ಸಾರಾಂಶ
- 15ರಲ್ಲಿ ಬಾಕಿ 6 ಸ್ಥಾನಗಳಿಗೆ ಚುನಾವಣೆ । 2 ಕ್ಷೇತ್ರ ಫಲಿತಾಂಶ ಘೋಷಣೆಗೆ ತಡೆ- - - ಕನ್ನಡಪ್ರಭ ವಾರ್ತೆ ಹೊನ್ನಾಳಿ
ಪಟ್ಟಣದ ಪ್ರತಿಷ್ಟಿತ ಶಿವ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಯ 15 ನಿರ್ದೇಶಕರ ಸ್ಥಾನಗಳ ಪೈಕಿ 9 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು, ಉಳಿದ 6 ಸ್ಥಾನಗಳಿಗೆ ಭಾನುವಾರ ಚುನಾವಣೆ ನಡೆದು, ಫಲಿತಾಂಶ ಪ್ರಕಟಗೊಂಡಿದೆ.6 ಕ್ಷೇತ್ರಗಳ ಪೈಕಿ ನಾಲ್ಕು ಕ್ಷೇತ್ರಗಳ ಫಲಿತಾಂಶ ಘೋಷಣೆ ಮಾಡಲಾಗಿದೆ. ಉಳಿದ ಚೀಲೂರು ಮತ್ತು ಸಾಸ್ವೇಹಳ್ಳಿ ಕ್ಷೇತ್ರಗಳ ಫಲಿತಾಂಶ ಉಚ್ಛ ನ್ಯಾಯಾಲಯ ಆದೇಶದ ರೀತ್ಯಾ ಘೋಷಣೆ ತಡೆಹಿಡಿಯಲಾಗಿದೆ ಎಂದು ಚುನಾವಣಾಧಿಕಾರಿ ನವೀನ್‌ಕುಮಾರ್ ತಿಳಿಸಿದ್ದಾರೆ.
ವಿಜೇತರು:ಬೆನಕನಹಳ್ಳಿ (ಸಾಮಾನ್ಯ) ಎಚ್.ಜಿ. ರುದ್ರೇಶ್- 162 ಮತಗಳು, ಕುಂದೂರು ಕ್ಷೇತ್ರ (ಮಹಿಳಾ) ಗೀತಾ ಜಿ. ಗುರುರಾಜ್- 89 ಮತಗಳು, ಬೆಳಗುತ್ತಿ ಕ್ಷೇತ್ರ (ಹಿಂ ವರ್ಗ ಬ) ನಾಗರಾಜಪ್ಪ ಟಿ.- 69 ಮತಗಳು, ಸುರಹೊನ್ನೆ (ಸಾ) ಕ್ಷೇತ್ರ ಎಸ್. ಸದಾಶಿವಪ್ಪ- 49 ಮತ ಪಡೆದು ಜಯಗಳಿಸಿದ್ದಾರೆ ಎಂದು ತಿಳಿಸಿದರು.
ಅವಿರೋಧ ಆಯ್ಕೆ:ಎ.ಜಿ. ಪ್ರಕಾಶ್- ಅರಬಗಟ್ಟೆ ಕ್ಷೇತ್ರ, ಡಿ.ಪಿ. ರಂಗನಾಥ್- ಹೊನ್ನಾಳಿ ಕ್ಷೇತ್ರ, ಬಿ.ಜಿ. ಶಿವಮೂರ್ತಿ- ಅರಕೆರೆ ಕ್ಷೇತ್ರ, ಎಂ.ಜಿ. ಲೋಕೇಶ್- ಕೂಲಂಬಿ ಕ್ಷೇತ್ರ, ಮಂಜುಳಾ ವೀರಭದ್ರ ಪಾಟೀಲ್- ಗೋವಿನಕೋವಿ ಕ್ಷೇತ್ರ, ಗದ್ದಿಗೇಶಾಚಾರ್- ನ್ಯಾಮತಿ ಕ್ಷೇತ್ರ, ಗೋಪಾಲ ನಾಯ್ಕ- ಎಸ್ಸಿ ಮೀಸಲು ಕ್ಷೇತ್ರ, ಟಿ.ಎಂ. ಶಿವಾನಂದ್- ಎಸ್.ಟಿ. ಮೀಸಲು ಕ್ಷೇತ್ರ, ಟಿ.ಚಂದ್ರಪ್ಪ- ಸವಳಂಗ ಕ್ಷೇತ್ರದಿಂದ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ನವೀನ್‌ಕುಮಾರ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮುಖಂಡರಾದ ಅರಬಗಟ್ಟೆ ರಮೇಶ್, ವಿಜಯಕುಮಾರ್, ಬೆನಕನಹಳ್ಳಿ ಗಣೇಶ್, ಕುಂದೂರು ಗುರುರಾಜ್, ತಾ.ಪಂ. ಮಾಜಿ ಅಧ್ಯಕ್ಷ ಸಿದ್ದಪ್ಪ, ಶಿವ ಬ್ಯಾಂಕಿನ ಕಾರ್ಯದರ್ಶಿ ರುದ್ರೇಶ್ ಇತರರು ಹಾಜರಿದ್ದರು.- - -
ಬಾಕ್ಸ್ * ಯಶಸ್ವಿನಿ ವಿಮೆ ನೋಂದಣಿಗೆ ಅವಕಾಶ ಯಶಸ್ವಿನಿ ಆರೋಗ್ಯ ವಿಮಾ ಯೋಜನೆ ಜ.31ಕ್ಕೆ ಮುಕ್ತಾಯಗೊಂಡಿತ್ತು. ಆದರೆ ಸರ್ಕಾರ ಅದನ್ನು ಫೆ.1ರಿಂದ ಮಾರ್ಚ್ 31 ರವರೆಗೆ ವಿಸ್ತರಿಸಿ ಆದೇಶ ಮಾಡಿದೆ. ಆದ್ದರಿಂದ ಅವಳಿ ತಾಲೂಕಿನ ಎಲ್ಲ ಸಹಕಾರ ಸಂಘಗಳಲ್ಲಿ ನೋಂದಣಿ ಮಾಡಿಸಲು ಅವಕಾಶವಿದೆ ಎಂದು ಸಹಕಾರ ಅಭಿವೃದ್ಧಿ ಅಧಿಕಾರಿಯೂ ಆಗಿರುವ ನವೀನ್‌ಕುಮಾರ್ ಮಾಹಿತಿ ನೀಡಿದರು.- - -
-10ಎಚ್.ಎಲ್.ಐ1:ಹೊನ್ನಾಳಿ ಶಿವ ಬ್ಯಾಂಕ್‌ಗೆ ನಡೆದ ಚುನಾವಣೆ ವಿಜೇತ ನೂತನ ನಿರ್ದೇಶಕರನ್ನು ಅಭಿನಂದಿಸಲಾಯಿತು.