ಸಾರಾಂಶ
ಶಿರ್ವದ ಶ್ರೀಕ್ಷೇತ್ರ ಬಂಟಕಲ್ಲು ಶ್ರೀದುರ್ಗಾಪರಮೇಶ್ವರಿ ದೇವಳದಲ್ಲಿ ಶುಕ್ರವಾರ ಸಾರಸ್ವತ ಮಠ ಪರಂಪರೆಯ ಆದ್ಯಗುರು ಪೀಠ ಶ್ರೀಸಂಸ್ಥಾನ ಗೌಡ ಪಾದಾಚಾರ್ಯ ಶ್ರೀಕೈವಲ್ಯ ಮಠ ಗೋವಾ ಇಲ್ಲಿನ ೭೬ನೇ ಪೀಠಾಧಿಪತಿಗಳಾದ ಶ್ರೀಮದ್ ಸಚ್ಚಿದಾನಂದ ಸರಸ್ವತಿ ಸ್ವಾಮೀ ಮಹಾರಾಜ್‌ರವರ ೨೦ನೇ ಆರಾಧನಾ ಪುಣ್ಯತಿಥಿಯಂದು ವಿಶೇಷ ಪೂಜೆ, ಗುರು ಸಂಸ್ಮರಣೆ ನಡೆಯಿತು.
ಕನ್ನಡಪ್ರಭ ವಾರ್ತೆ ಕಾಪು
ಇಲ್ಲಿನ ಶಿರ್ವದ ಶ್ರೀಕ್ಷೇತ್ರ ಬಂಟಕಲ್ಲು ಶ್ರೀದುರ್ಗಾಪರಮೇಶ್ವರಿ ದೇವಳದಲ್ಲಿ ಶುಕ್ರವಾರ ಸಾರಸ್ವತ ಮಠ ಪರಂಪರೆಯ ಆದ್ಯಗುರು ಪೀಠ ಶ್ರೀಸಂಸ್ಥಾನ ಗೌಡ ಪಾದಾಚಾರ್ಯ ಶ್ರೀಕೈವಲ್ಯ ಮಠ ಗೋವಾ ಇಲ್ಲಿನ ೭೬ನೇ ಪೀಠಾಧಿಪತಿಗಳಾದ ಶ್ರೀಮದ್ ಸಚ್ಚಿದಾನಂದ ಸರಸ್ವತಿ ಸ್ವಾಮೀ ಮಹಾರಾಜ್‌ರವರ ೨೦ನೇ ಆರಾಧನಾ ಪುಣ್ಯತಿಥಿಯಂದು ವಿಶೇಷ ಪೂಜೆ, ಗುರು ಸಂಸ್ಮರಣೆ ನಡೆಯಿತು.ಶ್ರೀ ಕ್ಷೇತ್ರದ ವೈದಿಕರಾದ ಶ್ರೀಕಾಂತ್ ಭಟ್, ಧಾರ್ಮಿಕ ಪೂಜಾನುಷ್ಠಾನ ನೆರವೇರಿಸಿದರು.
ಈ ಸಂದರ್ಭ ಕ್ಷೇತ್ರದ ವೈದಿಕರಾದ ಮಂಜುನಾಥ್ ಭಟ್, ಆಡಳಿತ ಮೊಕ್ತೇಸರರಾದ ಜಯರಾಮ ಪ್ರಭು ಗಂಪದಬೈಲು ಸೂಡ, ಆಡಳಿತ ಮಂಡಳಿ ಸದಸ್ಯರಾದ ಸಂತೋಷ್ ನಾಯಕ್ ಪಳ್ಳಿ, ಶಿವರಾಮ ನಾಯಕ್ ಮೂಡುಬೆಳ್ಳೆ, ಸತ್ಯನಾರಾಯಣ ನಾಯಕ್ ಆತ್ರಾಡಿ, ಸುರೇಂದ್ರ ನಾಯಕ್ ಬೆಳಂಜಾಲೆ, ರಾಜಾಪುರ ಸಾರಸ್ವತ ಸೇವಾ ವೃಂದದ ಕಾರ್ಯದರ್ಶಿ ವಿಶ್ವನಾಥ್ ಬಾಂದೇಲ್ಕರ್, ಶಂಕರ ನಾಯಕ್, ಡಾ. ವಿಠಲ್ ನಾಯಕ್, ಸಂಕೇತ್ ಪ್ರಭು, ರಮೇಶ್ಚಂದ್ರ ಪಾಟ್ಕರ್ ಸಹಿತ ಸಮಾಜ ಬಾಂಧವರು ಉಪಸ್ಥಿತರಿದ್ದರು.