬಾಲ ಮುತ್ತೈದೆಯರಿಗೆ ಉಡಿತುಂಬುವ ಕಾರ್ಯಕ್ರಮ. ರಾತ್ರಿ 10 ಗಂಟೆಗೆ ಜಾಗರಣೆ ಅಂಗವಾಗಿ ಶಿರಶ್ಯಾಡ, ಸಂಗೋಗಿ, ಹಿರೇಮಸಳಿ, ತೆಗ್ಗಿಹಳ್ಳಿ, ಮಾರಸನಹಳ್ಳಿ, ಗುಡ್ಡಳ್ಳಿ, ಗೊರನಾಳ ಗ್ರಾಮದ ಭಕ್ತರಿಂದ ಶಿವಭಜನೆ ಜರುಗಲಿದೆ. ಡಿ.17ರಂದು ಬೆಳಗ್ಗೆ ಕರ್ತೃಗದ್ದುಗೆಗೆ ಮಾಹಾರುದ್ರಾಭೀಷೇಕ ಹಾಗೂ ಲಿಂಗದೀಕ್ಷೆ, ಅಯ್ಯಾಚಾರ, ಬೆಳಗ್ಗೆ 8 ಗಂಟೆಗೆ ಕುಂಭ, ಕಲಶ, ಸಕಲ ವಾದ್ಯಮೇಳದೊಂದಿಗೆ ಗ್ರಾಮದಲ್ಲಿ ಲಿಂ.ಶ್ರೀ ಮುರಘೇಂದ್ರ ಶಿವಾಚಾರ್ಯರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಲಿದೆ. ನಂತರ 12.30ಕ್ಕೆ ಸರಳ ಸಾಮೂಹಿಕ ವಿವಾಹ ಮಹೋತ್ಸವ ಹಾಗೂ ಧರ್ಮಸಭೆ ಜರುಗಲಿದೆ ಎಂದು ಶ್ರೀ ಅಭೀನವ ಮುರುಘೇಂದ್ರ ಶಿವಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಪೋಟೊ ಪೈಲ್: ಶ್ರೀ ಅಭಿನವ ಮುರುಘೇಂದ್ರ ಶಿವಾಚಾರ್ಯರ ಭಾವಚಿತ್ರ.