ಸಾರಾಂಶ
ಮಹಾಶಿವರಾತ್ರಿಯ ನಿಮಿತ್ತ ಸಮೀಪ ರಾಜ್ಯದ ಎರಡನೇ ದೊಡ್ಡ ಶಿವನ ಮೂರ್ತಿ ಹೊಂದಿರುವ ಮುಳ್ಳೂರಗುಡ್ಡದಲ್ಲಿರುವ ಶಿವನ ದೇವಸ್ಥಾನಕ್ಕೆ ಶುಕ್ರವಾರ ಲಕ್ಷಾಂತರ ಜನರು ಆಗಮಿಸಿ ದರ್ಶನ ಪಡೆದು ಪುನೀತರಾದರು.
ಕನ್ನಡಪ್ರಭ ವಾರ್ತೆ ರಾಮದುರ್ಗ
ಮಹಾಶಿವರಾತ್ರಿಯ ನಿಮಿತ್ತ ಸಮೀಪ ರಾಜ್ಯದ ಎರಡನೇ ದೊಡ್ಡ ಶಿವನ ಮೂರ್ತಿ ಹೊಂದಿರುವ ಮುಳ್ಳೂರಗುಡ್ಡದಲ್ಲಿರುವ ಶಿವನ ದೇವಸ್ಥಾನಕ್ಕೆ ಶುಕ್ರವಾರ ಲಕ್ಷಾಂತರ ಜನರು ಆಗಮಿಸಿ ದರ್ಶನ ಪಡೆದು ಪುನೀತರಾದರು.ಕಳೆದ 6 ವರ್ಷಗಳ ಹಿಂದೆ ಶಿವಪ್ರತಿಷ್ಠಾನದ ಅಧ್ಯಕ್ಷ, ಶಾಸಕ ಅಶೋಕ ಪಟ್ಟಣರ ಪರಿಶ್ರಮದಿಂದ ನಿರ್ಮಾಣವಾದ ಶಿವನಮೂರ್ತಿ ಕಳೆದೆರಡು ವರ್ಷಗಳ ಹಿಂದೆ ಲೋಕಾರ್ಪಣೆಗೊಂಡ ಬೃಹತ್ ನಂದಿ ವಿಗ್ರಹಕ್ಕೆ ಲಕ್ಷಾಂತರ ಜನರು ಶ್ರದ್ಧಾ ಭಕ್ತಿಯಿಂದ ಆಗಮಿಸಿ ದರ್ಶನ ಪಡೆದರು. ಮಹಿಳೆಯರು, ಮಕ್ಕಳು ಸೇರಿದಂತೆ ಬೆಳಿಗ್ಗೆಯಿಂದಲೇ ಶಿವನ ದರ್ಶನಕ್ಕೆ ಜನ ತಂಡೋಪತಂಡವಾಗಿ ಆಗಮಿಸಿ ದರ್ಶನ ಪಡೆಯುತ್ತಿರುವುದು ಕಂಡು ಬಂದಿತು. ಶಿವಪ್ರತಿಷ್ಠಾನ ಬೆಳಿಗ್ಗೆ ಅಭಿಷೇಕ, ಬಿಲ್ವಾರ್ಚನೆ ಸೇರಿದಂತೆ ವಿಶೇಷಪೂಜೆ ಮಾಡಿದರು. ಈ ಸಂದರ್ಭದಲ್ಲಿ ಶಿವಪ್ರತಿಷ್ಠಾನ ಅಧ್ಯಕ್ಷ ಅಶೋಕ ಪಟ್ಟಣ ಸೇರಿದಂತೆ ಪ್ರತಿಷ್ಠಾನದ ಎಲ್ಲ ಸದಸ್ಯರು ಇದ್ದರು.
ಶಿವನ ದರ್ಶನಕ್ಕೆ ಬರುವ ಲಕ್ಷಾಂತರ ಭಕ್ತರಿಗೆ ಮತ್ತು ಶಿವರಾತ್ರಿಯ ಪ್ರಯುಕ್ತ ಉಪವಾಸ ಆಚರಣೆ ಮಾಡುವವರಿಗಾಗಿ ಖರ್ಜೂರ, ಶೇಂಗಾ, ಸಾಬೂದಾನಿ ಹಾಗೂ ಬಾಳೆಹಣ್ಣು ಪ್ರಸಾದದ ವಿತರಣೆ ವ್ಯವಸ್ಥೆ ಮಾಡಿದ್ದು ವಿಶೇಷವಾಗಿತ್ತು.ಸಂಜೆ ಸಾಧಕರಿಗೆ ಸನ್ಮಾನ, ಮನರಂಜನೆ ಜೊತೆಗೆ ಶಿವನ ಕುರಿತು ವಿಶೇಷ ಪ್ರವಚನ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಜಿಲ್ಲೆಯ ಪ್ರಮುಖರು ಆಗಮಿಸಿ ಜನತೆಗೆ ಮಹಾಶಿವರಾತ್ರಿಯ ಶುಭಾಶಯಗಳನ್ನು ಕೋರಿದರು.