ಸಾರಾಂಶ
ಭಾವಿ ಪರ್ಯಾಯ ಶಿರೂರು ಮಠದ ಪೀಠಾಧಿಪತಿ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಪರ್ಯಾಯ ಪೂರ್ವಭಾವಿಯಾಗಿ ಪುಣ್ಯ ಕ್ಷೇತ್ರ ಸಂದರ್ಶನ ನಡೆಸುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ಉಡುಪಿ
ಭಾವಿ ಪರ್ಯಾಯ ಶಿರೂರು ಮಠದ ಪೀಠಾಧಿಪತಿಗಳಾದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಪರ್ಯಾಯ ಪೂರ್ವಭಾವಿಯಾಗಿ ಪುಣ್ಯ ಕ್ಷೇತ್ರ ಸಂದರ್ಶನ ನಡೆಸುತ್ತಿದ್ದು, ಕೋಲ್ಕತ್ತಾದ ರಾಮಕೃಷ್ಣ ಆಶ್ರಮಕ್ಕೆ ಭೇಟಿ ನೀಡಿದರು.ಸ್ವಾಮೀಜಿ ಅವರನ್ನು ಆಶ್ರಮದ ವತಿಯಿಂದ ಸ್ವಾಗತಿಸಿ ಸಭಾ ಕಾರ್ಯಕ್ರಮ ನಡೆಸಿ ಗೌರವಿಸಲಾಯಿತು. ಸ್ವಾಮೀಜಿ ಅವರು ಉಡುಪಿ ಶ್ರೀ ಕೃಷ್ಣನ ಮಹಿಮೆಯನ್ನು ಹಾಗೂ ಕೃಷ್ಣನ ಮೂರ್ತಿಯನ್ನು ಮಧ್ವಾಚಾರ್ಯರಿಂದ ಸ್ಥಾಪಿಸಲ್ಪಟ್ಟ ಬಗ್ಗೆ ಕಥೆಯನ್ನು ಆಶೀರ್ವಚನದಲ್ಲಿ ತಿಳಿಸಿದರು.
ಮಠದ ದಿವಾನರಾದ ಉದಯಕುಮಾರ್ ಸರಳತ್ತಾಯರು ಉಡುಪಿ ಶ್ರೀ ಕೃಷ್ಣ ಮಠದ ಪರ್ಯಾಯದ ಬಗ್ಗೆ ವಿಷಯವನ್ನು ತಿಳಿಸಿ ಎಲ್ಲಾ ಆಶ್ರಮ ವಿದ್ಯಾರ್ಥಿಗಳನ್ನು ಹಾಗೂ ಸನ್ಯಾಸಿಗಳನ್ನು ಹಾಗೂ ವಿದ್ಯಾರ್ಥಿಗಳನ್ನು ಪರ್ಯಾಯ ಸಂದರ್ಭದಲ್ಲಿ ಮಠಕ್ಕೆ ಆಹ್ವಾನಿಸಿದರು. ಆಶ್ರಮದ ಪ್ರಮುಖ ಸನ್ಯಾಸಿಗಳು, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಭೆಯಲ್ಲಿ ಸಂವಾದ ಕಾರ್ಯಕ್ರಮಗಳು ಸಹ ನಡೆದವು.ಮಠದ ಪಾರುಪತ್ತಿಗೆದಾರರಾದ ಶ್ರೀಶ ಭಟ್ ಕಡೆಕಾರು, ಕೆ. ರವೀಂದ್ರ ಆಚಾರ್ಯ ಹಾಗೂ ಅಕ್ಷಯ ಆಚಾರ್ಯರು ಉಪಸ್ಥಿತರಿದ್ದರು.